Sunday, 16th June 2024

ಜಂಟಿ ಕಾರ್ಯಾಚರಣೆ: 10 ಲಕ್ಷ ರೂ. ಮೌಲ್ಯದ ನಕಲಿ ನಾಣ್ಯ ವಶ

ಮುಂಬೈ: ದಿಂಡೋಶಿ ಪೊಲೀಸರು ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 42 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮುಂಬೈನ ಮಲಾಡ್ ಪ್ರದೇಶದಲ್ಲಿ ಆತನ ಕಾರಿನಿಂದ 10 ಲಕ್ಷ ರೂಪಾಯಿ ಮೌಲ್ಯದ ನಕಲಿ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಗ್ನೇಶ್ ಗಾಲಾ ಎಂಬ ಆರೋಪಿಯನ್ನು ಮುಂಬೈನ ದಿಂಡೋಶಿ ಪೊಲೀಸ್ ಠಾಣೆ ವ್ಯಾಪ್ತಿಯ ಪುಷ್ಪಾ ಪಾರ್ಕ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಆತನ ಬಳಿಯಿದ್ದ 1 ರಿಂದ 5 ಹಾಗೂ 10 ರೂ.ವರೆಗಿನ ಸುಮಾರು 10 ಲಕ್ಷ ನಕಲಿ ತಾಮ್ರ ಮತ್ತು ಹಿತ್ತಾಳೆಯ ನಾಣ್ಯ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹರಿಯಾಣದಲ್ಲಿ ನಾಣ್ಯ ತಯಾರಿಕಾ ಕಾರ್ಖಾನೆಯನ್ನು ನಡೆಸಲಾಗುತ್ತಿರುವ ಸುಳಿವು ಸಿಗುತ್ತಿದ್ದಂತೆಯೇ ದೆಹಲಿಯ ವಿಶೇಷ ಸೆಲ್ ಕಾರ್ಯಾಚರಣೆಗೆ ಇಳಿದು 5 ಜನರನ್ನು ಬಂಧಿ ಸಿದೆ. ಆರೋಪಿಗಳು ಮುಂಬೈನಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಹಣಕ್ಕೆ ಬದಲಾಗಿ ದೊಡ್ಡ ಪ್ರಮಾಣದಲ್ಲಿ ನಕಲಿ ನಾಣ್ಯಗಳನ್ನು ಸರಬರಾಜು ಮಾಡುತ್ತಿದ್ದರು.

ದಿಂಡೋಶಿ ಪೊಲೀಸ್ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲಿ ನಾಣ್ಯಗಳ ವ್ಯಾಪಾರ ನಡೆಯುತ್ತಿರುವ ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾರಣೆ ನಡೆಸಿದೆ.

error: Content is protected !!