Sunday, 23rd June 2024

ಶ್ರೀಲಂಕಾ – ಭಾರತ ಸರಣಿ: ಪರಿಷ್ಕೃತ ವೇಳಾಪಟ್ಟಿ ಹೀಗಿದೆ…

ನವದೆಹಲಿ : ಶ್ರೀಲಂಕಾ ವಿರುದ್ದದ ಮುಂಬರುವ ಭಾರತ ಪ್ರವಾಸದ ಪರಿಷ್ಕೃತ ವೇಳಾಪಟ್ಟಿಯನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ಪ್ರಕಟಿಸಿದೆ.

ಟೀಂ ಇಂಡಿಯಾ ಶ್ರೀಲಂಕಾ ಮೊದಲು ಮೂರು ಪಂದ್ಯಗಳನ್ನು ಒಳಗೊಂಡ ಟಿ20ಐ ಸರಣಿ ಆಡಲಿದೆ. ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನ ಆಡಲಿದೆ. ಇದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್, 2021-23ರ ಭಾಗವಾಗಲಿದೆ.

ಮೊದಲ ಟಿ20ಗೆ ಲಕ್ನೋ ಆತಿಥ್ಯ ವಹಿಸಲಿದ್ದು, ಮುಂದಿನ ಎರಡು ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಮಾರ್ಚ್ 4 ರಿಂದ 8ರವರೆಗೆ ಮೊಹಾಲಿಯಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಮಾರ್ಚ್ 12 ರಿಂದ 16ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

error: Content is protected !!