Saturday, 27th July 2024

ಬಿಬಿಸಿ ಸಾಕ್ಷ್ಯಚಿತ್ರಕ್ಕೆ ನಿರ್ಬಂಧ: ಪಿಐಎಲ್‌ ಸಲ್ಲಿಕೆ

ನವದೆಹಲಿ: ಗುಜರಾತ್ ಗಲಭೆ (2002) ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಂದ ಆದಷ್ಟು ಬೇಗ ವಿಚಾರಣೆ ನಡೆಸುವಂತೆ ವಕೀಲ ಎಂಎಲ್ ಶರ್ಮಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಬಿಬಿಸಿ ನಿರ್ಮಿಸಿರುವ ಇಂಡಿಯಾ, ದಿ ಮೋದಿ ಕ್ವೆಶ್ಚನ್ ಸಾಕ್ಷ್ಯಚಿತ್ರ ನಿರ್ಬಂಧ ಅಕ್ರಮ, ಅಸಂವಿಧಾನಿಕ, ನಿರಂಕುಶದ ಕ್ರಮ ವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಅರ್ಜಿಯನ್ನು ಫೆಬ್ರವರಿ 6ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
error: Content is protected !!