Tuesday, 23rd April 2024

’ಬೆಟ್ಟದ ಹುಲಿ’ ಹೆಸರುವಾಸಿ ಟಗರು ಸಾವು

ಬಾಗಲಕೋಟೆ: ಪ್ರಶಸ್ತಿಗಳ ರಾಜ, ಬೆಟ್ಟದ ಹುಲಿ ಎಂದೇ ಹೆಸರುವಾಸಿಯಾದ ಟಗರು ಮೃತಪಟ್ಟಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಹಳ್ಳಿಯ ಪಾಂಡು ಗಣಿಗೆ ಸೇರಿದ ಈ ಟಗರು ಅನಾರೋಗ್ಯ ದಿಂದ ಮೃತಪಟ್ಟಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದ ಪಾಂಡು ಗಣಿ ₹5.01 ಲಕ್ಷ ಕೊಟ್ಟು ಖರೀದಿ ಮಾಡಿದ್ದರು.

ಬೆಟ್ಟದ ಹುಲಿ ಎಂದೇ ಹೆಸರುವಾಸಿಯಾದ ಟಗರು ಮೈಸೂರು ದಸರಾ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ಟಗರಿನ ಕಾಳಗದಲ್ಲಿ ಹೆಸರು ಮಾಡಿತ್ತು. 80ಕ್ಕೂ ಅಧಿಕ ಪ್ರಶಸ್ತಿ ಬಾಚಿಕೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಟ್ಟದ ಹುಲಿ ಅಭಿಮಾನಿಗಳಿದ್ದಾರೆ.

ಗ್ರಾಮದಲ್ಲಿ ಟ್ರ್ಯಾಕ್ಟರ್ ಮೂಲಕ ಮೃತ ಟಗರಿನ ಮೆರವಣಿಗೆ ಮಾಡಲಾಗಿದೆ. ಟಗರಿನ ಅಂತಿಮ ಸಂಸ್ಕಾರದಲ್ಲಿ ಅಂದಾಜು 500ಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ.

error: Content is protected !!