Wednesday, 29th May 2024

ಹೋಳಿ ಹಬ್ಬಕ್ಕೆ ಶುಭಕೋರಿ ಮುಜುಗರಕ್ಕೀಡಾದ ನವಾಜ್ ಷರೀಫ್..!

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋಳಿ ಹಬ್ಬಕ್ಕೆ ಶುಭಕೋರುವ ವೇಳೆ ಹೋಳಿ ಹಬ್ಬಕ್ಕೆ ಶುಭ ಕೋರುತ್ತಾ ದೀಪದ ಎಮೋಜಿ ಬಳಸಿ ಮುಜುಗರಕ್ಕೀಡಾಗಿದ್ದಾರೆ.

ಟ್ವಿಟರ್‌ನಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದು ಅವರ ಪೋಸ್ಟ್ ನ ಸ್ಕ್ರೀನ್‌ಶಾಟ್‌ಗಳನ್ನು ಈಗ ಹಲವಾರು ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹಿಂದೂ ಸಂಪ್ರದಾಯಗಳ ಪ್ರಕಾರ ದೀಪಾವಳಿ ಹಬ್ಬದ ಸಮಯದಲ್ಲಿ ಮನೆಯನ್ನು ಅಲಂಕರಿಸಲು ದೀಪವನ್ನು ಬಳಸಲಾಗುತ್ತದೆ ಮತ್ತು ದೀಪಗಳ ಹಬ್ಬವಾದ ದೀಪಾವಳಿಗೆ ಶುಭ ಹಾರೈಸಲು ದೀಪದ ಎಮೋಜಿಯನ್ನು ಬಳಸಲಾಗುತ್ತದೆ.

ಆದರೆ ಹೋಳಿ ಹಬ್ಬಕ್ಕೆ ನವಾಜ್ ಷರೀಫ್ ದೀಪದ ಎಮೋಜಿ ಬಳಸಿದ್ದಾರೆ.

 

error: Content is protected !!