ಅರ್ಹತೆಗೆ ತಕ್ಕ ಉದ್ಯೋಗವಿಲ್ಲ
ಅಭ್ಯರ್ಥಿಗಳು ನಿರಾಸೆ
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಯೋಗದೊಂದಿಗೆ ಸದರಿ ವರ್ಷದಲ್ಲಿ (2022) 64 ಆಯೋಜಕರು 6 ಬಾರಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಗಳಲ್ಲಿ 1877 ಮಂದಿ ಭಾಗವಹಿಸಿ, ಕೇವಲ 269 ಮಂದಿ ಮಾತ್ರ ಉದ್ಯೋಗ ಪಡೆದಿದ್ದಾರೆ.
ಉದ್ಯೋಗ ಮೇಳಗಳಲ್ಲಿ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುವುದು ಕಷ್ಟ. ಆದ್ದರಿಂದ ನಿರುದ್ಯೋಗಿಗಳು ಮೇಳಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಕಂಪನಿಗಳಲ್ಲಿ ಕೆಲಸ ಸಿಕ್ಕರೂ ಬಹಳ ದಿನಗಳ ಕಾಲ ಅಭ್ಯರ್ಥಿಗಳು ಕಾರ್ಯ ನಿರ್ವಹಿಸುವುದಿಲ್ಲ. ನಿರುದ್ಯೋಗಿಗಳಿಗೆ ಆಸರೆಯಾಗುವ ಬದಲು ಕೇವಲ ಪ್ರಚಾರಕ್ಕೆ ಮಾತ್ರ ಉದ್ಯೋಗ ಮೇಳಗಳು ಸೀಮಿತ ವಾಗುತ್ತಿವೆ.
ಸವಲತ್ತಿಲ್ಲದೆ ಸೊರಗುತ್ತಿದೆ ವಿನಿಮಯ ಕಚೇರಿ
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸ್ವಂತ ಕಟ್ಟಡ ಹಾಗೂ ಸವಲತ್ತುಗಳಿಲ್ಲದೆ ಸೊರಗುತ್ತಿದೆ. ಸಿಬ್ಬಂದಿಗಳ ಕೊರತೆ, ಆರ್ಥಿಕ ನೆರವು ಇಲ್ಲದೆ ನರಳುತ್ತಿರುವ ಇಲಾಖೆಗೆ ಸರಕಾರ ನೆರವು ನೀಡಬೇಕಾಗಿದೆ.
ತಿಂಗಳು -ಭಾಗವಹಿಸಿದ್ದವರು-ಕೆಲಸ ದೊರಕಿದ್ದು
ಏಪ್ರಿಲ್-176-41
ಮೇ–137-48
ಜೂನ್-256-47
ಜುಲೈ-1026-51
ಆಗಸ್ಟ್-109-41
ಸೆಪ್ಟೆಂಬರ್–173-41
—————————— —
ಒಟ್ಟು-1877-269
*
ಉದ್ಯೋಗ ಮೇಳಗಳು ಪ್ರಚಾರಕ್ಕೆ ಸೀಮಿತವಾಗದೆ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿ ಜೀವನ ಭದ್ರತೆ ನೀಡಬೇಕು. ಮೇಳಗಳಲ್ಲಿ ಅರ್ಹತೆಗೆ ತಕ್ಕಂತೆ ಹಾಗೂ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಸಿಗುವುದು ಕಷ್ಟ.
ರಾಜು, ನಿರುದ್ಯೋಗಿ
ಮುಖ್ಯಾಂಶಗಳು
*ಸಿಬ್ಬಂದಿ, ಸವಲತ್ತುಗಳಿಲ್ಲದೆ ಸೊರಗುತ್ತಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ.
*2022ರಲ್ಲಿ 64 ಆಯೋಜಕರ ಸಹಯೋಗದೊಂದಿಗೆ 6 ಬಾರಿ ಉದ್ಯೋಗ ಮೇಳ.
*1877 ಮಂದಿ ಭಾಗವಹಿಸಿ, ಕೇವಲ 269 ನಿರುದ್ಯೋಗಿಗಳಿಗೆ ಮಾತ್ರ ಉದ್ಯೋಗ.