Sunday, 23rd June 2024

ಹಾಕಿ ಒಲಿಂಪಿಯನ್ ಬ್ರಿಯಾನ್ ಬೂತ್ ನಿಧನ

ಮೇಲ್ಬರ್ನ್‌ : ಮಾಜಿ ಟೆಸ್ಟ್ ಆಟಗಾರ ಮತ್ತು ಹಾಕಿ ಒಲಿಂಪಿಯನ್ ಬ್ರಿಯಾನ್ ಬೂತ್ (89) ನಿಧನರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಶನಿವಾರ ತಿಳಿಸಿದೆ.

ಬೂತ್ ನಿಧನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಂತಾಪ ಸೂಚಿಸಿದೆ. ಬೂತ್ ಅವರ ಪತ್ನಿ ಜೂಡಿ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಬೂತ್ ಅವರು ಆಸ್ಟ್ರೇಲಿಯಾ ಪರ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 1960 ರ ದಶಕದ ಆರಂಭದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಲೈನ್‌ಅಪ್‌ನ ಪ್ರಮುಖ ಸದಸ್ಯರಾಗಿದ್ದರು ಮತ್ತು 42.21 ರ ಸರಾಸರಿಯಲ್ಲಿ 1,773 ಟೆಸ್ಟ್ ರನ್‌ಗಳನ್ನು ಗಳಿಸಿದರು. ಬೂತ್ ಅವರು 1961 ಮತ್ತು 1966 ರ ನಡುವೆ ಆಸ್ಟ್ರೇಲಿಯಾಕ್ಕಾಗಿ 29 ಟೆಸ್ಟ್‌ಗಳನ್ನು ಆಡಿದರು, ಇದರಲ್ಲಿ ಎರಡು ಬಾರಿ ನಾಯಕರಾಗಿದ್ದರು.

error: Content is protected !!