Saturday, 27th July 2024

ಕಾಣಿಕೆ ಹುಂಡಿಗೆ 2 ಸಾವಿರ ರುಪಾಯಿ ನೋಟು ಹಾಕದಂತೆ ಮನವಿ

ಶಿರಡಿ (ಮಹಾರಾಷ್ಟ್ರ) : ಭಾರತೀಯ ರಿಸರ್ವ್‌ ಬ್ಯಾಂಕ್  2,000 ರುಪಾಯಿ ಕರೆನ್ಸಿ ನೋಟನ್ನು ರದ್ದುಪಡಿಸಿರುವ ಹಿನ್ನೆಲೆ ಯಲ್ಲಿ ಶಿರಡಿಯ ಸಾಯಿಬಾಬಾ ದೇವಸ್ಥಾನದ ಕಾಣಿಕೆ ಹುಂಡಿಗೆ 2 ಸಾವಿರ ರುಪಾಯಿ ನೋಟುಗಳನ್ನು ಹಾಕದಂತೆ ಶ್ರೀ ಸಾಯಿ ಸಂಸ್ಥಾನ ಭಕ್ತರಲ್ಲಿ ಮನವಿ ಮಾಡಿದೆ.

ಮೇ 19 ರಂದು ಆರ್‌ಬಿಐ ದೇಶದಲ್ಲಿ ಎರಡು ಸಾವಿರದ ನೋಟುಗಳನ್ನು ನಿಷೇಧಿಸುವ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಸಾಯಿ ಭಕ್ತರು 2,000 ರುಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಆರ್‌ಬಿಐ​ ಹಿಂಪಡೆ ದಿರುವುದನ್ನು ಗಮನಿಸಬೇಕು. ದೇವರ ಕಾಣಿಕೆ ಪೆಟ್ಟಿಗೆಯಲ್ಲಿ ಚಾಲ್ತಿಯಲ್ಲಿರುವ ನೋಟು ಗಳನ್ನು ಹಾಕುವಂತೆ ಕೇಳಿಕೊಂಡಿದ್ದಾರೆ.

ಈ ವರ್ಷದ ಸೆಪ್ಟೆಂಬರ್​ 30ರ ಒಳಗೆ ಬ್ಯಾನ್ ಆಗಿರುವ ನೋಟುಗಳನ್ನು ಬ್ಯಾಂಕ್‌ಗೆ ಜಮೆ ಅಥವಾ ವಿನಿಮಯ ಮಾಡಿಕೊಳ್ಳು ವಂತೆ ಜನರಿಗೆ ಸೂಚಿಸಲಾಗಿದೆ. ಸಾಮಾನ್ಯವಾಗಿ, ಶಿರಡಿ ಸಾಯಿಬಾಬಾ ಭಕ್ತರು ಕಾಣಿಕೆ ಡಬ್ಬಿಯಲ್ಲಿ ಹಣ, ಆಭರಣ ಹಾಗು ಬೆಲೆ ಬಾಳುವ ಇನ್ನಿತರೆ ವಸ್ತುಗಳನ್ನು ಹಾಕುತ್ತಾರೆ.

2016 ರ ನೋಟು ಅಮಾನ್ಯೀಕರಣದ ಸಮಯದಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದ್ದರೂ ಆ ಮಾರ್ಗವನ್ನು ಹೆಚ್ಚಿನವರು ಬಳಸದೇ, ಸಾಯಿ ಭಕ್ತರು ಸಾಯಿಬಾಬಾ ಸಂಸ್ಥಾನದ ದೇಣಿಗೆ ಪೆಟ್ಟಿಗೆಗೆ ಹಾಕಿದ್ದರು. ಅಂದು ಸಾಯಿ ಸಂಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ ಅವಧಿ ಮುಗಿದರೂ ಸುಮಾರು 71 ಲಕ್ಷ ರೂ ಮೌಲ್ಯದ ಕರೆನ್ಸಿ ಸಂಗ್ರಹವಾಗಿತ್ತು.

ಹೀಗಾಗಿ ಸಂಸ್ಥಾನವು ಇದೀಗ ರದ್ದಾಗಿರುವ ₹ 2000 ನೋಟಿನ ನಂತರ ಎಚ್ಚೆತ್ತುಕೊಂಡಿದೆ. ಹೀಗಾಗಿ ಮೊದಲೇ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.

ಸಾಯಿಬಾಬಾ ದೇವಾಲಯ ಸಂಸ್ಥಾನ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇಣಿಗೆ ಎಣಿಕೆ ಸಂಗ್ರಹಿಸುತ್ತದೆ.

error: Content is protected !!