Monday, 25th November 2024

ಗೆಲ್ಲಿಸುವ ಮೂಲಕ ಟೀಕೆಗಳಿಗೆ ಉತ್ತರ ಕೊಡುತ್ತೇನೆ: ಎಚ್ ಡಿ  ಕುಮಾರಸ್ವಾಮಿ

ಗುಬ್ಬಿ : ಬಿ.ಎಸ್.ನಾಗರಾಜುರನ್ನು  ಗೆಲ್ಲಿಸುವ ಮೂಲಕ ಟೀಕೆಗಳಿಗೆ ಉತ್ತರ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ  ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಬಾವಿ ಮನೆ ಕಲ್ಯಾಣ ಮಂಟಪದಲ್ಲಿ  ಜೆಡಿಎಸ್  ವತಿಯಿಂದ ಆಯೋಜಿಸಿದ್ದ ರೈತ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತಂತೆ ಚರ್ಚಿಸಿದರು.
ರೈತರ ಪರವಾಗಿ ಜೆಡಿಎಸ್ ಅಭ್ಯರ್ಥಿ ಬಿಎಸ್ ನಾಗರಾಜ್ ಮಾತನಾಡಿ ಮಠದ ಕೆರೆಗೆ ನೀರು ಹರಿಸಲು ಜೆಡಿಎಸ್ ಸರ್ಕಾರ 22 ಕೋಟಿ ಅನುದಾನವನ್ನು ಬಿಡುಗಡೆ ಮಾಡಿತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಅನುದಾನವನ್ನು ತಡೆ ಹಿಡಿದಿದೆ. ಇದರಿಂದ ತಾಲ್ಲೂಕಿನ ಜನತೆಗೆ ಅನಾನುಕೂಲವಾಗಿದೆ ಮುಂದಿನ ದಿನಗಳಲ್ಲಿ ಮುಖ್ಯ ಮಂತ್ರಿ ಗಳಾದಂತಹ ಸಂದರ್ಭದಲ್ಲಿ ಗುಬ್ಬಿ ತಾಲೂಕಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ರೈತರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಆರ್ಥಿಕವಾಗಿ ಅಭಿವೃದ್ಧಿಪಡಿಸಲು ನಿಮ್ಮ ಸಹಕಾರ ಬೇಕು ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯ್ ಕುಮಾರ್ ಮಾತನಾಡಿ ನ್ಯಾಪಿಡ್ ಕೇಂದ್ರಗಳನ್ನು ಸ್ಥಾಪಿಸಿ ಕೊಬ್ಬರಿ ಹಾಗೂ ಅಡಿಕೆ ಬೆಲೆಗೆ ಬೆಂಬಲ ಬೆಲೆ ನಿಗದಿಗೊಳಿಸಬೇಕು ಅಂತರ್ಜಲ ವೃದ್ಧಿಗಾಗಿ ಕೆರೆಗಳ ಅಭಿವೃದ್ಧಿಯಾಗಬೇಕು ತಾಲೂಕಿನಲ್ಲಿ ಬೆಳೆ ದಂತಹ ಹಲಸು ಹಾಗೂ ಮಾವು ಬೆಳೆಗಳು ದೇಶ ವಿದೇಶಗಳಲ್ಲಿ ತನ್ನದೇ ಆದ ಪ್ರಾಧಾನ್ಯತೆ ಹೊಂದಿದ್ದು ಹೆಚ್ಚು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸಮಸ್ಯೆಗಳನ್ನು ಆಲಿಸಿ  ಮಾತನಾಡಿದ ಮಾಜಿ ಮುಖ್ಯಮಂತ್ರಿ  ಕುಮಾರಸ್ವಾಮಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ  ಸೂಕ್ತ ಪರಿಹಾರ ಕಂಡುಕೊಳ್ಳಲು  ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಅಧಿಕಾರ ನೀಡಬೇಕು. ನನ್ನ ವಿರುದ್ಧದ ಟೀಕೆ ಟಿಪ್ಪಣಿಗಳನ್ನು ಗಮನದಲ್ಲಿಟ್ಟುಕೊಂಡು ತಾಲೂಕನ್ನು ವೈಯಕ್ತಿಕವಾಗಿ ಪರಿಗಣಿಸಿದ್ದೇನೆ  ಅಭ್ಯರ್ಥಿಯನ್ನು  ಗೆಲ್ಲಿಸಿಕೊಳ್ಳುವ ಮೂಲಕ ಉತ್ತರಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ,ಕಳ್ಳಿಪಾಳ್ಯ ಲೋಕೇಶ್, ಗಾಯತ್ರಿದೇವಿ ನಾಗರಾಜು, ಪಪಂ ಸದಸ್ಯೆ ಸವಿತಾ, ಸಿದ್ದಗಂಗಮ್ಮ, ಎಸ್.ಗೌಡ, ಅರೇಹಳ್ಳಿ ನಟರಾಜು, ಫಿರ್ದೋಸ್ ಆಲಿ, ಆಟೋ ಮಂಜಣ್ಣ, ರಂಜಿತ್, ಮನೋಜ್, ಗೋಪಾಲ್ ಗೌಡ ಹಾಜರಿದ್ದರು.