Saturday, 30th September 2023

ಲೋಕಸಭೆಗೆ ಸೋಮಣ್ಣ ಬರ್ತಾರೆ: ಸಂಸದ ಬಸವರಾಜು

ತುಮಕೂರು: ನನಗೆ ೮೫ ವರ್ಷ ಆಯ್ತು ನಾನು ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದು ದೆಹಲಿಯಲ್ಲಿಯೇ ಹೇಳಿದ್ದೇನೆ, ನನ್ನ ಬದಲಿಗೆ ಸೋಮಣ್ಣ ಬರ‍್ತಾರೆ, ಅವರನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಂಸದ ಜಿ.ಎಸ್. ಬಸವರಾಜು ಸಲಹೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಗಾಯತರು ಹೀಗೆ ಕಿತ್ತಾಡ್ಕೊಂಡ್ರೆ ಊರಿಂದ ಓಡಿಸುತ್ತಾರೆ, ಇರೋ ಜಾಗ ವನ್ನು ಆಕ್ರಮಿಸಿಕೊಳ್ಳುತ್ತಾರೆ, ಅದಕ್ಕೆ ಕಾಲ ಸನ್ನಿಹಿತವಾಗಿದೆ, ವೀರಶೈವ-ಲಿಂಗಾಯತರು ಒಂದಾಗದಿದ್ದರೆ ಕಷ್ಟವಾಗಲಿದ್ದು, ವೀರಶೈವ-ಲಿಂಗಾಯತರನ್ನು ತುಳಿಯಲು ಬೇಕಾದ ಕುತಂತ್ರಗಳನ್ನು ಈಗಾಗಲೇ ಮಾಡಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ನನಗೆ ಶುಗರ್ ಬಂದು ೮೫ ವರ್ಷ ಆಯ್ತು, ಭಗವಂತ ವಾರೆಂಟ್ ಯಾವಾಗ ಕೊಡ್ತಾನೋ ಗೊತ್ತಿಲ್ಲ, ಮಿತಿ ಮೀರಿದ ದಿನಗಳನ್ನು ಬದುಕುತ್ತಿದ್ದೇನೆ, ಯಾರಿಗೂ ಕೆಡಕು ಮಾಡುವುದು ಬೇಡ, ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡೋಣ, ನಮ್ಮವರೇ ನಮ್ಮವರ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
error: Content is protected !!