Friday, 26th July 2024

ಠಾಣೆ ಮೇಲೆ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿ

ಮೊಹಾಲಿ: ಪಂಜಾಬ್​​ನ ತರಣ್​ ತಾರಣ್​ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿಯಾಗಿದೆ.

ತರಣ್​ ತಾರಣ್​ ಜಿಲ್ಲೆಯ ಗಡಿ ಭಾಗದ ಅಮೃತ್​ಸರ್​-ಭಟಿಂಡಾ ಹೆದ್ದಾರಿಯಲ್ಲಿರುವ ಸರಹಲಿ ಪೊಲೀಸ್ ಠಾಣೆ ಮೇಲೆ ಗ್ರೇನೇಡ್​ ದಾಳಿ ಮಾಡಲಾಗಿದೆ.

ಠಾಣೆಯ ಹೊರಭಾಗದಲ್ಲಿರುವ ಕಂಬವೊಂದಕ್ಕೆ ರಾಕೆಟ್​ ಬಂದು ಬಡಿದು, ಮರಳಿ ಪುಟಿ ದಿದ್ದರಿಂದ ಹೆಚ್ಚೇನೂ ತೊಂದರೆ ಯಾಗಲಿಲ್ಲ. ಪೊಲೀಸ್​ ಠಾಣೆಯ ಬಾಗಿಲಿನ ಗಾಜು ಒಡೆದು ಹೋಗಿದ್ದು ಬಿಟ್ಟರೆ, ಕಟ್ಟಡವೂ ಜಾಸ್ತಿ ಹಾನಿಯಾಗಿಲ್ಲ. ಆದರೆ ಪೊಲೀಸ್ ಠಾಣೆ ಬಳಿಯೇ ಇದ್ದ ಒಂದು ಸೇವಾಕೇಂದ್ರದ ಕಿಟಕಿಯೂ ಒಡೆದಿದೆ ಎಂದು ವರದಿಯಾಗಿದೆ.

ಇನ್ನು ಗ್ರೆನೇಡ್​ ದಾಳಿಯ ಮಾಹಿತಿ ಬರುತ್ತಿದ್ದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು, ಡಿಜಿಪಿ ಗೌರವ್ ಯಾದವ್​ ಮತ್ತು ವಿಧಿ ವಿಜ್ಞಾನ ತಂಡದ ಸಿಬ್ಬಂದಿ ಠಾಣೆಗೆ ಆಗಮಿಸಿದ್ದಾರೆ. ತನಿಖೆ ಪ್ರಾರಂಭವಾಗಿದೆ. ಈ ದಾಳಿಯ ಹಿಂದೆ ಪಾಕಿಸ್ತಾನಿ ಗುಪ್ತಚರ ಇಲಾಖೆ ಐಎಸ್​ಐ ಆಶ್ರಯ ದಲ್ಲಿರುವ ಖಲಿಸ್ತಾನಿಗಳ ಕೈವಾಡವಿದೆ. ಖಲಿಸ್ತಾನಿ ಬೆಂಬಲಿತ ಭಯೋತ್ಪಾದಕರೇ ಈ ದಾಳಿ ನಡೆಸಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.

ಇದೇ ವರ್ಷ ಮೇ ತಿಂಗಳಲ್ಲಿ ಪಂಜಾಬ್​​ನ ಮೊಹಾಲಿಯಲ್ಲಿರುವ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆ ಹೀಗೆ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿಯಾಗಿತ್ತು.

error: Content is protected !!