Saturday, 27th July 2024

12 ಕಿ.ಮೀ ವರ್ತುಲ ರಸ್ತೆಗೆ ‘ಪುನೀತ್​ ರಾಜ್​ಕುಮಾರ್ ರಸ್ತೆ’ ನಾಮಕರಣ: ಬಿಬಿಎಂಪಿ

#PuneethRoad

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಪವರ್ ಸ್ಟಾರ್ `ಪುನೀತ್ ರಾಜ್ ಕುಮಾರ್ ‘ ಅಕಾಲಿಕ ನಿಧನ ಅಭಿಮಾನಿಗಳಿಗೆ ಅವರ ನೆನಪು ಸದಾಕಾಲ ಉಳಿಯಲು 12 ಕಿ.ಮೀ ಉದ್ದದ ವರ್ತುಲ ರಸ್ತೆಗೆ ‘ಪುನೀತ್​ ರಾಜ್​ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಬಿಬಿಎಂಪಿ ಅಧಿಕೃತ ಅನುಮೋದನೆ ನೀಡಿದೆ.

ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ ನೀಡಿದ್ದು, ಈ ಸಂಬಂಧ ಬಿಬಿಎಂಪಿ ಆಡಳಿತಾಧಿ ಕಾರಿ ರಾಕೇಶ್ ಸಿಂಗ್ ನಿರ್ಣಯ ಕೈಗೊಂಡು ಅನುಮೋದನೆ ನೀಡಿದ್ದಾರೆ.

ಮೈಸೂರು ರಸ್ತೆಯ ನಾಯಂಡನ ಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್​ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ ಪುನೀತ್​ ಹೆಸರನ್ನು ಇಡಲಾಗುತ್ತದೆ. ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್​ರಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಪುನೀತ್ ರಾಜ್​ಕುಮಾರ್ ರಸ್ತೆ ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್ – ಕದಿರೇನ ಹಳ್ಳಿ ಪಾರ್ಕ್ – ಸಾರಕ್ಕಿ ಸಿಗ್ನಲ್ – ಜೆ.ಪಿ.ನಗರವನ್ನು ಸಂಪರ್ಕಿಸಲಿದೆ.

ಪುನೀತ್ ರಾಜ್​ಕುಮಾರ್ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಸಂಬಂಧ ಬಿಬಿಎಂಪಿ ಡಿಸೆಂಬರ್ ಅಂತ್ಯದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ರಸ್ತೆಗೆ ‘ಶ್ರೀ.ಪುನೀತ್ ರಾಜ್​ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಬಹುದಾಗಿತ್ತೆಂದು ರಸ್ತೆಯ ಸಮೀಪದ ಬಡಾವಣೆಗಳಿಗೆ ಸೇರಿರುವ 8 ಸಂಘಸಂಸ್ಥೆ ಗಳ 700ಕ್ಕೂ ಹೆಚ್ಚು ಜನ ಸಹಿ ಮಾಡಿದ್ದರು.

ಬಿಬಿಎಂಪಿ ಸಭೆಯ ಅಧಿಕಾರದಿಂದ ರಸ್ತೆಗೆ ‘ಪುನೀತ್ ರಾಜ್​ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ.

error: Content is protected !!