Friday, 26th July 2024

ಆವೇಶ್ ಘಾತಕ ದಾಳಿ: ಸರಣಿ ಸಮಬಲ

ರಾಜ್‌ಕೋಟ್: ಸರಣಿ ಉಳಿವಿನ ದೃಷ್ಟಿಯಿಂದ ನಿರ್ಣಾಯಕ ಹೋರಾಟ ದಲ್ಲಿ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 82 ರನ್‌ಗಳಿಂದ ಏಕಪಕ್ಷೀಯವಾಗಿ ಮಣಿಸಿತು.

ಈ ಮೂಲಕ ಟಿ20 ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದ ರಿಷಭ್ ಪಂತ್ ಪಡೆ, ತವರು ನೆಲದಲ್ಲಿ ಸರಣಿ ಗೆಲುವಿನ ಆಸೆಯನ್ನು ಚಿಗುರಿಸಿ ಕೊಂಡಿತು. ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿ ಸಿದ್ದ ಭಾರತ ತಂಡ, ಪ್ರವಾಸಿ ತಂಡಕ್ಕೆ ತಿರುಗೇಟು ನೀಡಿದ್ದು, ಬೆಂಗಳೂರಿ ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಸರಣಿಗೆ ಕ್ಲೈಮ್ಯಾಕ್ಸ್ ಸಿಗಲಿದೆ.

ಶುಕ್ರವಾರ ನಡೆದ 4ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ದಿನೇಶ್ ಕಾರ್ತಿಕ್ (55 ರನ್, 27 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ (46ರನ್, 31 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 169 ರನ್ ಪೇರಿಸಿತು. ದಿನೇಶ್‌ ಕಾರ್ತಿಕ್‌ ಬಿರುಸಿನ ಗತಿಯಲ್ಲಿ 55 ರನ್‌ ಹೊಡೆದರು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾರ್ತಿಕ್‌ ಹೊಡೆದ ಮೊದಲ ಅರ್ಧ ಶತಕ.

ಯುವ ವೇಗಿ ಆವೇಶ್ ಖಾನ್ (18ಕ್ಕೆ 4) ಹಾಗೂ ಸ್ಪಿನ್ನರ್ ಯಜು ವೇಂದ್ರ ಚಾಹಲ್ (21ಕ್ಕೆ 2) ಮಾರಕ ದಾಳಿಗೆ ನಲುಗಿ 16.5 ಓವರ್‌ಗಳಲ್ಲಿ 87 ರನ್‌ಗಳಿಗೆ ಸರ್ವಪತನ ಕಂಡಿತು

ರಸಿ ವಾನ್‌ಡರ್ ಡುಸೆನ್(20 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಅವೇಶ್ ಖಾನ್‌ಗೆ ಸ್ಪಿನ್ನರ್ ಯಜುವೇಂದ್ರ ಚಹಾಲ್(2-21) ಉತ್ತಮ ಸಾಥ್ ನೀಡಿದರು.

ದಿನೇಶ್‌ ಕಾರ್ತಿಕ್‌-ಹಾರ್ದಿಕ್‌ ಪಾಂಡ್ಯ ಕೊನೆಯ ಹಂತದಲ್ಲಿ ನಡೆಸಿದ ಬಿರುಸಿನ ಬ್ಯಾಟಿಂಗ್‌ ಹಾಗೂ ಆವೇಶ್‌ ಖಾನ್‌ ಅವರ ದಿಟ್ಟ ಪ್ರತಿ ದಾಳಿಯಿಂದಾಗಿ ರಾಜ್‌ಕೋಟ್‌ನ ನಿರ್ಣಾಯಕ ಟಿ20 ಪಂದ್ಯವನ್ನು ಭಾರತ 82 ರನ್ನುಗಳಿಂದ ಭರ್ಜರಿಯಾಗಿ ಗೆದ್ದು ಸರಣಿಯನ್ನು 2-2

ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಭಾನುವಾರ ಬೆಂಗಳೂರು ಪಂದ್ಯ ಗೆದ್ದವರಿಗೆ ಸರಣಿ ಒಲಿಯಲಿದೆ.

ಚೇಸಿಂಗ್‌ ವೇಳೆ ದಕ್ಷಿಣ ಆಫ್ರಿಕಾಕ್ಕೆ ದಿಟ್ಟ ಆರಂಭ ಸಾಧ್ಯವಾಗಲಿಲ್ಲ. ನಾಯಕ ಬವುಮ ಗಾಯಾಳಾಗಿ ಕ್ರೀಸ್‌ ತ್ಯಜಿಸಿದ್ದು ಕೂಡ ಹಿನ್ನಡೆಯಾ ಯಿತು. ಆವೇಶ್‌ ಖಾನ್‌ ಒಂದೇ ಓವರ್‌ನಲ್ಲಿ ಡುಸೆನ್‌, ಜಾನ್ಸೆನ್‌ ಮತ್ತು ಮಹಾರಾಜ್‌ ವಿಕೆಟ್‌ ಕೆಡವಿ ಭಾರತಕ್ಕೆ ಮೇಲುಗೈ ಒದಗಿಸಿದರು.

ಶ್ರೇಯಸ್‌ ಅಯ್ಯರ್‌ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿದರೂ ಮುಂದಿನ ಎಸೆತದಲ್ಲೇ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ವಿಕೆಟ್‌ ಟೇಕರ್‌ ಮಾರ್ಕೊ ಜಾನ್ಸೆನ್‌. ಪವರ್‌ ಪ್ಲೇ ಮುಕ್ತಾಯಕ್ಕೆ ಭಾರತ 2 ವಿಕೆಟಿಗೆ 40 ರನ್‌ ಮಾಡಿತು.

7ನೇ ಓವರ್‌ನಲ್ಲಿ ರಿಷಭ್‌ ಪಂತ್‌- ಹಾರ್ದಿಕ್‌ ಪಾಂಡ್ಯ ಜತೆಗೂಡಿದರು. ಆದರೆ ರನ್‌ಗತಿಯಲ್ಲಿ ಸುಧಾರಣೆ ಆಗಲಿಲ್ಲ. ಇಬ್ಬರೂ ನಿಧಾನ ವಾಗಿ ಆಡುತ್ತಿದ್ದರು. ಅರ್ಧ ಹಾದಿ ಕ್ರಮಿಸುವಾಗ ಭಾರತ 3 ವಿಕೆಟಿಗೆ ಕೇವಲ 56 ರನ್‌ ಮಾಡಿತ್ತು.

ರಿಷಭ್‌ ಪಂತ್‌ ವೈಫ‌ಲ್ಯ ಇಲ್ಲಿಯೂ ಮುಂದುವರಿಯಿತು. 23 ಎಸೆತಗಳಿಂದ 17 ರನ್‌ ಮಾಡಿದ ಅವರು ಮಹಾರಾಜ್‌ಗೆ ವಿಕೆಟ್‌ ಒಪ್ಪಿಸಿದರು. 15 ಓವರ್‌ ಅಂತ್ಯಕ್ಕೆ ಭಾರತದ ಮೊತ್ತ 4ಕ್ಕೆ 96 ರನ್‌ ಆಗಿತ್ತು.

ಡೆತ್‌ ಓವರ್‌ಗಳಲ್ಲಿ ಹಾರ್ದಿಕ್‌ ಪಾಂಡ್ಯ- ದಿನೇಶ್‌ ಕಾರ್ತಿಕ್‌ ಜತೆಗೂಡಿದರು. ಇಬ್ಬರೂ ಮುನ್ನುಗ್ಗಿ ಬಾರಿಸತೊಡಗಿದರು. ಈ ಜೋಡಿ ಯಿಂದ 5ನೇ ವಿಕೆಟಿಗೆ 33 ಎಸೆತಗಳಿಂದ 65 ರನ್‌ ಒಟ್ಟುಗೂಡಿತು. ಇನ್ನೇನು ಪಾಂಡ್ಯ ಅರ್ಧ ಶತಕ ಪೂರೈಸಬೇಕೆನ್ನುವಾಗಲೇ ಎನ್‌ಗಿಡಿ ಮೋಡಿಗೆ ಸಿಲುಕಿದರು. ಪಾಂಡ್ಯ ಗಳಿಕೆ 31 ಎಸೆತಗಳಿಂದ 46 ರನ್‌ (3 ಬೌಂಡರಿ, 3 ಸಿಕ್ಸರ್‌).

ಭಾರತ 4ನೇ ಪಂದ್ಯದಲ್ಲೂ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದುದು ಅಚ್ಚರಿ ಮೂಡಿಸಿತು. ಹಾಗೆಯೇ ನಾಯಕ ರಿಷಭ್‌ ಪಂತ್‌ ಸತತ 4 ಪಂದ್ಯಗಳಲ್ಲಿ ಟಾಸ್‌ ಸೋತರು.

ಭಾರತ: 6 ವಿಕೆಟ್‌ಗೆ 169 (ಇಶಾನ್ ಕಿಶನ್ 27, ಹಾರ್ದಿಕ್ ಪಾಂಡ್ಯ 46, ದಿನೇಶ್ ಕಾರ್ತಿಕ್ 55, ಲುಂಗಿ ಎನ್‌ಗಿಡಿ 20ಕ್ಕೆ 2, ಮಾರ್ಕೋ ಜಾನ್ಸೆನ್ 38ಕ್ಕೆ 1, ಅನ್ರಿಚ್ ನೋಕಿಯ 21ಕ್ಕೆ 1, ಕೇಶವ್ ಮಹಾರಾಜ್ 29ಕ್ಕೆ 1),

ದಕ್ಷಿಣ ಆಫ್ರಿಕಾ: 16.5 ಓವರ್‌ಗಳಲ್ಲಿ 87 (ರಸೀ ವ್ಯಾನ್ ಡರ್ ಡುಸೆನ್ 20, ಮಾರ್ಕೋ ಜಾನ್ಸೆನ್ 12, ಕ್ವಿಂಟನ್ ಡಿಕಾಕ್ 14, ಆವೇಶ್ ಖಾನ್ 18ಕ್ಕೆ 4, ಯಜುವೇಂದ್ರ ಚಾಹಲ್ 21ಕ್ಕೆ 2, ಅಕ್ಷರ್ ಪಟೇಲ್ 19ಕ್ಕೆ 1).

error: Content is protected !!