Friday, 20th September 2024

ಕೇರಳದಲ್ಲಿ ಏರ್ ಇಂಡಿಯಾ ವಿಮಾನ ದುರಂತ

ಕೇರಳ:

ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಬಂದಿದ್ದ ಏರ್​ ಇಂಡಿಯಾ ಏಕ್ಸ್​ಪ್ರೆಸ್​ ವಿಮಾನ ಕೇರಳದ ಕೋಯಿಕ್ಕೋಡ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ ಪೈಲೆಟ್‌ ಸೇರಿ 16 ಮಂದಿ ಸಾವಿಗೀಡಾಗಿದ್ದಾರೆ.

ಏರ್ ಇಂಡಿಯಾ ಬೋಯಿಂಗ್​ 1X1344 ವಿಮಾನವಾಗಿದ್ದು, ಸಂಜೆ 7:45ರ ವೇಳೆ ಲ್ಯಾಂಡ್​​ ಆಗಿದ್ದು, ರನ್​ವೇನಿಂದ ಜಾರಿ ಕಣಿವೆಗೆ ಬಿದ್ದಿದೆ.ಕೇರಳದ ಪೊಲೀಸ್​ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ 40ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳದ ದೃಶ್ಯಾವಳಿನತದೃಷ್ಟ ವಿಮಾನದಲ್ಲಿ ಕರ್ನಾಟಕದ ಓರ್ವ ಯುವತಿ ಸೇರಿ 191 ಪ್ರಯಾಣಿಕರಿದ್ದರು. 10 ಮಕ್ಕಳು, ಇಬ್ಬರು ಪೈಲೆಟ್​, 4 ಕ್ಯಾಬಿನ್​​ ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ನಾಗರಿಕ ವಿಮಾನಯಾನ ಇಲಾಖೆ ಮಾಹಿತಿ ನೀಡಿದೆ.

ಏರ್​ ಇಂಡಿಯಾ ವಿಮಾನದಲ್ಲಿ ಪೈಲಟ್‌ ವಸಂತ್​ ದೀಪಕ್​, ಕ್ಯಾಪ್ಟನ್​ ಅಖಿಲೇಶ್​​ ಕುಮಾರ್​ ಹಾಗು ಸಿಬ್ಬಂದಿಗಳಾದ ಶಿಲ್ಪಾ, ಅಕ್ಷಯ್​ ಸಿಂಗ್​, ಕುಮಾರ್​ ಲಲಿತಾ ಹಾಗೂ ಬಿಸ್ವಾಸ್​ ಇದ್ದರು.

ಕಳೆದ ವರ್ಷವೂ ನಡೆದಿತ್ತು ಘಟನೆ!
2019ರ ಜುಲೈ1ರಂದು ಕೋಯಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ ಇಂಥದ್ದೇ ದುರಂತ ಸಂಭವಿಸಿತ್ತು. ಅಂದು ಸೌದಿ ಅರೇಬಿಯಾದಿಂದ ಬಂದಿದ್ದ ಏರ್​ ಇಂಡಿಯಾ ವಿಮಾನ ಲ್ಯಾಂಡ್ ಆಗುತ್ತಿದ್ದಾಗ ವಿಮಾನದ ಹಿಂಬದಿ ಭಾಗ ರನ್​ವೇಗೆ ಟಚ್​ ಆಗಿತ್ತು. ಈ ಘಟನೆಯಲ್ಲಿ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದರು.