Saturday, 27th July 2024

ಲಖನೌ ವಿರುದ್ದ ಆರ್‌ಸಿಬಿ ಉತ್ತಮ ಪ್ರದರ್ಶನ ಅನಿವಾರ್ಯ…

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದೆ.

ಸೋಲು ಗೆಲುವಿನ ಹಾದಿಯಲ್ಲಿ ಸಾಗಿದ ಬೆಂಗಳೂರು ತಂಡ ಇದೀಗ ಸತತ ಮೂರನೇ ಬಾರಿಗೆ ಐಪಿಎಲ್ ನ ಪ್ಲೇ ಆಫ್ಸ್ ಪ್ರವೇಶಿಸಿದೆ.

ತನ್ನ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಕಳೆದ ಮೂರು ವರ್ಷಗಳಿಂದ ಆರ್ ಸಿಬಿ ಪ್ಲೇ ಆಫ್ಸ್ ಪ್ರವೇಶಿಸಿ, ಎಲಿಮಿನೇಟರ್ ನಲ್ಲಿ ಸೋಲುಂಡು ನಿರಾಸೆಯಿಂದ ಟೂರ್ನಿಯ ಅಭಿಯಾನ ಮುಗಿಸಿದೆ.

ಲೀಗ್ ಹಂತದಲ್ಲಿ ಲಕ್ನೋ ತಂಡ ಎದುರಾಳಿಗಳ ಮೇಲೆ ಸವಾರಿ ಮಾಡಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಲಕ್ನೋ ಬಲಿಷ್ಠವಾಗಿದೆ. ಹೀಗಾಗಿ ಆರ್ ಸಿಬಿ ಸಾಕಷ್ಟು ಪರಿಶ್ರಮವಹಿಸಬೇಕಾಗಿದೆ. ಆರಂಭಿಕರಾಗಿ ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲಸಿಸ್ ಕಳೆದ ಪಂದ್ಯದಲ್ಲಿ ನೀಡಿದ್ದ ಪ್ರದರ್ಶನವನ್ನೇ ಮುಂದುವರೆಸಬೇಕು. ಮಿಡಲ್ ಆರ್ಡರ್ ನಲ್ಲಿ ರಜತ್, ಮ್ಯಾಕ್ಸ್ ವೆಲ್ ಎಂದಿನಂತೆ ತಂಡಕ್ಕೆ ನೆರವಾಗಬೇಕು. ಇವರಿಗೆ ಮಹಿಪಾಲ್ ಲೋಮ್ರೋರ್ ಸಾಥ್ ನೀಡಬೇಕು.

ಆರ್ ಸಿಬಿಗೆ ಪ್ರಾಬ್ಲಂ ಇರುವುದು ಬೌಲಿಂಗ್ ನಲ್ಲಿ. ಹೆಜಲ್ ವುಡ್, ವನಿಂದು ಹಸರಂಗ ವಿಕೆಟ್ ಪಡೆಯುತ್ತಿದ್ದಾರೆ. ಹರ್ಷಲ್ ದುಬಾರಿ ಆಗುತ್ತಿದ್ದಾರೆ. ಸಿರಾಜ್ ಗೆ ಕಳೆದ ಪಂದ್ಯದಿಂದ ಕೋಕ್ ನೀಡಲಾಗಿತ್ತು. ಅವರ ಜಾಗದಲ್ಲಿ ಸಿದ್ಧಾರ್ಥ್ ಕೌಲ್ ಗೆ ಅವಕಾಶ ನೀಡಲಾಗಿತ್ತು.

error: Content is protected !!