Saturday, 15th June 2024

ವನಿತಾ ಪ್ರೀಮಿಯರ್‌ ಲೀಗ್‌: ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು

ಮುಂಬೈ: ಆರ್‌ಸಿಬಿ ತಂಡ ಭಾನುವಾರ ಅಪರಾಹ್ನ ಚೊಚ್ಚಲ ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಕಣಕ್ಕಿಳಿಯ ಲಿದೆ. ಎದುರಾಳಿ, ಮೆಗ್‌ ಲ್ಯಾನಿಂಗ್‌ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌.

ಕೂಟದ ಹರಾಜಿನಲ್ಲೇ ಅತ್ಯಧಿಕ 3.40 ಕೋಟಿ ರೂ.ಗೆ ಮಾರಾಟಗೊಂಡ ಸ್ಮತಿ ಮಂಧನಾ, ಎಲ್ಲಿಸ್‌ ಪೆರ್ರಿ, ಹೀತರ್‌ ನೈಟ್‌, ಸೋಫಿ ಡಿವೈನ್‌, ಮರಿಜಾನ್‌ ಕಾಪ್‌, ಮೆಗಾನ್‌ ಶಟ್‌, ರಿಚಾ ಘೋಷ್‌… ಸಮಕಾಲೀನ ಶ್ರೇಷ್ಠರೆಲ್ಲ ಒಂದೇ ಫ್ರೆàಮ್‌ನಲ್ಲಿ ಸೇರಿಕೊಂಡಿದ್ದಾರೆ.

ಡೆಲ್ಲಿ ಕೂಡ ಅಷ್ಟೇ ಬಲಿಷ್ಠವಾಗಿದೆ. 5 ಟಿ20 ವಿಶ್ವಕಪ್‌ ವಿಜೇತ ಆಸೀಸ್‌ ತಂಡದ ಸ್ಟಾರ್‌ ಆಟ ಗಾರ್ತಿ ಮೆಗ್‌ ಲ್ಯಾನಿಂಗ್‌ ಡೆಲ್ಲಿ ತಂಡದ ಸಾರಥಿಯಾಗಿ ದ್ದಾರೆ. ಜೆಸ್‌ ಜೊನಾಸೆನ್‌, ಮರಿಜಾನ್‌ ಕಾಪ್‌, ಅಲೈಸ್‌ ಕ್ಯಾಪ್ಸಿ ಡೆಲ್ಲಿಯ ನಾಲ್ವರು ಪ್ರಮುಖ ವಿದೇಶಿ ಆಟಗಾರ್ತಿಯರು.

ಡೆಲ್ಲಿ ಭಾರತೀಯ ಪ್ರತಿಭೆಗಳನ್ನು ಹೊಂದಿರುವ ತಂಡ. ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ಶಿಖಾ ಪಾಂಡೆ, ಪೂನಂ ಯಾದವ್‌, ಅರುಂಧತಿ ರೆಡ್ಡಿ, ತನಿಯಾ ಭಾಟಿಯಾ, ರಾಧಾ ಯಾದವ್‌, ಅಂಡರ್‌-19 ವಿಶ್ವಕಪ್‌ನಲ್ಲಿ ಮಿಂಚಿದ ತಿತಾಸ್‌ ಸಾಧು, ಜಮ್ಮು ಮತ್ತು ಕಾಶ್ಮೀರದ ಬಿಗ್‌ ಹಿಟ್ಟರ್‌ ಜಾಸಿಯಾ ಅಖ್ತರ್‌ ಅವರೆಲ್ಲ ತವರಿನ ಪ್ರಮುಖ ಆಟಗಾರ್ತಿಯರು.

error: Content is protected !!