Friday, 2nd June 2023

ಪತಿ, ಮಗನೊಂದಿಗೆ ಮೆಕ್ಕಾ, ಮದೀನಾಗೆ ಸಂಜನಾ ಗಲ್ರಾನಿ ಭೇಟಿ

ಮೆಕ್ಕಾ: ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅಲಿಯಾಸ್ ಮಹಿರಾ ಪತಿ ಮತ್ತು ಮಗನೊಂದಿಗೆ ಮೆಕ್ಕಾ, ಮದೀನಾಗೆ ಭೇಟಿ ನೀಡಿದ್ದು, ಈ ಫೋಟೋಗಳನ್ನ ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಡಾ.ಅಜೀಜ್ ಪಾಷಾರನ್ನ ಪ್ರೀತಿಸಿ ಮದುವೆಯಾದ ನಟಿ ಸಂಜನಾ ಮಗ ಅಲಾರಿಕ್’ನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗನ ಆರೈಕೆಯ ಜೊತೆಗೆ ಮಲಯಾಳಂ ಚಿತ್ರದ ಮೂಲಕ ಸಂಜನಾ ನಟನೆಗೆ ಕಂಬ್ಯಾಕ್ ಆಗಿದ್ದಾರೆ.

ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾ, ಮದೀನಾಗೆ ಕುಟುಂಬದ ಜೊತೆ ಸಂಜನಾ ಭೇಟಿ ನೀಡಿದ್ದಾರೆ. ನಟಿ, ಮೆಕ್ಕಾ ಮದೀನಾ ಭೇಟಿಯ ವಿಡಿಯೋವನ್ನು ಅವರ ಯೂಟ್ಯೂಬ್ ಚಾನೆಲ್ ಮೂಲಕವಾಗಿ ಹಂಚಿಕೊಂಡಿದ್ದಾರೆ.

ಮೇ.19 ರಂದು ಮಗ ಅಲಾರಿಕ್ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಜನಾ ಗಲ್ರಾನಿ ಪವಿತ್ರ ಯಾತ್ರಾಸ್ಥಳ ಮೆಕ್ಕಾದಲ್ಲಿ ಆಚರಿಸಿದ್ದಾರೆ. 2018ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಮಹಿರಾ ಎಂದು ಬದಲಿಸಿಕೊಂಡಿದ್ದಾರೆ ನಟಿ ಸಂಜನಾ ಗಲ್ರಾನಿ.

error: Content is protected !!