Sunday, 24th September 2023

ಅಕ್ರಮ ಮರಳುಗಾರಿಕೆಯಲ್ಲಿ ಅಧಿಕಾರಿಗಳ ಪಾಲು: ಖರ್ಗೆ ಆಕ್ರೋಶ

ಚಿತ್ತಾಪುರ: ಮತಕ್ಷೇತ್ರದಲ್ಲಿ ಬರುವ ಸರಕಾರಿ ಜಮೀನು ಮತ್ತು ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆ ಮತ್ತು ಮರಳು ಸಾಗಾಣಿಕೆಗೆ ಪರವಾನಿಗೆ ನೀಡಿದರು ಸಹಿತ ಮರಳುಗಾರಿಕೆಗೆ ಗುತ್ತಿಗೆ ಪಡೆದ ಗುತ್ತಿಗೆದಾರ ರಿಂದ ಅಕ್ರಮವಾಗಿ ಮರಳು ಸಾಕಾಟ ಮಾಡಲಾಗುತ್ತಿದೆ ಆದರೂ ಸಹಿತ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗ ಳನ್ನು ಸೇರಿಸಿ ಕಲಬುರ್ಗಿ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೂ ಪಾಲು ಇದೆ ಎಂಬುದು ಎದ್ದು ಕಾಣುತ್ತಿದೆ ಎಂದು ಶಾಸಕ ಪ್ರಿಯಾಂಕರಿಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ಚಿತ್ತಾಪುರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ ಅಕ್ರಮ ಮರಳು ಗಾರಿಕೆ ಮತ್ತು ಅಕ್ರಮ ಮರಳು ಸಾಗಾಣಿಕೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗುತ್ತಿದೆ ಆದರೂ ಸಹಿತ ಅಕ್ರಮ ಮರಳು ತಡೆಗಟ್ಟುವ ತಂಡದಿಂದ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಎಲ್ಲರೂ ಸಹಿತ ಅಕ್ರಮ ಮರಳುಗಾರಿಕೆಯಲ್ಲಿ ಸ್ಯಾಮೀಲು ಆಗಿದ್ದಾರೆ ಎಂಬುದು ಕಂಡುಬರುತ್ತದೆ. ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯ ಜಿಲ್ಲಾ ಮಿನರಲ್ ಫೌಂಡೇಶನ್ ವತಿಯಿಂದ ಕರವಸೂಲಿ ಮಾಡಿ ಗ್ರಾಮೀಣ ಭಾಗದಲ್ಲಿ ಯಾವುದೇ ಅಭಿವೃದ್ಧಿಗೆ ನೀಡದೆ ಜಿಲ್ಲೆಗೆ ನೀಡುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಅಕ್ರಮ ಮರಳು ಸಾಗಾಣಿಕೆಯಲ್ಲಿ ಪೊಲೀಸ ಸಿಬ್ಬಂದಿಗಳೇ ಖುದ್ದಾಗಿ ಮಾಹಿತಿ ನೀಡುತ್ತಿರುವುದು ಮರಳು ಗಣಿಗಾರಿಕೆ ಮಾಡುವವರೇ ಸಂಬಳ ನೀಡುವಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಟಾಚಾರಕ್ಕೆ ಗಣಿಗಾರಿಕೆ ಇಲಾಖೆ ತಮ್ಮ ಕಾರ್ಯನಿರ್ವಹಿಸದೆ ವಿಶೇಷ ತಂಡ ರಚಿಸಿಕೊಂಡು ಗುಪ್ತವಾಗಿ ದಾಳಿ ಮಾಡಬೇಕು ಇದರಿಂದ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಸಾಧ್ಯವಾಗುತ್ತದೆ ಅಲ್ಲದೆ ಗ್ರಾಮೀಣ ಭಾಗದ ರಸ್ತೆಗಳು ಸರಿಯಾಗಿ ಇರುತ್ತದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಚಿತ್ತಾಪುರ ತಹಸೀಲ್ದಾರ ಉಮಾಕಾಂತ ಹಳ್ಳೆ, ಶಹಾಬಾದ್ ತಹಶಿಲ್ದಾರ ಸುರೇಶ್ ವರ್ಮಾ, ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ನೀಲಗಂಗಾ ಬಬಲಾದ, ಬಸಲಿಂಗಪ್ಪ ಡಿಗ್ಗಿ, ಚಿತ್ತಾಪೂರ ಸಿಪಿಐ ಪ್ರಕಾಶ್ ಯಾತನೂರ,ಶಹಾಬಾದ್ ಸಿಪಿಐ ರಾಘವೇಂದ್ರ, ಗಣಿಗಾರಿಕೆ ಹಿರಿಯ ಅಧಿಕಾರಿ ರೋಹಿತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
error: Content is protected !!