Saturday, 27th July 2024

ನಾಳೆ ಮತ ಎಣಿಕೆ: ಮದ್ಯಮಾರಾಟಕ್ಕೆ ನಿಷೇಧ

ಬೆಂಗಳೂರು: ನಾಳೆ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಇಡೀ ದಿನ ಮದ್ಯ ಮಾರಾಟ ಇರುವುದಿಲ್ಲ. ಭಾನುವಾರ ಬೆಳಗ್ಗೆ ಎಂದಿನ ಹಾಗೇ ಮದ್ಯಮಾರಾಟ ವ್ಯವಹಾರ ಮುಂದುವರೆಯಲಿದೆ.

ಚುನಾವಣೆ ಗೆಲುವಿನ ಬಳಿಕ ಯಾವುದೇ ಮೆರವಣಿಗೆ ಮತ್ತು ಪಟಾಕಿ, ಸಂಭ್ರಮವನ್ನು ಹಮ್ಮಿಕೊಳ್ಳುವುದು ನಿಶೇಧ ಮಾಡಲಾಗಲಿದೆ.

ನಾಳೆ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಈ ನಡುವೆ ಮುಂಜಾಗ್ರತ ಕ್ರಮವಾಗಿ ಪೋಲಿಸ್‌ ಮತ್ತು ಎಲ್ಲಾ ಜಿಲ್ಲಾಡಳಿತಗಳು ಬಿಗಿ ಪೋಲಿಸ್‌ ಬಂದೋಬಸ್ತ್‌ ಅನ್ನು ಹಮ್ಮಿಕೊಂಡಿದೆ. ನಾಳೆ ಶನಿವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.

ನಾಳೆ ಬೆಳಗ್ಗೆ ಮೊದಲು ಅಂಚೆ ಮತ್ರ ಪತ್ರಗಳು, ಮತ್ತು ವಯಸ್ಕರ ಮತಪತ್ರಗಳನ್ನು ಏಣಿಕೆ ಮಾಡಿದ ಬಳಿಕ, ಇವಿಎಂನಲ್ಲಿ ದಾಖಲಾಗಿರುವ ಮತಗಳನ್ನು ಏಣಿಕೆ ಮಾಡಲಾಗುತ್ತದೆ. 24 ಗಂಟೆಯೂ 3 ಪಾಳಿಯಲ್ಲಿ ಶಸ್ತ್ರಸಜ್ಜಿತ ಅರೆ ಮಿಲಿಟರಿ ಪಡೆ, ಸಿಟಿ ಸಿವಿಲ್ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

error: Content is protected !!