Thursday, 18th July 2024

ಯುಪಿಯಲ್ಲಿ ಐದು ವರ್ಷಗಳ ಟ್ರಾಫಿಕ್ ಚಲನ್‌ಗಳು ರದ್ದು!

ಕ್ನೋ: ಉತ್ತರ ಪ್ರದೇಶದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಸಿಎಂ ಯೋಗಿ ಆದಿತ್ಯನಾಥ್, ಅವರು ಯುಪಿಯಲ್ಲಿ ತಮ್ಮ ಮೊದಲ ಸರ್ಕಾರ ಆಡಳಿತ ನಡೆಸಿದ 2017 ರಿಂದ 2021 ರವರೆಗೆ ರಾಜ್ಯದಲ್ಲಿ ವಾಹನ ಚಾಲಕರಿಗೆ ವಿಧಿಸಲಾದ ಎಲ್ಲಾ ಚಲನ್‌ಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.

ಇದರಿಂದ ಅಧಿಕಾರಿಗಳು ಆ ಐದು ವರ್ಷಗಳಲ್ಲಿ ನೀಡಿದ ಎಲ್ಲ ಚಲನ್ ಗಳನ್ನು ರದ್ದು ಮಾಡುತ್ತಿದ್ದಾರೆ.

ಉತ್ತರ ಪ್ರದೇಶ ಸರ್ಕಾರ 2017 ರಿಂದ 2021 ರವರೆಗೆ ಖಾಸಗಿ ಮತ್ತು ವಾಣಿಜ್ಯ ವಾಹನ ಮಾಲೀಕರ ಎಲ್ಲಾ ಬಾಕಿ ಇರುವ ಟ್ರಾಫಿಕ್ ಚಲನ್‌ಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಘೋಷಿಸಿದೆ. ವಾಹನದ ಪ್ರಕಾರವನ್ನು ಲೆಕ್ಕಿಸದೆ 1 ಜನವರಿ 2017 ಮತ್ತು 31 ಡಿಸೆಂಬರ್ 2021 ರ ನಡುವೆ ನೀಡಲಾದ ಚಲನ್‌ಗಳಿಗೆ ರದ್ದತಿ ಅನ್ವಯಿಸ ಲಾಗುತ್ತದೆ.

ನ್ಯಾಯಾಲಯದ ಪ್ರಕರಣಗಳ ಪಟ್ಟಿಯನ್ನು ಸ್ವೀಕರಿಸಿದ ನಂತರ ಪೋರ್ಟಲ್‌ನಿಂದ ಟ್ರಾಫಿಕ್ ಚಲನ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವು ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದೆ. ಯುಪಿ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ರಾಜ್ಯದ ಹಲವು ಖಾಸಗಿ ಮತ್ತು ವಾಣಿಜ್ಯ ವಾಹನ ಮಾಲೀಕರಿಗೆ ಪರಿಹಾರ ಸಿಗಲಿದೆ.

ಇತ್ತೀಚೆಗೆ ನೋಯ್ಡಾದಲ್ಲಿ ರೈತರು ಹಳೆಯ ಚಲನ್‌ಗಳನ್ನು ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಯೋಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದಾರೆ.

error: Content is protected !!