Friday, 26th July 2024

ಲಖನೌ ಸೂಪರ್​ಜೈಂಟ್ಸ್​-ಮುಂಬೈ ಇಂಡಿಯನ್ಸ್​ ಎಲಿಮಿನೇಟರ್​ ಪಂದ್ಯ ಇಂದು

ಚೆನ್ನೈ: ಇಂದಿನ ಎಲಿಮಿನೇಟರ್​ ಪಂದ್ಯದಲ್ಲಿ ಲಖನೌ, ಮುಂಬೈ ಸೆಣಸಾಡ ಲಿವೆ. ಗೆದ್ದ ತಂಡ 2ನೇ ಕ್ವಾಲಿಫೈಯರ್​ನಲ್ಲಿ ಗುಜರಾತ್​ ಟೈಟಾನ್ಸ್​ ಎದುರಿಸಲಿದೆ.

ಮೊದಲ ಕ್ವಾಲಿಫೈಯರ್​ ಪಂದ್ಯ ಮುಗಿದಿದೆ. ಚೆನ್ನೈ ಸೂಪರ್​ಕಿಂಗ್ಸ್​ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ. ಬುಧವಾರ ಲಖನೌ ಸೂಪರ್​ಜೈಂಟ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಮಧ್ಯೆ ಎಲಿಮಿನೇಟರ್​ ಪಂದ್ಯ ನಡೆಯಲಿದೆ. ಗೆದ್ದ ತಂಡ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದರೆ, ಸೋತ ತಂಡ ಪ್ರಶಸ್ತಿ ರೇಸ್​ನಿಂದಲೇ ಹೊರಬೀಳಲಿದೆ.

ಲಖನೌ ಸೂಪರ್​ ಜೈಂಟ್ಸ್​ಗೆ ಇದು 2ನೇ ಆವೃತ್ತಿಯ ಐಪಿಎಲ್​. ಈ ತಂಡ ಎರಡೂ ಬಾರಿ ಪ್ಲೇಆಫ್​ಗೆ ತಲುಪಿದೆ.

ಕಳೆದ ಆವೃತ್ತಿಯಲ್ಲಿ ಎಲಿಮಿನೇಟರ್​ ಪಂದ್ಯದಲ್ಲಿ ಸೋತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೀಗ ಮತ್ತೆ ಎಲಿಮಿನೇಟರ್​ ಹಂತಕ್ಕೆ ಬಂದಿದ್ದು, ಗೆದ್ದು ಮುಂದಿನ ಹಂತ ಪ್ರವೇಶ ನಿರೀಕ್ಷೆಯಲ್ಲಿದೆ.

5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಆಡಿದ 14 ಪಂದ್ಯಗಳಲ್ಲಿ 8 ರಲ್ಲಿ ಗೆದ್ದು 6 ಸೋತು 16 ಅಂಕ ಸಂಪಾದಿಸಿದೆ. ಪ್ಲೇಆಫ್​​ಗೇರಲು ಭಾರಿ ಕಸರತ್ತು ಮಾಡಿದ್ದ ತಂಡ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಸೋತಿದ್ದು ವರದಾನವಾಯಿತು.

ಬ್ಯಾಟಿಂಗ್​ ಪಡೆಯನ್ನೇ ಹೊಂದಿರುವ ಮುಂಬೈ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ ನಾಯಕ ರೋಹಿತ್​ ಶರ್ಮಾ ಲಯ ಕಂಡುಕೊಂಡಿದ್ದಾರೆ.

ಇಶಾನ್​ ಕಿಶನ್​, ಕ್ಯಾಮರೂನ್ ಗ್ರೀನ್​, ಸೂರ್ಯಕುಮಾರ್​ ಯಾದವ್​ ಬ್ಯಾಟಿಂಗ್​ ಮೇಲೆ ತಂಡ ಆಧಾರವಾಗಿದೆ. ಇದಲ್ಲದೇ ತಿಲಕ್​ ವರ್ಮಾ, ನೇಹಲ್​ ವದೇರಾ, ಟಿಮ್​ ಡೇವಿಡ್​ ಕೂಡ ಕೊಡುಗೆ ನೀಡಬೇಕು. ಬೌಲಿಂಗ್​ನಲ್ಲಿ ಬೆಹ್ರನ್​ಡೂರ್ಫ್​, ಆಕಾಶ್​ ಮದ್ವಾಲ್​, ಕ್ರಿಶ್​ ಜೋರ್ಡಾನ್​ ಬಲ ತುಂಬಿದರೆ, ಹಿರಿಯ ಸ್ಪಿನ್ನರ್​ ಪಿಯೂಷ್​​ ಚಾವ್ಲಾ ತಮ್ಮ ಜಾಲ ಬೀಸಬೇಕಿದೆ.

ಕೃನಾಲ್​ ಪಾಂಡ್ಯ ಲಖನೌ ತಂಡದ ಹೊಣೆ ಹೊತ್ತಿದ್ದು, ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಬ್ಯಾಟಿಂಗ್​​ನಲ್ಲಿ ಕೈಲ್​ ಮೇಯರ್ಸ್​, ಕ್ವಿಂಟನ್​ ಡಿಕಾಕ್​, ಮಾರ್ಕಸ್​ ಸ್ಟೋಯಿನೀಸ್​, ನಾಯಕ ಕೃನಾಲ್​ ಪಾಂಡ್ಯ, ನಿಕೋಲಸ್​ ಪೂರನ್​ ಆಧಾರ ವಾಗಿದ್ದರೆ, ಬೌಲಿಂಗ್​ನಲ್ಲಿ ಯಶ್​ ಠಾಕೂರ್​, ಮೊಹ್ಸಿನ್​ ಖಾನ್​, ಸ್ಪಿನ್ನರ್​ ರವಿ ಬಿಷ್ಣೋಯಿ ಟ್ರಂಪ್​ ಕಾರ್ಡ್​ ಆಗಿದ್ದಾರೆ.

ಸಂಭಾವ್ಯ ತಂಡಗಳು: ಲಖನೌ- ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೌನಿ, ಕೆ ಗೌತಮ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.

ಮುಂಬೈ: ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮರೂನ್​ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ/ವಿಷ್ಣು ವಿನೋದ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಹೃತಿಕ್ ಶೋಕೀನ್.

error: Content is protected !!