Tuesday, 23rd April 2024

2024ರಲ್ಲಿ ಜನಸೇನಾ ಪಕ್ಷದ ಸ್ಪರ್ಧೆ ಖಚಿತ: ಪವನ್ ಕಲ್ಯಾಣ್

ಅಮರಾವತಿ: ಆಂಧ್ರಪ್ರದೇಶ ಚುನಾವಣೆ(2024ರ) ಯಲ್ಲಿ ತಮ್ಮ ಜನಸೇನಾ ಪಕ್ಷದ ಸ್ಪರ್ಧೆ ಖಚಿತ ಎಂದು ಪಕ್ಷದ ಸಂಸ್ಥಾಪಕ ಮತ್ತು ನಟ ಪವನ್ ಕಲ್ಯಾಣ್ ಹೇಳಿದ್ದಾರೆ.

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ‘ಜನ ಸೇನಾ‘ ಪಕ್ಷವು ಸ್ಪರ್ಧಿಸಲಿದೆ ಎಂದು ಪವನ್ ಕಲ್ಯಾಣ್ ಘೋಷಿಸಿದ್ದು, ಪೂರ್ವ ಗೋದಾವರಿ ಜಿಲ್ಲೆಯ ಕತಿಪುಡಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ‘ಜನ ಸೇನಾ‘ ಪಕ್ಷವು ವಿಧಾನಸಭೆಯನ್ನು ಪ್ರವೇಶಿಸಲಿದ್ದು, ಹೆಜ್ಜೆ ಗುರುತುಗಳನ್ನು ಮೂಡಿಸಲಿದೆ. ಸಾಧ್ಯವಾದಷ್ಟು ಜನರ ಪರವಾಗಿ ನಿಲುತ್ತೇವೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದ ಮೂಲಕ ಚುನಾವಣಾ ಯಾತ್ರೆ ‘ವಾರಾಹಿ‘ಯನ್ನು ಆರಂಭಿಸಲಾಗಿದೆ. ಅನ್ನವರಂ ನಿಂದ ಆರಂಭವಾಗಿರುವ ಜನಸೇನಾ ಯಾತ್ರೆಯು ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ಅಂತ್ಯಗೊಳ್ಳಲಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಸೋತ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಭೀಮಾವರಂ ಕೂಡ ಒಂದಾಗಿದೆ. ಆದರೆ ಷಡ್ಯಂತ್ರದಿಂದ ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಕಲ್ಯಾಣ್ ಆರೋಪಿಸಿದ್ದಾರೆ.

2019ರ ಚುನಾವಣೆಯಲ್ಲಿ ರಾಪಾಕ ವರಪ್ರಸಾದ್ ಎಂಬುವವರ ಮೂಲಕ ‘ಜನ ಸೇನಾ‘ ಕೇವಲ ಒಂದು ವಿಧಾನಸಭಾ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

error: Content is protected !!