Saturday, 27th April 2024

2,745 ಹೊಸ ಕೋವಿಡ್ ಪ್ರಕರಣ ದೃಢ

covid

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 2,745 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 6 ಮಂದಿ ಸೋಂಕಿ ತರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 4,31,60,832 ಕ್ಕೆ ಏರಿಕೆಯಾಗಿದೆ. ಆ ಪೈಕಿ 5,24,636 ಮಂದಿ ಮೃತಪಟ್ಟಿದ್ದಾರೆ.

ಇದುವರೆಗೆ 4,26,17,810ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 18,386 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ 5,708, ಮಹಾರಾಷ್ಟ್ರದಲ್ಲಿ 3,475, ಕರ್ನಾಟಕದಲ್ಲಿ 2,029, ದೆಹಲಿಯಲ್ಲಿ 1,603, ಹರಿಯಾಣದಲ್ಲಿ 916, ಉತ್ತರ ಪ್ರದೇಶದಲ್ಲಿ 872 ಸಕ್ರಿಯ ಪ್ರಕರಣಗಳಿವೆ. ದೇಶದಾದ್ಯಂತ ಒಟ್ಟು 193.57 ಕೋಟಿ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.

error: Content is protected !!