Saturday, 27th July 2024

ಇಪಿಎಫ್‌ಒ ಕಚೇರಿಯಲ್ಲಿ ಲಂಚ ಸ್ವೀಕಾರ: ಓರ್ವನ ಬಂಧನ

ಹರಿಯಾಣ: ಪಿಎಫ್‌ ಇಲಾಖೆಯ ಇಪಿಎಫ್‌ಒ ಕಚೇರಿಯಲ್ಲಿ ನಿರ್ವಹಿಸುವ ಅಧಿಕಾರಿ 1 ಲಕ್ಷ ರೂ. ಲಂಚ ಪಡೆಯವ ವೇಳೆ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಅಧಿಕಾರಿಯನ್ನು ಅನಿಲ್‌ ಕುಮಾರ್‌ ಎಂದು ಗುರುತಿಸಲಾಗಿದೆ.

ಆತನ ಸಹಚರ ಹಾಗೂ ಕಚೇರಿಯ ಸಹೋದ್ಯೋಗಿಯೊಬ್ಬರನ್ನು ಕೂಡ ಸಿಬಿಐ ಬಂಧಿಸಿದೆ. ವ್ಯಾಜ್ಯವೊಂದನ್ನು ಶೀಘ್ರವಾಗಿ ಇತ್ಯರ್ಥ ಪಡಿಸಿ ಕೊಡುವು ದಾಗಿ ಹೇಳಿ, ವ್ಯಕ್ತಿಯೊಬ್ಬರಿಂದ ಅನಿಲ್‌ 1 ಲಕ್ಷ ರೂ. ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಕಂಪನಿಯೊಂದನ್ನು ನಡೆಸುತ್ತಿದ್ದ ವ್ಯಕ್ತಿ ವಿರುದ್ಧ ಇಪಿಎಫ್‌ಒ ಕಚೇರಿ ವಿಚಾರಣೆ ಆರಂಭಿಸಿತ್ತು. ಸಿಪಿಸಿ ಅಡಿಯಲ್ಲಿ ಕಂಪನಿಯ ಪಿಎಫ್‌ ಪಾವತಿ ವಿರುದ್ಧ ತನಿಖೆ ನಡೆಸಲಾಗುತ್ತಿತ್ತು. ಎಲ್ಲ ಪಿಂಚಣಿ ಮೊತ್ತವನ್ನು ಪಾವತಿಸಿದ್ದರೂ, ತನ್ನ ಮೇಲೆ ಯಾಕೆ ವಿಚಾರಣೆ ಎಂದು ಕಂಪನಿಯ ಮಾಲೀಕ ಪ್ರಶ್ನಿಸಿ ದಾಗ, ಅಧಿಕಾರಿ ಅನಿಲ್‌ ವ್ಯಾಜ್ಯ ಸೃಷ್ಟಿಯಾಗಿದೆ ಎಂದು ನಂಬಿಸಿದ್ದರು. ಇದರ ಇತ್ಯರ್ಥಕ್ಕೆ 1 ಲಕ್ಷ ರೂ. ನೀಡಲು ಬೇಡಿಕೆ ಇರಿಸಿದ್ದರು.

ಇದನ್ನು ಖಂಡಿಸಿ ಕಂಪನಿ ಮಾಲೀಕ, ಸಿಬಿಐ ಕಚೇರಿಗೆ ತೆರಳಿ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ದೂರು ನೀಡಿದ್ದರು. ಸಿಬಿಐ ಅಧಿಕಾರಿಗಳಿಗೆ ಪಿಎಫ್‌ ಅಧಿಕಾರಿ ಮೇಲೆ ಅನುಮಾನ ಬಂದು, ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ರೆಡ್‌ ಹ್ಯಾಂಡ್‌ ಆಗಿ ಅನಿಲ್‌ನನ್ನು ಬಂಧಿಸಲಾಗಿದೆ.

error: Content is protected !!