Sunday, 26th May 2024

ಜನವರಿ 1 ರವರೆಗೆ ಸುಪ್ರೀಂ ಕೋರ್ಟ್ ಗೆ ಚಳಿಗಾಲದ ರಜೆ

ನವದೆಹಲಿ: ಡಿಸೆಂಬರ್ 17 ರಿಂದ ಜನವರಿ 1 ರವರೆಗೆ ಸುಪ್ರೀಂ ಕೋರ್ಟ್ ಗೆ ಚಳಿಗಾಲದ ರಜೆ ನೀಡಲಾಗಿದ್ದು, ಈ ದಿನಗಳಲ್ಲಿ ಯಾವುದೇ ಪೀಠ ಲಭ್ಯವಿರುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಶುಕ್ರವಾರ ಹೇಳಿದ್ದಾರೆ.
ನಾಳೆಯಿಂದ ಜನವರಿ 1 ರವರೆಗೆ ಯಾವುದೇ ಪೀಠಗಳು ಲಭ್ಯವಿರುವುದಿಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನ್ಯಾಯಾ ಲಯದಲ್ಲಿ ಹಾಜರಿದ್ದ ವಕೀಲರಿಗೆ ತಿಳಿಸಿದರು. ಎರಡು ವಾರಗಳ ಚಳಿಗಾಲದ ವಿರಾಮಕ್ಕೆ ಹೋಗುವ ಮುನ್ನ ಉನ್ನತ ನ್ಯಾಯಾ ಲಯದಲ್ಲಿ ಇಂದು ಕೊನೆಯ ಕೆಲಸದ ದಿನವಾಗಿದ್ದು, ಜನವರಿ 2 ರಂದು ಸುಪ್ರೀಂ ಕೋರ್ಟ್ ಪುನರಾರಂಭವಾಗಲಿದೆ.
error: Content is protected !!