Saturday, 27th July 2024

ಕೃಷಿಕರಿಗೆ ಲಾಭದಾಯಕವಾದ್ದರಿಂದ ಯಶಸ್ಸು ಖಚಿತ

ಆರ್.ಎಸ್.ಶ್ರೀಕಾಂತ್ ರಾಮ್ ಪಾವಗಡ

* ‘ಕಾವೇರಿ ಕಾಲಿಂಗ್’ ಬೈಕ್ ರ್ಯಾಾಲಿ ಫಲಿತಾಂಶ ಹೇಗಿದೆ?
ಕಳೆದ 45 ದಿನಗಳಿಂದ ಕಾವೇರಿ ಕೂಗು ಅಭಿಯಾನ 7ಸಾವಿರ ಗ್ರಾಾಮಗಳ ರೈತರನ್ನು ತಲುಪಿದೆ. ರೈತರಲ್ಲಿ ಅಭಿಯಾನದ ಬಗ್ಗೆೆ ಸಾಕಷ್ಟು ಉತ್ಸಾಾಹವಿದೆ. ಸರಕಾರದಿಂದ ಸಸಿ ನೆಡಲು ಸಬ್ಸಿಿಡಿ ಘೋಷಣೆ ಮಾಡಿದ ಬಳಿಕ ಅಭಿಯಾನವನ್ನು ಯಾರೂ ನಿಲ್ಲಿಸಲು ಆಗುವುದಿಲ್ಲ. ರೈತಾಪಿ ಜನ,ನಮಗಾಗಿ ಅಲ್ಲ, ಸ್ವ ಹಿತಕ್ಕಾಾಗಿ ಅಭಿಯಾನದ ಜತೆ ಕೈ ಜೋಡಿಸಲಿದ್ದಾರೆ.

* ಅಭಿಯಾನದ ಬಗ್ಗೆೆ ಸರಕಾರದ ನಿಲುವೇನು ?
ಸರಕಾರಗಳು ನಮ್ಮ ಬೆಂಬಲಕ್ಕಿಿವೆ. ಅರಣ್ಯ ಕೃಷಿಗೆ ಬೇಕಾದ ಕಾನೂನು ತಿದ್ದುಪಡಿ ಕೆಲಸ ಆಗುತ್ತಿಿದೆ. 4ವರ್ಷ ಸಬ್ಸಿಿಡಿ ನೀಡಲು ಸರಕಾರ ಸಿದ್ದವಿದೆ.

*ಅಭಿಯಾನದ ಮುಖ್ಯ ಉದ್ದೇಶ ಏನು?
ಸಸಿಗಳನ್ನು ಬೆಳೆಸಿ ರೈತರಿಗೆ ಆರ್ಥಿಕವಾಗಿ ಲಾಭ ತರುವುದರ ಜತೆಗೆ ಪರಿಸರ ಮತ್ತು ನದಿಗಳ ಸಂರಕ್ಷಣೆ ಅಭಿಯಾನದ ಉದ್ದೇಶವಾಗಿದೆ. ರೈತರು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಸೆ.4ರಂದು 3.5ಲಕ್ಷ ಮತ್ತು ಸೆ.5ರಂದು 2.5ಲಕ್ಷ ಸಸಿಗಳು ದೇಣಿಗೆ ಸಿಕ್ಕಿಿದೆ.ಈ ಪ್ರಗತಿಯನ್ನು ಗಮನಿಸಿದರೆ ಅಭಿವೃದ್ಧಿಿ ಖಂಡಿತ, ಇದು ಒಂದು ದಿನದ ಕೆಲಸವಲ್ಲ, 12ವರ್ಷಗಳ ಕಾಲ ನಡೆಯಲಿರುವ ಸುದೀರ್ಘ ಕೆಲಸವಾಗಿದೆ.

*ಅಭಿಯಾನ ಯಶಸ್ಸು ಕಾಣುವ ಭರವಸೆ ಇದೆಯಾ ?
ಒಬ್ಬ ಭಿಕ್ಷುಕ ಸಹ ವಾರಕ್ಕೆೆ ಒಂದು ಅಥವಾ ಎರಡು ಸಿಸಿಗಳನ್ನು ನೆಡಲು ಮುಂದಾಗಿರುವಾಗ ಸಾಮಾನ್ಯ ಜನ ಎಷ್ಟು ಸಸಿಗಳನ್ನು ಬೆಳೆಸಬಹುದು ಎಂಬುದು ಊಹಿಸಲು ಅಸಾಧ್ಯ. ಕೃಷಿಕರಿಗೆ ಇದು ಲಾಭದಾಯಕವಾಗಿರುವ ಕಾರಣ ಅಭಿಯಾನ ಖಂಡಿತ ಯಶಸ್ವಿಿಯಾಗಲಿದೆ.

* ಸಮುದ್ರದ ನೀರನ್ನು ಶುದ್ಧೀಕರಿಸಿ ( ಡೀಸಿಲ್ಟೇಶನ್ ) ಬಳಸುವ ತಂತ್ರಜ್ಞಾನ ನೀರಿನ ಕೊರತೆ ನೀಗಿಸಬಹುದಾ?
ಸಣ್ಣ ಸಣ್ಣ ನಗರಗಳ ನೀರಿನ ಕೊರತೆ ನೀಗಿಸಲು ಇದು ಪರಿಹಾರವಾಗುತ್ತದೆ. ಆದರೆ ಭಾರತದಂತಹ 130ಕೋಟಿ ಜನಸಂಖ್ಯೆೆಯುಳ್ಳ ದೇಶಕ್ಕೆೆ ಇದು ಸಾಕಾಗುವುದಿಲ್ಲ. ಹಾಗಾಗಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನೈಸರ್ಗಿಕ ಪದ್ಧತಿ ಮುಂದೆ ಯಾವುದೂ ಶಾಶ್ವತವಲ್ಲ.

*242 ಕೋಟಿ ಸಸಿಗಳನ್ನು ಬೆಳೆಸಲು ನರ್ಸರಿಗಳ ತಯಾರಿ ಹೇಗಿದೆ ?
32 ನರ್ಸರಿಗಳು ನಮ್ಮ ಬಳಿ ಈಗಾಗಲೇ ಇವೆ. ಇನ್ನುಳಿದಂತೆ 5ರಿಂದ 10ಸಾವಿರ ರೈತರನ್ನು ನರ್ಸರಿ ಅಭಿವೃದ್ಧಿಿಗೆ ನಿಯುಕ್ತಗೊಳಿಸಲು ತೀರ್ಮಾನಿಸಿದ್ದೇವೆ. ರೈತ ತನ್ನ ನರ್ಸರಿಯಲ್ಲಿ ಬೆಳೆಸಿದ ಸಸಿಗಳು ಮಾರಾಟವಾಗದಿದ್ದರೆ ನಷ್ಟವಾಗುವ ಸಾಧ್ಯತೆಯಿರುವುದರಿಂದ ಮೊದಲಿಗೆ ಹಣ ಸಂಗ್ರಹದ ಕೆಲಸ ಮಾಡುತಿದ್ದೇವೆ. ನಮ್ಮ ಬಳಿ ಸಂಗ್ರಹವಾಗಿರುವಷ್ಟು ಹಣಕ್ಕೆೆ ಅನುಗುಣವಾಗಿ ನರ್ಸರಿಗಳ ಅಭಿವೃದ್ಧಿಿ ಕೆಲಸ ಮಾಡಲಿದ್ದೇವೆ.

*ಸರಕಾರಗಳ ನಿಲುವೇನು ?
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗಾಗಲೇ ನಮಗೆ ಬೆಂಬಲ ಸೂಚಿಸಿದ್ದು, ಸರಕಾರಗಳಿಗೆ ಒಂದು ಮಾದರಿ ಯೋಜನೆ ಅಗತ್ಯವಿದೆ. ಹಾಗಾಗಿ ‘ಕಾವೇರಿ ಕೂಗು’ ಎಂಬುದನ್ನು ಮಾದರಿ ಯೋಜನೆಯಾಗಿ ಕಾರ್ಯರೂಪಕ್ಕೆೆ ತರಲಾಗುತ್ತಿಿದೆ. ಇದು ಯಶಸ್ವಿಿಯಾದ ನಂತರ ಇತರ ನದಿಗಳ ಉಳಿವಿಗಾಗಿ ಯೋಜನೆ ಮಾಡಲಾಗುವುದು.

* ಟಿಂಬರ್ ಬೋರ್ಡ್ ಹೇಗೆ ಕಾರ್ಯ ನಿರ್ವಹಿಸುತ್ತಿಿದೆ?
ಸಣ್ಣ ರೈತರಿಗೆ ಟಿಂಬರ್ ಬೋರ್ಡ್ ನಿಂದ ಸಾಕಷ್ಟು ಅನುಕೂಲವಾಗಲಿದೆ. ದೊಡ್ಡ ರೈತರಿಗೆ ತಾವು ಬೆಳೆದ ಮರಗಳನ್ನು ಬೃಹತ್ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆೆಯಲ್ಲಿ ಮಾರಾಟ ಮಾಡಲು ಶಕ್ತಿಿ ಇರುತ್ತದೆ. ಸಣ್ಣ ರೈತರಿಗೆ ಇದು ಕಷ್ಟಸಾಧ್ಯ. ಈ ಕಾರಣದಿಂದ ಟಿಂಬರ್ ಬೋರ್ಡ್ ಅರಣ್ಯ ಕೃಷಿ ಉತ್ಪನ್ನಗಳ ಮಾರುಕಟ್ಟೆೆ ಮಾರಾಟ, ಸಾಗಾಟ, ಬೆಲೆ ನಿಯಂತ್ರಣ, ನಿಗದಿ ಸೇರಿದಂತೆ ಎಲ್ಲಾಾ ರೈತಪರ ಕೆಲಸವನ್ನು ಮಾಡಲಿದೆ.

* ಟಿಂಬರ್ ಬೋರ್ಡ್ ಸ್ಥಾಾಪನೆಯಿಂದ ಅರಣ್ಯ ನಾಶವಾಗುತ್ತದೆಯೇ?
ಇಲ್ಲ, ಅರಣ್ಯಕ್ಕೆೆ ತೊಂದರೆಯೇನೂ ಅದರಿಂದ ಆಗುವುದಿಲ್ಲ. ಅರಣ್ಯ ರಕ್ಷಣೆ ಅರಣ್ಯ ಇಲಾಖೆಯ ಕೆಲಸವಾಗಿದೆ. ರೈತರ ಬೆಳೆದ ಬೆಳೆ ಮಾರುವ ಹಕ್ಕು ರೈತನಿಗಿದೆ. ಶೇ 80ರಷ್ಟು ಭೂಮಿ ರೈತರ ಬಳಿಯಿದ್ದು, ರೈತರಿಗೆ ಆದಾಯ ಬರದಿದ್ದರೆ ದೇಶ ಹೇಗೆ ಅಭಿವೃದ್ಧಿಿ ಹೊಂದಲು ಸಾಧ್ಯ. ಹಾಗಾಗಿ ಅರಣ್ಯ ಕೃಷಿಯಿಂದ ರೈತ ಹೆಚ್ಚು ಆದಾಯ ಗಳಿಸುವಂತೆ ಮಾಡಬೇಕು. ಇದರಿಂದಾಗಿ ಸರಕಾರಕ್ಕೆೆ ಹೆಚ್ಚು ತೆರಿಗೆ ಸಂದಾಯವಾಗುತ್ತದೆ ಜತೆಗೆ ದೇಶದ ಆರ್ಥಿಕ ಸ್ಥಿಿತಿ ಉತ್ತಮವಾಗುತ್ತದೆ. ತಮಿಳುನಾಡಿನ 1/3ಭಾಗ ಭೂಮಿಯನ್ನು ಕೃಷಿ ಅರಣ್ಯ ಭೂಮಿಯನ್ನಾಾಗಿಸಿದರೆ ವಾರ್ಷಿಕವಾಗಿ ತಮಿನಾಡು ರಾಜ್ಯ ಒಂದರಲ್ಲಿಯೇ 26 ಸಾವಿರ ಕೋಟಿ ರು. ಜಿಎಸ್ ಟಿ ತೆರಿಗೆ ಸಂದಾಯವಾಗುತ್ತದೆ.

*ಈವರೆಗೆ ರೈತ ಮರಗಳನ್ನು ಬೆಳಸದಿರಲು ಕಾರಣವೇನು ?
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಮರವನ್ನು ಕಡಿದರೆ ಜೈಲಿಗೆ ಹಾಕುತ್ತಾಾರೆ. ಅದರಿಂದ ಮರವನ್ನು ಬೆಳೆಸಲು ಕೃಷಿಕರುಭಯ ಪಡುತ್ತಿಿದ್ದರು. ಹಾಗಾಗಿ ಈ ಕಾನೂನಿಗೆ ತಿದ್ದುಪಡಿ ತರಲು ಸಿದ್ಧತೆ ನಡೆದಿದೆ. ತನ್ನ ಜಮೀನಿನಲ್ಲಿ ಬೆಳೆದ ಯಾವುದೇ ಬೆಳೆಯನ್ನು ಮಾರುಕಟ್ಟೆೆಯಲ್ಲಿ ಮುಕ್ತವಾಗಿ ಮಾರಲು ರೈತನಿಗೆ ಅವಕಾಶ ಕಲ್ಪಿಿಸುವ ಕಾನೂನು ಜಾರಿಗೆ ತಂದರೆ ಅರಣ್ಯ ಕೃಷಿ ಪರಿಕಲ್ಪನೆ ಯಶಸ್ವಿಿಯಾಗುತ್ತದೆ. ಆಗಷ್ಟೇ ಪರಿಸರ ವೈಪರೀತ್ಯಗಳನ್ನು ತಡೆಯುವುದು ಸಾಧ್ಯ.

*ಸಿನಿ ತಾರೆಯರಿಂದ ಕಾವೇರಿ ಕೂಗಿಗೆ ಉಪಯೋಗವೇನು ?
ಸಿನಿ ತಾರೆಯರು ಹೆಚ್ಚಿಿನ ಸಂಖ್ಯೆೆಯಲ್ಲಿ ಅಭಿಮಾನಿ ವರ್ಗವನ್ನು ಹೊಂದಿರುತ್ತಾಾರೆ. ತಮ್ಮ ನೆಚ್ಚಿಿನ ನಟ-ನಟಿ ಮಾಡುವ ಕೆಲಸದಿಂದ ಪ್ರೇರಣೆಗೊಂಡು ಹೆಚ್ಚಿಿನ ಸಂಖ್ಯೆೆಯಲ್ಲಿ ಅಭಿಯಾನಿಗಳು ಅಭಿಯಾನದ ಭಾಗವಾಗುತ್ತಾಾರೆ.

*ಕಾವೇರಿ ಕೂಗು ಅಭಿಯಾನದ ನಿರ್ವಹಣೆ ಹೇಗೆ ನಡೆಯಲಿದೆ?
ಕಾವೇರಿ ನಿರ್ವಹಣಾ ಸಮಿತಿಯಲ್ಲಿ ಇಸ್ರೋೋ ಮಾಜಿ ಅಧ್ಯಕ್ಷ ಎಸ್.ಕಿರಣ್ ಕುಮಾರ್, ಬಯೋಕಾನ್ ಮುಖ್ಯಸ್ಥೆೆ ಕಿರಣ್ ಮಜುಂದಾರ್ ಶಾ ಸೇರಿದಂತೆ ಹಲವು ಕ್ಷೇತ್ರದ ಸಾಧಕರು ಸಮಿತಿಯಲ್ಲಿದ್ದು 12ವರ್ಷಗಳ ಯೋಜನೆ ಪೂರ್ಣಗೊಳ್ಳುವವರೆಗೂ ನಿರಂತರವಾಗಿ ಶ್ರಮಿಸಲಿದ್ದಾರೆ.

*ಅಗ್ರೋೋ ಫಾರೆಸ್‌ಟ್‌ ಸಬ್ಸಿಿಡಿ ಹೇಗೆ ನೀಡಲಿದೆ?
ಮೊದಲ ನಾಲ್ಕು ವರ್ಷಗಳ ಕಾಲ ಸಬ್ಸಿಿಡಿ ನೀಡಲು ಸರಕಾರದ ಜತೆ ಮಾತುಕತೆ ನಡೆದಿದೆ.ಇನ್ನೇನು ಕೆಲವು ದಿನಗಳಲ್ಲಿ ಸರಕಾರ ಅದನ್ನು ಘೋಷಣೆ ಮಾಡಲಿದೆ.
ಭೂಮಿಯ ಗುಣಲಕ್ಷಣಗಳ ಆಧಾರವಾಗಿ ಸರಕಾರ ಸಬ್ಸಿಿಡಿ ನೀಡಲಾಗುತ್ತದೆ. ಈ ಕುರಿತು ನಾವು ಸರಕಾರಕ್ಕೆೆ ವರದಿ ಸಲ್ಲಿಸಿದ್ದೇವೆ. ನಮ್ಮ ವರದಿಯನ್ನೇ ಅಂಗೀಕಾರ ಮಾಡಲಿದೆಯೇ ಅಥವಾ ಸರಕಾರ ಹೊಸ ಸಬ್ಸಿಿಡಿ ದರ ನಿಗದಿಪಡಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

*ವರದಿಯಲ್ಲೇನಿದೆ ?
ಮೊದಲೆರಡು ವರ್ಷದಲ್ಲಿ ರೈತರು 15-20% ನಷ್ಟ ಅನುಭವಿಸುತ್ತಾಾರೆ, ನಾಲ್ಕನೇ ವರ್ಷದಲ್ಲಿ ಶೇ 25-30 % ನಷ್ಟ ಎದುರಾಗಲಿದೆ. ನಷ್ಟದ ಸಂಪೂರ್ಣ ಮೊತ್ತವನ್ನು ಸಬ್ಸಿಿಡಿ ರೂಪದಲ್ಲಿ ಸರಕಾರ ನೀಡುವಂತೆ ವರದಿ ಮೂಲಕ ಮನವಿ ಮಾಡಲಾಗಿದೆ.

* ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲು ಸಾಧ್ಯವೇ?
ಮಧ್ಯವರ್ತಿ ಹಾವಳಿಗೆ ಬ್ರೇಕ್ ಹಾಕುವ ದೃಷ್ಟಿಿಯಿಂದಲೇ ಟಿಂಬರ್ ಬೋರ್ಡ್ ಸ್ಥಾಾಪನೆ ಮಾಡಲಾಗಿದೆ. ಯಾವುದೇ ರೈತ ರಿಗೆ ನಷ್ಟವಾಗದಂತೆ ಇದು ಸಹಕಾರಿ.
ಅಂತಾರಾಷ್ಟ್ರೀಯ ಮಾರುಕಟ್ಟೆೆಯಲ್ಲಿ 400-450 ಟ್ರಿಿಲಿಯನ್ ಡಾಲರ್ ಮೊತ್ತದಷ್ಟು ಟಿಂಬರ್ ವಹಿವಾಟು ನಡೆಯುತ್ತಿಿದೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದರೆ ಮಾತ್ರ ರೈತರಿಗೆ ಅಧಿಕ ಲಾಭ ಸಿಗಲಿದೆ.

* ಜಾಗತಿಕ ತಾಪಮಾನ ನಿಯಂತ್ರಣಕ್ಕೆೆ ಕಾವೇರಿ ಕೂಗು ಹೇಗೆ ಸಹಕಾರಿಯಾಗಲಿದೆ ?
ವಿಶ್ವಸಂಸ್ಥೆೆಯ ಪ್ರಕಾರ ಒಂದು ಟ್ರಿಿಲಿಯನ್ ಮರ ಬೆಳೆಸಿದರೆ ಇಡೀ ಜಗತ್ತಿಿನ ತಾಪಮಾನವನ್ನು ನಿಯಂತ್ರಿಿಸಬಹುದಾಗಿದೆ.
ಕಾವೇರಿ ಕೊಳ್ಳ ಪ್ರದೇಶದಲ್ಲಿಯೇ 242 ಕೋಟಿ ಮರ ನೆಟ್ಟರೆ ಸಹಜವಾಗಿಯೇ ಜಾಗತಿಕ ತಾಪಮಾನ ಕಡಿಮೆಯಾಗುತ್ತದೆ.
ಇಡೀ ದೇಶದಲ್ಲಿ ಮರಗಳನ್ನು ಬೆಳೆದರೆ ಸಂಪೂರ್ಣವಾಗಿ ಜಾಗತಿಕ ತಾಪಮಾನ ಹತೋಟಿಗೆ ಬರುತ್ತದೆ. ಬೆಳೆಸಿದ ಮರಗಳಿಂದ ಲಾಭವಾದರೆ ಮರಗಳನ್ನು ಬೆಳೆಸಲು ರೈತರೂ ಮುಂದೆ ಬರುತ್ತಾಾರೆ.

* ಬಯಲು ಸೀಮೆಯ ನೀರಿನ ಸಮಸ್ಯೆೆಗೆ ನಿವಾರಿಸಲು ನಿಮ್ಮ ಸಲಹೆ ಏನು?
ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿಿದ್ದರೂ ಅಂತರ್ಜಲ ಪ್ರಮಾಣ ಕುಸಿಯುತ್ತಿಿದೆ. ರಾಸಾಯನಿಕ ಗೊಬ್ಬರ ಹಾಕಿ ಮಣ್ಣಿಿನ ಫಲವತ್ತತೆ ನಾಶವಾಗಿದೆ. ಭೂಮಿಯ ಮೇಲ್ಭಾಾಗ ಉಪ್ಪಿಿನಿಂದ ಕೂಡಿದ್ದು, ಬೀಳುವ ಮಳೆಯ ಪೈಕಿ ಕನಿಷ್ಠ ಶೇ.8 ಭೂಮಿಯಲ್ಲಿ ಇಂಗಿಸಲು ವಿಫಲವಾಗುತ್ತಿಿದ್ದೇವೆ. ಅಂತರ್ಜಲ ಹೆಚ್ಚಿಿಸಿದರೆ ಮಾತ್ರ ಬಯಲು ಸೀಮೆಯ ಜನರ ನೀರಿನ ಸಮಸ್ಯೆೆ ನಿವಾರಿಸಲು ಸಾಧ್ಯ.

*ಅಂತರ್ಜಲ ವೃದ್ಧಿಿಸುವುದು ಹೇಗೆ?
ಅಂತರ್ಜಲ ವೃದ್ಧಿಿಸಲು ಮಣ್ಣಿಿನ ಫಲವತ್ತತೆ ಹೆಚ್ಚಿಿಸ ಬೇಕಾಗಿದೆ. ಮಣ್ಣಿಿನಲ್ಲಿ ಶೇ1% ಫಲವತ್ತತೆ ಹೆಚ್ಚಿಿದರೆ ಒಂದು ಎಕರೆ ಪ್ರದೇಶದಲ್ಲಿ 60 ಸಾವಿರ ಲೀಟರ್ ಇಂಗಿಸಲು ಸಾಧ್ಯ. ಆ ಮೂಲಕ ಅಂತರ್ಜಲ ಹೆಚ್ಚಿಿಸಬಹುದು. ಮಣ್ಣಿಿನ ಫಲವತ್ತತೆ ಹೆಚ್ಚಿಿಸಲು ಮರದ ಎಲೆ, ಸಗಣಿಯಂಥ ಸಾವಯವ ಗೊಬ್ಬರಗಳಿಂದ ಮಾತ್ರ ಸಾಧ್ಯ. ಹಾಗಾಗಿ ಮರಗಳನ್ನು ಬೆಳೆಸುವುದು ಬಿಟ್ಟರೆ ಬೇರಾವ ಪರಿಹಾರ ನಮ್ಮ ಮುಂದಿಲ್ಲ.

*ನಿಮ್ಮ ಸಂದೇಶ?
ರಾಜಕೀಯ ಕಾರಣಗಳಿಗೆ ಮಾತ್ರ ರಾಜ್ಯಗಳ ವಿಂಗಡಣೆ ಮಾಡಲಾಗಿದ್ದು, ಪರಿಸರ ರಕ್ಷಣೆಗೆ ಅಂತಹ ಯಾವುದೇ ಗಡಿಯಿಲ್ಲ. ಪರಿಸರವನ್ನು ಪಶ್ಚಿಿಮ ಘಟ್ಟ, ವಿಂಧ್ಯಪರ್ವತ, ನೀಲಗಿರಿ ಎಂಬ ರೀತಿಯ ಭೂಮಿಯ ಗುಣ ಲಕ್ಷಣಗಳಿಂದ ವಿಭಜಿಸಬೇಕು. ಭೂಮಿ ಮೇಲಿನ ಪ್ರತಿ ಸಣ್ಣ ಬದಲಾವಣೆ ಜೀವರಾಶಿಯ ಪ್ರತಿ ಜೀವಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ವಿಶ್ವದ ಯಾವುದೇ ಭಾಗದಲ್ಲಿ ಪರಿಸರ ನಾಶವಾದರೂ ನಾವೆಲ್ಲಾ ಜಾಗೃತರಾಗಿ ಹೋರಾಡಬೇಕಿದೆ. ಗಡಿ, ಭಾಷೆ, ಜಾತಿ, ಧರ್ಮ ಎಲ್ಲ ಮರೆತು ಕಾವೇರಿ ಕೂಗು ಅಭಿಯಾನವನ್ನು ಯಶಸ್ವಿಿಗೊಳಿಸಿ.

Leave a Reply

Your email address will not be published. Required fields are marked *

error: Content is protected !!