Friday, 26th July 2024

ವಿದ್ಯಾರ್ಥಿನಿ ಗರ್ಭಿಣಿ ಪ್ರಕರಣ: ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ: ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಗರ್ಭಪಾತ ಮಾಡಿಸಿಕೊಳ್ಳಲು ತನಗೆ ಅನುಮತಿ ನೀಡಬೇಕೆಂದು ಕೋರಿ ವಿದ್ಯಾರ್ಥಿನಿ ಅರ್ಜಿ ಸಲ್ಲಿಸಿದ್ದಾಳೆ. ವಿಚಾರಣೆ ವೇಳೆ ತಾಯಿ ಮತ್ತು ಭ್ರೂಣದ ಹಿತದೃಷ್ಟಿಯಿಂದ ಗರ್ಭ ಪಾತಕ್ಕೆ ನಿರಾಕರಿಸಲಾಗಿದ್ದು, ಆದರೆ ಮಗು ಹೆತ್ತ ಬಳಿಕ ದತ್ತು ನೀಡಬಹುದು ಎಂದು ನ್ಯಾಯಪೀಠ ತಿಳಿಸಿದೆ.

29 ವಾರಗಳು ತುಂಬಿರುವ ಕಾರಣ ತಾಯಿ ಮತ್ತು ಭ್ರೂಣದ ಹಿತದೃಷ್ಟಿಯಿಂದ ಗರ್ಭ ಪಾತಕ್ಕೆ ನಿರಾಕರಿಸಲಾಗಿದೆ.

ಸಂತ್ರಸ್ಥೆ ವಿದ್ಯಾರ್ಥಿನಿಯಿಂದ ಶುಲ್ಕ ಪಡೆಯದೆ ಎಲ್ಲ ಅಗತ್ಯ ಸೌಲಭ್ಯಗಳು ಲಭ್ಯವಾಗು ವಂತೆ ನೋಡಿಕೊಳ್ಳಬೇಕು. ಆಕೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕರಿಗೆ ಸೂಚಿಸಿದೆ.

error: Content is protected !!