Saturday, 27th July 2024

ಹಿ.ಪ್ರದೇಶ ಸಿಎಂ ಆಗಿ ಸುಖವಿಂದರ್ ಸಿಂಗ್ ಪ್ರಮಾಣ ವಚನ ನಾಳೆ

ಶಿಮ್ಲಾ: ಕಾಂಗ್ರೆಸ್‌ನ ಸುಖವಿಂದರ್ ಸಿಂಗ್ ಸುಖು (58) ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಹಿಮಾಚಲ ಪ್ರದೇಶದಲ್ಲಿ ಪಕ್ಷದ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿದ್ದ ಕಾಂಗ್ರೆಸ್‌ನ ಸುಖ ವಿಂದರ್ ಸಿಂಗ್ ಸುಖು ಅವರು  ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.

ಐದು ಬಾರಿ ಶಾಸಕರಾಗಿರುವ ಮುಖೇಶ್ ಅಗ್ನಿಹೋತ್ರಿ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಉಪ ಮುಖ್ಯಮಂತ್ರಿ ನಿಯೋಜಿತ ಮುಖೇಶ್ ಅಗ್ನಿಹೋತ್ರಿ ಮತ್ತು ನಾನು ತಂಡವಾಗಿ ಕೆಲಸ ಮಾಡುತ್ತೇನೆ.

ನಾನು 17 ನೇ ವಯಸ್ಸಿನಲ್ಲಿ ನನ್ನ ರಾಜಕೀಯ ಜೀವನ ಪ್ರಾರಂಭಿಸಿದೆ. ಕಾಂಗ್ರೆಸ್ ಪಕ್ಷವು ನನಗಾಗಿ ಏನೇನು ಮಾಡಿದೆ ಎಂಬುದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸುಖವಿಂದರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

error: Content is protected !!