Friday, 26th July 2024

ಬುಡಕಟ್ಟು ಜನಾಂಗದವರ ನಡುವೆ ಸಂಘರ್ಷ: 15 ಮಂದಿ ಸಾವು

ಪೇಶಾವರ: ವಾಯುವ್ಯ ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿದಂತೆ ಎರಡು ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಲ್ಲಿ 15 ಮಂದಿ ಸಾವನ್ನಪ್ಪಿ ದ್ದಾರೆ.

ಪೇಶಾವರ ಪ್ರಕ್ಷುಬ್ಧ ವಾಯುವ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ವಿಂಗಡಣೆಗೆ ಸಂಬಂಧಿಸಿ ದಂತೆ 2 ಗುಂಪಿನ ನಡುವೆ ಬಂದೂಕಿನ ಮೂಲಕ ರಕ್ತಸಿಕ್ತ ಘರ್ಷಣೆ ನಡೆದು ಈವರೆಗೆ 15 ಜನರು ಸಾವನ್ನಪ್ಪಿದ್ದಾರೆ.

ಕೊಹತ್ ಜಿಲ್ಲೆಯ ಪೇಶಾವರದಿಂದ ನೈಋತ್ಯಕ್ಕೆ 35 ಕಿಮೀ ದೂರದಲ್ಲಿರುವ ದರ್ರಾ ಆಡಮ್ ಖೇಕ್ ಪ್ರದೇಶದಲ್ಲಿ ಬುಲಂದರಿಯ ಗುಡ್ಡಗಾಡು ಸಮುದಾಯದ ಭಾಗವಾಗಿರುವ ಸನ್ನಿಖೇಲ್ ಮತ್ತು ಜರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಗಣಿ ಡಿಲಿಮಿ ಟೇಶನ್ ಕುರಿತು ಗಲಾಟೆ ನಡೆದಿದೆ. ಈ ವಿಷಯವು ಅವರ ಮಧ್ಯೆ ಹೊಡೆದಾಟಕ್ಕೆ ತಿರುಗಿ ಸಾವಿಗೆ ಕಾರಣವಾಗಿದೆ.

ಗುಂಡಿನ ಚಕಮಕಿಯಲ್ಲಿ ಎರಡೂ ಜನಾಂಗದವರಲ್ಲಿ ಸಾವು ನೋವುಗಳು ಸಂಭವಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳ ಜಂಟಿ ತಂಡಗಳು ಧಾವಿಸಿದ್ದು, ಬುಡಕಟ್ಟು ಜನರ ನಡುವಿನ ಗುಂಡಿನ ದಾಳಿಯನ್ನು ನಿಲ್ಲಿಸಿದ್ದಾರೆ.

ಸನ್ನಿಖೇಲ್ ಮತ್ತು ಜರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಕಲ್ಲಿದ್ದಲು ಗಣಿಯ ಡಿಲಿಮಿಟೇಶನ್ ಕುರಿತು ಕಳೆದೆರಡು ವರ್ಷಗಳಿಂದ ವಾದ – ಪ್ರತಿವಾದ ಮುಂದುವರಿದಿದ್ದು, ಈ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಹಲವು ರಾಜಿ “ಜಿರ್ಗಾಸ್”ಗಳನ್ನು ನಡೆಸಲಾಗಿದೆ.

error: Content is protected !!