Wednesday, 21st February 2024

ತೆರಿಗೆ ಮೌಲ್ಯಮಾಪನದ ಕೇಸ್‌ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ತಮ್ಮ ವಿರುದ್ಧದ ತೆರಿಗೆ ಮೌಲ್ಯ ಮಾಪನದ ಕೇಸ್‌ಗಳನ್ನು ಸಾಮಾನ್ಯ ತಪಾಸಣೆಯ ಬದಲಿಗೆ ಕೇಂದ್ರೀಯ ವೃತ್ತದ ಕಚೇರಿಗೆ  ವರ್ಗಾಯಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ದಿಲ್ಲಿ ಹೈಕೋರ್ಟ್‌, ಸಂಜಯ್‌ ಗಾಂಧಿ ಮೆಮೋರಿಯಲ್‌ ಟ್ರಸ್ಟ್‌, ಜವಾಹರ್‌ ಭವನ್ ಟ್ರಸ್ಟ್‌, ರಾಜೀವ್‌ ಗಾಂಧಿ ಫೌಂಡೇಷನ್‌, ರಾಜೀವ್‌ ಗಾಂಧಿ ಚಾರಿಟೇಬಲ್‌ ಟ್ರಸ್ಟ್‌, ಯಂಗ್‌ ಇಂಡಿಯನ್‌ ಮತ್ತು ಆಮ್‌ ಆದ್ಮಿ ಪಾರ್ಟಿ ಸಲ್ಲಿಸಿರುವ ಇದೇ ರೀತಿಯ ಅರ್ಜಿಗಳನ್ನು ವಜಾಗೊಳಿಸಿದೆ.

ಆದಾಯ ತೆರಿಗೆ ಇಲಾಖೆಯ ಕೇಂದ್ರೀಯ ವೃತ್ತಗಳು ತೆರಿಗೆ ವಂಚನೆ ಪ್ರಕರಣಗಳ ಪರಿಶೀಲನೆ ನಡೆಸುತ್ತವೆ. ಕಾನೂನು ಪ್ರಕಾರವೇ ತೆರಿಗೆ ಇಲಾಖೆ ತನ್ನ ನಿರ್ಧಾರವನ್ನು ತೆಗೆದುಕೊಂಡಿವೆ. ಆದ್ದರಿಂದ ರಿಟ್‌ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಮನಮೋಹನ್‌ ಮತ್ತು ದಿನೇಶ್‌ ಕುಮಾರ್‌ ಶರ್ಮಾ ಅವರನ್ನು ಒಳಗೊಂಡಿದ್ದ ಪೀಠವು ಹೇಳಿದೆ.

error: Content is protected !!