Saturday, 27th July 2024

ಗೋಡೆ, ರಸ್ತೆ ಮೇಲೆಲ್ಲಾ sorry.. sorry ಬರೆದು ಹುಚ್ಚಾಟ…!

ಬೆಂಗಳೂರು: ಮಾಗಡಿ ರಸ್ತೆ ಸುಂಕದಕಟ್ಟೆ ಶಾಂತಿಧಾಮ ಸ್ಕೂಲ್‌ನಲ್ಲಿ ಪಾಗಲ್ ಪ್ರೇಮಿಯೊಬ್ಬ ಶಾಲೆ ಗೋಡೆ ಮೇಲೆ, ರಸ್ತೆ ಮೇಲೆಲ್ಲಾ sorry.. sorry ಅಂತ ಬರೆದು ಹುಚ್ಚಾಟ ಮೆರೆದಿದ್ದಾನೆ.

ಸೋಮವಾರ ತಡ ರಾತ್ರಿ ಡ್ಯೂಕ್ ಬೈಕ್ ನಲ್ಲಿ ಫುಡ್ ಡೆಲಿವರಿ ಬ್ಯಾಗ್ ನೊಂದಿಗೆ ಬಂದ ಇಬ್ಬರು ಯುವಕರು ಕೆಂಪು ಬಣ್ಣದ ಸ್ಪ್ರೇ ತಂದು ಶಾಲೆ ಗೋಡೆ ಮೇಲೆ, ಮೆಟ್ಟಿಲುಗಳ ಬರೆದಿರುವುದಲ್ಲದೆ ರಸ್ತೆ ತುಂಬೆಲ್ಲಾ sorry..sorry ಅಂತ (ಕ್ಷಮೆ ಯಾಚನೆ) ಬರವಣಿಗೆ ಬರೆದಿದ್ದಾನೆ.

ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದ್ದಾರೆ. ಶಾಲೆ ಗೇಟ್ ಮೇಲೆ, ಗೋಡೆಗಳ ಮೇಲೆಲ್ಲಾ sorry.. sorry ಅಂತ ಬರೆದಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಎಲ್ಲಾ ರೀತಿಯಲ್ಲಿ ಮಾಹಿತಿ ನೀಡಿದ್ದೇವೆ. ಪೊಲೀಸರು ಆತನ ಹುಡುಕಾಟದಲ್ಲಿ ಇದ್ದಾರೆ ಎಂದು ಶಾಂತಿಧಾಮ ಶಾಲೆ ಪ್ರಾಂಶುಪಾಲರು ತಿಳಿಸಿದ್ದಾರೆ.

ಎಂದಿನಂತೆ ಶಾಲೆಗೆ ಬಂದ ಮಕ್ಕಳಿಗೆ ತಮ್ಮ ಶಾಲೆ ಗೋಡೆ ಮೇಲೆ, ಮಟೆಟ್ಟಿಲುಗಳ ಮೇಲೆ sorry.. sorry ಎಂಬ ಬರವಣಿಗೆ ನೋಡಿ ಗಾಬರಿಗೊಂಡಿದ್ದಾರೆ.

ಏರಿಯಾ ಬೀದಿಯಲ್ಲಿ ರಸ್ತೆ ನೋಡಿದ ಜನ ಇದೇನಿದು ರಂಗೋಲಿ ಹಾಕಿದ್ದಾರೆ ಎಂದು ಆಶ್ಚರ್ಯಪಟ್ಟಿದ್ದಾರೆ. ಸರಿಯಾಗಿ ನೋಡಿದಾಗ sorry.. sorry ಬರವಣಿಗೆ ನೋಡಿ ಶಾಂತಿಧಾಮ ಶಾಲೆ ರಸ್ತೆಯ ಜನರು ದಿಗ್ಬ್ರಮೆಗೊಂಡಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಬೈಕ್ ನಲ್ಲಿ ಬಂದ ಇಬ್ಬರು ಯುವಕರ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರು ಬಿದ್ದಿದ್ದಾರೆ.

error: Content is protected !!