Thursday, 20th June 2024

ನಾಳೆಯಿಂದ ಬೀದರ್-ಬೆಂಗಳೂರು ವಿಮಾನ ಸೇವೆ ಪುನರಾರಂಭ

ಬೀದರ್: ಬೀದರ್ ವಿಮಾನ ನಿಲ್ದಾಣ ಮತ್ತೆ ಕಾರ್ಯಾರಂಭ ಮಾಡಲಿದೆ. ಬೀದರ್-ಬೆಂಗಳೂರು ವಿಮಾನ ಸೇವೆ ಗುರುವಾರದಿಂದ ಪುನಃ ಆರಂಭ ವಾಗಲಿದೆ.

ಕೋವಿಡ್ ಪರಿಸ್ಥಿತಿ ಮತ್ತು ಇತರ ಕಾರಣಗಳಿಂದಾಗಿ ಬೀದರ್‌ನಿಂದ ವಿಮಾನ ಹಾರಾಟ ಸ್ಥಗಿತವಾಗಿತ್ತು. ಫೆ.24ರಿಂದ ವಿಮಾನ ಸೇವೆ ಮತ್ತೆ ಆರಂಭಗೊಳ್ಳಲಿದೆ. ಇದರಿಂದಾಗಿ ಜನರು ರಾಜಧಾನಿ ಬೆಂಗಳೂರಿಗೆ ಬರಲು ಸಹಾಯಕವಾಗಲಿದೆ.

ವಾರದಲ್ಲಿ ಮೂರು ದಿನ (ಮಂಗಳವಾರ, ಗುರುವಾರ ಮತ್ತು ರವಿವಾರ) ಬೀದರ್-ಬೆಂಗಳೂರು ವಿಮಾನ ಹಾರಾಟ ನಡೆಸಲಿದೆ.

ಕೋವಿಡ್ ಮತ್ತು ಇತರ ಕಾರಣಗಳಿಂದ ಬೀದರ್‌ನಿಂದ ನಾಗರಿಕ ವಿಮಾನಯಾನ ಸೇವೆ ಸ್ಥಗಿತಗೊಂಡಿರುವ ಕುರಿತು ಬೀದರ್ ಸಂಸದ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು.

ವಾರದಲ್ಲಿ ಮೂರು ದಿನ ಟ್ರೂ ಜೆಟ್ ಸಂಸ್ಥೆ ಬೀದರ್-ಬೆಂಗಳೂರು ನಡುವೆ ವಿಮಾನ ಹಾರಾಟವನ್ನು ನಡೆಸಲಿದೆ. ವಿಮಾನ ಸಂಖ್ಯೆ 2ಟಿ 625 ಬೆಳಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮಧ್ಯಾಹ್ನ 1.10ಕ್ಕೆ ಬೀದರ್ ತಲುಪಲಿದೆ.

ವಿಮಾನ ಸಂಖ್ಯೆ 2ಟಿ 626 ಮಧ್ಯಾಹ್ನ 1.40ಕ್ಕೆ ಬೀದರ್‌ನಿಂದ ಹೊರಟು 3.25ಕ್ಕೆ ಬೆಂಗಳೂರು ತಲುಪಲಿದೆ. ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ 1 ಗಂಟೆ 45 ನಿಮಿಷವಾಗಿದೆ. ಉಡಾನ್ ಯೋಜನೆಯಡಿ ಬೀದರ್‌ನಿಂದ ನಾಗರಿಕ ವಿಮಾನ ಸೇವೆ ಆರಂಭ ಮಾಡಲಾಗಿತ್ತು. ಆದರೆ ಅದನ್ನು ಕಡಿಮೆ ಅವಧಿಯಲ್ಲಿಯೇ ಸ್ಥಗಿತಗೊಳಿಸಲಾಗಿತ್ತು ಎಂದು ಪತ್ರದಲ್ಲಿ ವಿವರಿಸಿದ್ದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಬೀದರ್ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ಸಿಕ್ಕಿತ್ತು.

error: Content is protected !!