Saturday, 27th July 2024

200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ವಿಚಾರ: ವಿಪಕ್ಷಗಳಿಗೆ ಅಸ್ತ್ರ

ಬೆಂಗಳೂರು : ಕಾಂಗ್ರೆಸ್ ಸರ್ಕಾರದ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ವಿಚಾರವನ್ನು ವಿಪಕ್ಷಗಳು ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡಿದೆ.

ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಜನರು ಹಲವು ಕಡೆ ಮೆಸ್ಕಾಂ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದರು.

ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುತ್ತಿದೆ. ಇದರ ನಡುವೆ ರಾಜ್ಯಾದ್ಯಂತ ‘ಕರೆಂಟ್ ಬಿಲ್ ಕಟ್ಬೇಡಿ’ ಅಭಿಯಾನಕ್ಕೆ ವಿಪಕ್ಷಗಳು ಸಿದ್ದತೆ ನಡೆಸಿದೆ ಎನ್ನಲಾಗಿದೆ. ಉಚಿತ ವಿದ್ಯುತ್ ಯೋಜನೆ ಮಾತ್ರವಲ್ಲದೇ ಕಾಂಗ್ರೆಸ್ ನ ಐದು ಗ್ಯಾರೆಂಟಿ ಯೋಜನೆ ಈಡೇರಿಸುವಂತೆ ವಿಪಕ್ಷಗಳು ಪಟ್ಟು ಹಿಡಿದಿದೆ.

ಅಂದು ಕಾಂಗ್ರೆಸ್ ನಾಯಕರು ನಂಗೆ ಫ್ರೀ, ನಿಂಗೂ ಫ್ರೀ ಎಂದಿದ್ರು, ಈಗ ಗ್ಯಾರೆಂಟಿ ಯೋಜನೆ ಕೊಡಲಿ ನೋಡೋಣ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ. ಗ್ಯಾರೆಂಟಿ ಕೊಡ್ತೀವಿ ಎಂದು ಘೋಷಣೆ ಮಾಡಿದ್ದು ಯಾರು..? ಇವಾಗ ಕೊಡಿ ನೋಡೋಣ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.

ಕುಮಾರಸ್ವಾಮಿ ನನಗೂ ಫ್ರೀ..ನಿನಗೂ ಫ್ರೀ..ಎಂದು ಸಿದ್ದರಾಮಯ್ಯ ಭಾಷಣದ ವೇಳೆ ಹೇಳಿದ್ದರು.,ಇವಾಗ ಕೊಡಿ.. ನೋಡೋಣ ಕಾಂಗ್ರೆಸ್ ಯಾವ ರೀತಿ ಕೊಡುತ್ತೆ ನೋಡೋಣ . ಸುಳ್ಳು ಹೇಳಿ ಕಾಂಗ್ರೆಸ್ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ. ನನಗೂ ಫ್ರೀ..ನಿನಗೂ ಫ್ರೀ..ಎಂದು ಸಿದ್ದರಾಮಯ್ಯ ಹೇಳಿದ್ದರು.,ಇವಾಗ ಕೊಡಿ..ಕಾಂಗ್ರೆಸ್ ಯಾವ ರೀತಿ ಕೊಡುತ್ತೆ ನೋಡೋಣ..ಮೊದಲು ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಇರುತ್ತೋ ಇಲ್ವೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

error: Content is protected !!