Thursday, 7th December 2023

ಕರೋನಾ ವಾರಿಯರ್ಸ್ ಅವಧಿ 6 ತಿಂಗಳಿಗೆ ವಿಸ್ತರಣೆ: ಡಾ.ಕೆ.ಸುಧಾಕರ್

ಬೆಂಗಳೂರು: ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದ್ದ ಕರೋನಾ ವಾರಿಯರ್ಸ್ ಅವಧಿಯನ್ನು 18 ತಿಂಗಳವರೆಗೆ ಮುಂದುವರೆಸಿಕೊಂಡು ಹೋಗಿದ್ದೇವೆ. ಈ ಮತ್ತೆ ಆರ್ಥಿಕ ಇಲಾಖೆಗೆ ಪತ್ರ ಬರೆದು ಅವರ ಅವಧಿಯನ್ನು ಇನ್ನೂ 6 ತಿಂಗಳು ಮುಂದುವರೆಸಲು ಕೇಳಿದ್ದೇವೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಮಂಗಳೂರು ಪ್ರವಾಸ ರದ್ದಾಗಿದೆ. ಹಾಗಾಗಿ ಗೃಹ ಕಛೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರ ಬಹಳ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಆರು ವರ್ಷದ ಮೇಲಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಲು ತೀರ್ಮಾನ ಮಾಡಲಾಗಿದೆ. ಎಲ್ಲಾ ವಯಸ್ಸಿನ ಜನರೂ ಲಸಿಕೆ ಪಡೆಯುವ ಮೂಲಕ ಕೋವಿಡ್ ತಡೆಯಬೇಕು ಎಂಬುದು ಇವತ್ತಿನ ಸಭೆ ಬಹಳ ಮುಖ್ಯವಾಗಿದೆ ಎಂದರು.

ರಾಜ್ಯದಲ್ಲಿ ತಕ್ಷಣ ಕ್ರಮ ಕೈಗೊಳ್ಳಬಹುದಾದ ಸ್ಥಿತಿ ವೈಜ್ಞಾನಿಕವಾಗಿ ಕಂಡುಬಂದಿಲ್ಲ. ಇಂದಿನ ಸಭೆಯಲ್ಲಿ ಏನು ತೀರ್ಮಾನ ಕೈಗೊಳ್ಳಲಾಗುವುದೋ ಅದನ್ನು ಆಮೇಲೆ ತಿಳಿಸುತ್ತೇವೆ. ಈಗಾಗಲೇ ಸಿಎಂ ತಜ್ಞರ ಜೊತೆ ಸಭೆ ಮಾಡಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಡಿಎಚ್‌ಓ ಗಳೇ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕು.

ಬೂಸ್ಟರ್ ಡೋಸ್ ಈಗಾಗಲೇ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಸ್ ಪಡೆಯಲು ಅವಕಾಶ ಇದೆ ಎಂದು ತಿಳಿಸಿದರು.

error: Content is protected !!