Saturday, 27th July 2024

ವಿಚ್ಚೇದನ ಪಡೆಯಲು ಒಪ್ಪಿಗೆ ಇದ್ದಲ್ಲಿ 6 ತಿಂಗಳು ಕಾಯಬೇಕೆಂದಿಲ್ಲ

ನವದೆಹಲಿ: ವಿವಾಹ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಸೋಮವಾರ ಮಹತ್ವದ ಆದೇಶ ಪ್ರಕಟಿಸಿತು. ವಿಚ್ಚೇದನ ಪಡೆಯಲು ದಂಪತಿಗೆ ಪರಸ್ಪರ ಒಪ್ಪಿಗೆ ಇದ್ದಲ್ಲಿ 6 ತಿಂಗಳು ಕಾಯಬೇಕೆಂದಿಲ್ಲ.

ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಇಲ್ಲದೆಯೇ ಸುಪ್ರೀಂ ಕೋರ್ಟ್​ ತನ್ನ ಪರಮಾಧಿಕಾರ ಬಳಸಿ ವಿಚ್ಚೇದನವನ್ನು ಊರ್ಜಿತಗೊಳಿಸಬಹುದು ಎಂದು ತೀರ್ಪು ನೀಡಿದೆ.

ದಂಪತಿ ನಡುವಿನ “ವೈವಾಹಿಕ ಜೀವನವನ್ನು ಮತ್ತೆ ಸರಿಪಡಿಸಲಾಗದ ಸನ್ನಿವೇಶವಿದ್ದರೆ” ಸುಪ್ರೀಂ ಕೋರ್ಟ್​ ಆ ಜೋಡಿಗೆ ವಿಚ್ಚೇದನ ನೀಡಬಹುದು. ವಿಶೇಷಾಧಿಕಾರದ ಮೂಲಕ ವಿವಾಹವನ್ನು ಅನೂರ್ಜಿತಗೊಳಿಸುವ ಅವಕಾಶ ಸುಪ್ರೀಂ ಕೋರ್ಟ್‌ಗೆ ಇದೆ. ಇದರಡಿ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಕೋರಿದ ದಂಪತಿಗೆ 6 ತಿಂಗಳ ಒಳಗೇ ಕೆಲವು ಷರತ್ತುಗಳಿಗೆ ಒಳಪಟ್ಟು ವಿಚ್ಚೇದನ ನೀಡಬಹುದು ಎಂದು ಸಾಂವಿಧಾನಿಕ ಪೀಠ ಆದೇಶಿಸಿತು.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾ.ಸಂಜೀವ್ ಖನ್ನಾ, ನ್ಯಾ.ಎ.ಎಸ್.ಓಕಾ, ನ್ಯಾ.ವಿಕ್ರಮ್ ನಾಥ್ ಮತ್ತು ನ್ಯಾ.ಜೆ.ಕೆ.ಮಹೇಶ್ವರಿ ಅವರಿದ್ದ ಪೀಠ ಸೋಮವಾರ ಆದೇಶ ನೀಡಿದೆ.

ಹಿಂದು ವಿವಾಹ ಕಾಯಿದೆಯ ಪ್ರಕಾರ, ವಿವಾಹ ವಿಚ್ಚೇದನ ಪಡೆಯುವ ದಂಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ 6 ತಿಂಗಳು ಕಡ್ಡಾಯ ಕಾಯುವಿಕೆ ಬಳಿಕ ವಿಚ್ಚೇದನ ಪಡೆದುಕೊಳ್ಳಬೇಕು. ಇದಕ್ಕೂ ಮೊದಲು ಪಡೆಯುವ ಯಾವುದೇ ವಿಚ್ಚೇದನಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂಬುದು ಕಾನೂನಿನಲ್ಲಿದೆ.

ಹಿಂದೂ ವಿವಾಹ ಕಾಯಿದೆ ಪ್ರಕಾರ ದಂಪತಿ ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸ ಬೇಕಾಗುತ್ತದೆ. ಪ್ರಕರಣಗಳಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಸೂಚಿಸಿ, ಅರ್ಜಿ ಸಲ್ಲಿಸಿದ ಬಳಿಕ 6 ತಿಂಗಳು ಕಾಯುವ ಅವಧಿ ಕಾನೂನಿ ನಲ್ಲಿ ಕಡ್ಡಾಯವಾಗಿದೆ.

error: Content is protected !!