Sunday, 23rd June 2024

ಕಾಲು ಜಾರಿ ಎರಡನೇ ಮಹಡಿಯಿಂದ ಯುವತಿ ಬಿದ್ದು ಸಾವು

ಬೆಂಗಳೂರು: ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ಶಾಪಿಂಗ್​​ಗೆ ಬಂದಿದ್ದ ಯುವಕ – ಯುವತಿ ಕಾಂಪ್ಲೆಕ್ಸ್​​ನಿಂದ ಬಿದ್ದಿರುವ ಘಟನೆ ನಡೆದಿದೆ.

ಲಿಯಾ (18) ಎಂಬ ಯುವತಿ ಮೃತಪಟ್ಟಿದ್ದು, ಯುವಕ ಕ್ರಿಸ್ ಪೀಟರ್ ಗಂಭೀರ ಗಾಯಗೊಂಡಿದ್ದಾನೆ. ಸೆಂಟ್ ಜೋಸೆಫ್ ಕಾಲೇಜ್​ನಲ್ಲಿ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾಗಿರುವ ಇಬ್ಬರೂ ಶಾಪಿಂಗ್​ಗೆ ಬಂದಿದ್ದರು. ಈ ವೇಳೆ ಕಾಲು ಜಾರಿ ಕಟ್ಟಡದ ಎರಡನೇ ಮಹಡಿಯಿಂದ ಯುವತಿ ಬಿದ್ದಿದ್ದಾಳೆ. ಯುವತಿ ಹಿಡಿದುಕೊಳ್ಳಲು ಹೋಗಿ ಯುವಕ ಕೂಡ ಬಿದ್ದಿದ್ದಾನೆ.

ಯುವತಿಯ ಮೇಲೆಯೇ ಯುವಕ ಬಿದ್ದಿದ್ದರಿಂದ ಬದುಕಿದ್ದಾನೆ. ಯುವಕನ ಕಾಲು ಮುರಿದಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

 

error: Content is protected !!