Sunday, 16th June 2024

ಇಶಾನ್‌ ಕಿಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಧರ್ಮಶಾಲಾ : ಶ್ರೀಲಂಕಾ ವಿರುದ್ಧದ ಎರಡನೇ ಟಿ20ಯಲ್ಲಿ ಬ್ಯಾಟಿಂಗ್ ಮಾಡುವಾಗ ಭಾರತದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ತಲೆಗೆ ಗಾಯಗೊಂಡಿದ್ದ ಇಶಾನ್‌ ಕಿಶನ್‌ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಲಹಿರು ಕುಮಾರ ಅವರ ಎಸೆತದಲ್ಲಿ ಇಶಾನ್ ಗಾಯಗೊಂಡಿದ್ದು, ಫಿಸಿಯೋ ಮೈದಾನಕ್ಕೆ ಬರಬೇಕಾಯಿತು. ಆದಾಗ್ಯೂ ಬ್ಯಾಟಿಂಗ್ ಪ್ರಾರಂಭಿಸಿದರು. ಆರನೇ ಓವರ್ʼನ ಮೊದಲ ಎಸೆತದಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ಈ ವೇಳೆ ಅವರು 16 ರನ್ ಗಳಿಸಿದ್ದರು. ಆದಾಗ್ಯೂ, ಇಶಾನ್ ಅವರನ್ನ ಕಾಂಗ್ರಾದ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸಿಟಿ ಸ್ಕ್ಯಾನ್ ನಡೆಸಿದ ನಂತರ ಜನರಲ್ ವಾರ್ಡ್ʼಗೆ ಸ್ಥಳಾಂತರಿಸಲಾಯಿತು. ವೈದ್ಯರ ಮೇಲ್ವಿಚಾರಣೆಯಲ್ಲಿ ರಾತ್ರಿ ಕಳೆದಿದ್ದು, ಸಧ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

error: Content is protected !!