Sunday, 28th April 2024

ಅಗ್ರ ಸ್ಥಾನಕ್ಕೇರಲು ಡೆಲ್ಲಿ ಪ್ರಯತ್ನ

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮಂಗಳವಾರ ಪಂದ್ಯದಲ್ಲಿ ಸೆಣಸಲಿದ್ದು ಡೆಲ್ಲಿ ಅಗ್ರ ಸ್ಥಾನಕ್ಕೇರಲು ಪ್ರಯತ್ನಿಸಲಿದೆ.

ಸನ್‌ರೈಸರ್ಸ್‌ಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಜಯ ಅನಿವಾರ್ಯ. ಉತ್ತಮ ಆಟದ ಮೂಲಕ ನಾಗಾಲೋಟ ಓಡುತ್ತಿದ್ದ ಡೆಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಕೋಲ್ಕತ್ತ ನೈಟ್ ರೈಡರ್ಸ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಸೋತು ನಿರಾಸೆಗೆ ಒಳಗಾಗಿದೆ. ಆದ್ದರಿಂದ ಜಯದ ಎರಡು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮಂಗಳವಾರ ಪ್ರಯತ್ನಿಸಲಿದೆ.

ಎಂಟು ಪಾಯಿಂಟ್‌ಗಳನ್ನು ಕಲೆ ಹಾಕಿರುವ ಡೇವಿಡ್ ವಾರ್ನರ್ ಬಳಗ ಎರಡು ಪಾಯಿಂಟ್‌ಗಳನ್ನು ಗಳಿಸಿ ಮತ್ತೆ ಉಳಿದ ಎರಡು ಪಂದ್ಯಗಳಲ್ಲೂ ಗೆದ್ದರೆ ಪ್ಲೇಆಫ್‌ಗೇರುವ ಸಾಧ್ಯತೆಗಳು ಇವೆ.

Leave a Reply

Your email address will not be published. Required fields are marked *

error: Content is protected !!