Tuesday, 28th May 2024

ಸರಣಿ ಬಾಂಬ್ ಸ್ಫೋಟ ಬೆದರಿಕೆ: ಓರ್ವನ ಬಂಧನ

ಮುಂಬೈ: ಪೊಲೀಸರಿಗೆ ಕರೆ ಮಾಡಿ ನಗರದಲ್ಲಿ 1993 ರ ಮಾದರಿಯ ಸರಣಿ ಬಾಂಬ್ ಸ್ಫೋಟಗಳ ಬೆದರಿಕೆಯೊಡ್ಡಿದ ಒಂದು ದಿನದ ನಂತರ, ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಓರ್ವನನ್ನು ಭಾನುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಎರಡು ತಿಂಗಳ ನಂತರ ಮಾಹಿಮ್, ಭೆಂಡಿ ಬಜಾರ್, ನಾಗ್ಪಾಡಾ, ಮದನ್‌ಪುರ ಮತ್ತು ಇತರ ಪ್ರದೇಶಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಲಿವೆ. ಕೋಮು ಗಲಭೆ ಗಳನ್ನು ನಡೆಸಲು ವಿವಿಧ ರಾಜ್ಯಗಳ ಜನರನ್ನು ಮುಂಬೈಗೆ ಕರೆಸಲಾಗಿದೆ ಎಂದು ಬೆದರಿಕೆ ಹಾಕಿದ್ದ ಎಂದು ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ.

ಕರೆ ಮಾಡಿದವರನ್ನು ಪತ್ತೆಹಚ್ಚಲು ಎಟಿಎಸ್ ಎರಡು ವಿಶೇಷ ತಂಡಗಳನ್ನು ರಚಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆತನನ್ನು ಮಲಾಡ್‌ನ ಉಪನಗರದಲ್ಲಿ ಪತ್ತೆಹಚ್ಚಿ ಬಂಧಿಸ ಲಾಗಿದೆ.

ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ದೌರ್ಜನ್ಯ, ಭೂಕಬಳಿಕೆ ಸೇರಿದಂತೆ 12 ಪ್ರಕರಣಗಳು ದಾಖಲಾಗಿವೆ.

ಮಾರ್ಚ್ 12, 1993 ರಂದು ಮುಂಬೈನಲ್ಲಿ ಕನಿಷ್ಠ 12 ಬಾಂಬ್ ಸ್ಫೋಟಗಳು ಸಂಭವಿಸಿ, 257 ಜನರು ಅಸುನೀಗಿದ್ದರು ಮತ್ತು ಕನಿಷ್ಠ 1,400 ಜನರು ಗಾಯಗೊಂಡಿದ್ದರು.
Read E-Paper click here

 

error: Content is protected !!