Sunday, 24th September 2023

ಕೆ ಎಸ್ ಆರ್ ಟಿಸಿ, ಬಿ ಎಂ‌ ಟಿ ಸಿ ಬಸ್ಸುಗಳಲ್ಲಿ ರೂ.2,000 ನೋಟು ಸ್ವೀಕೃತ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೃಹತ್ ಬೆಂಗ ಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ.

ಕೆ ಎಸ್ ಆರ್ ಟಿಸಿ ಬಸ್ಸುಗಳಲ್ಲಿ ನಿರ್ವಾಹಕರಿಗೆ ರೂ.2,000 ನೋಟು ಗಳನ್ನು ತೆಗೆದುಕೊಳ್ಳಬಾರದು ಎಂಬುದಾಗಿ ಎಲ್ಲಿಯೂ ಆದೇಶ ಮಾಡಿಲ್ಲ ಎಂದಿದೆ.

ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರಿಂದ 2 ಸಾವಿರ ರೂಪಾಯಿಯ ನೋಟು ಗಳನ್ನು ತೆಗೆದುಕೊಳ್ಳದಂತೆ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂಬುದು ಸುಳ್ಳಾಗಿದೆ. ಪ್ರಯಾಣಿಕರಿಂದ 2 ಸಾವಿರ ನೋಟುಗಳನ್ನು ಸಂಚಾರದ ವೇಳೆಯಲ್ಲಿ ನಿರ್ವಾ ಹಕರು ಸ್ವೀಕರಿಸುತ್ತಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದೆ.

ಇನ್ನೂ ಬಿ ಎಂ‌ ಟಿ ಸಿ ಕೇಂದ್ರ ಕಛೇರಿಯಿಂದ, ಬಸ್ಸಿನಲ್ಲಿ ನಿರ್ವಾಹಕರು ರೂ. 2000 ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಯಾವುದೇ ಆದೇಶ ಹೊರಡಿಸಿರುವುದಿಲ್ಲ. ಹೊಸ ಕೋಟೆ ಘಟಕ ದಿಂದ ಮಾತ್ರ ಈ ರೀತಿ ತಪ್ಪಾದ ಆದೇಶ ನೀಡಲಾಗಿದ್ದು, ತದನಂತರ ಈ ಆದೇಶವನ್ನು ಹಿಂಪಡೆಯಲಾಗಿದೆ. ಬಿಎಂಟಿ‌ಸಿ ಬಸ್ಸುಗಳಲ್ಲಿ ರೂ 2000 ನೋಟುಗಳನ್ನು ಸ್ವೀಕರಿಸಲಾಗುತ್ತಿದೆ ಎಂಬುದಾಗಿ ತಿಳಿಸಿದೆ.

ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಬಸ್ಸುಗಳಲ್ಲಿ ಆರ್ ಬಿಐ ಹಿಂತೆಗೆದುಕೊಂಡ 2000 ರೂ ನೋಟುಗಳನ್ನು ಪ್ರಯಾಣಿಕರಿಂದ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ ಎಂಬುದಾಗಿ ಸುದ್ದಿ ಹರಿದಾಡುತ್ತಿತ್ತು.

error: Content is protected !!