Friday, 23rd February 2024

RRR ಸಿನೆಮಾದ ಬ್ರಿಟಿಷ್ ಗವರ್ನರ್ ಪಾತ್ರಧಾರಿ ರೇ ಸ್ಟೀವನ್ಸನ್ ನಿಧನ

ನವದೆಹಲಿ: ಎಸ್.ಎಸ್.ರಾಜಮೌಳಿ ನಿರ್ದೇಶನದ RRR ಸಿನೆಮಾದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಬಕ್ಸ್ಟನ್ ಪಾತ್ರದ ಮೂಲಕ ಭಾರತದಾದ್ಯಂತ ಹೆಸರುವಾಸಿಯಾಗಿದ್ದ ಹೆಸರಾಂತ ನಟ ರೇ ಸ್ಟೀವನ್ಸನ್ (58) ನಿಧನರಾದರು.

ಇಟಾಲಿಯನ್ ದ್ವೀಪ ಇಶಿಯಾದಲ್ಲಿ ಚಿತ್ರೀಕರಣದ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಯಾಗಿದೆ. 59 ನೇ ಹುಟ್ಟುಹಬ್ಬದ ನಾಲ್ಕು ದಿನಗಳ ಮೊದಲು  ಮೃತಪಟ್ಟಿದ್ದಾರೆ.

”ತಂಡದಲ್ಲಿರುವ ನಮಗೆಲ್ಲರಿಗೂ ಆಘಾತಕಾರಿ ಸುದ್ದಿ! ರೆಸ್ಟ್ ಇನ್ ಪೀಸ್ ರೇ ಸ್ಟೀವನ್ಸನ್. ನೀವು ನಮ್ಮ ಹೃದಯದಲ್ಲಿ ಶಾಶ್ವತ ವಾಗಿ ಉಳಿಯುತ್ತೀರಿ, SIR SCOTT. ಎಂದು ಟ್ವೀಟಿಸಿದೆ.

ನಿರ್ದೇಶಕ ರಾಜಮೌಳಿ ಕೂಡ ತಮ್ಮ ದುಃಖವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ರೇ ಅವರು ತುಂಬಾ ಶಕ್ತಿ ಮತ್ತು ಚೈತನ್ಯವನ್ನು ಸೆಟ್‌ಗಳಿಗೆ ತಂದರು. ಅವರೊಂದಿಗೆ ಕೆಲಸ ಮಾಡುವುದು ಶುದ್ಧ ಸಂತೋಷ. ನನ್ನ ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟಿಸಿದ್ದಾರೆ.

ನಟ ಸ್ಟೀವನ್ಸನ್ 1964 ರಲ್ಲಿ ಉತ್ತರ ಐರ್ಲೆಂಡ್‌ನ ಲಿಸ್ಬರ್ನ್‌ನಲ್ಲಿ ಜನಿಸಿದರು. ಅವರು ಎಂಟು ವರ್ಷದವಳಿದ್ದಾಗ ಇಂಗ್ಲೆಂಡ್‌ಗೆ ತೆರಳಿದ್ದರು. 1990 ರ ದಶಕದ ಆರಂಭದಲ್ಲಿ ಯುರೋಪಿಯನ್ ಟಿವಿ ಸಿರೀಸ್ ಗಳು ಹಾಗೂ ಟೆಲಿಫಿಲ್ಮ್‌ಗಳಲ್ಲಿ ಕಾಣಿಸಿಕೊಂಡು ವೃತ್ತಿಜೀವನ ಆರಂಭಿಸಿದರು.

error: Content is protected !!