Friday, 20th September 2024

ಮರುಜೀವ ನೀಡುವಲ್ಲಿ ಪ್ರಥಮ ಚಿಕಿತ್ಸೆಯ ಮಹತ್ವ

World First Aid Day

ತನ್ನಿಮಿತ್ತ
ರಾಜು ಭೂಶೆಟ್ಟಿ

ಪ್ರಥಮ ಚಿಕಿತ್ಸೆ ಎಂದರೆ ಯಾವುದೇ ರೀತಿಯ ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂದು ಹೇಳಬಹುದಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಜನಸಾಮಾನ್ಯರು ಮಾಡುವ ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಉಪಕರಣಗಳ ಬಳಕೆ ಇರುವುದಿಲ್ಲ. ಈ ಪ್ರಥಮ ಚಿಕಿತ್ಸಾ ವಿಧಾನವು ಸುಶ್ರೂತ ಕಾಲದಿಂದಲೂ ಬಳಕೆಯಲ್ಲಿತ್ತು. ಆದರೆ
1859ರಿಂದೀಚೆಗೆ ಹೆಚ್ಚು ಬೆಳಕಿಗೆ ಬಂದೀತು. ಯುದ್ಧಭೂಮಿಯ ಭಯಾನಕತೆಯನ್ನು ಕಂಡು ಹೆನ್ರಿ ಡ್ಯುನಾಂಟ್ ಎಂಬುವರು ರೆಡ್‌ಕ್ರಾಸ್ ಸಂಸ್ಥೆಯನ್ನು ಆರಂಭಿಸಿದಾಗ, ಪ್ರಥಮ ಚಿಕಿತ್ಸೆಯ ಮಹತ್ವ ಎಂಥದ್ದು ಎಂಬುದು ಅರಿವಿಗೆ ಬಂದಿತು.

ಅವಘಡಗಳಂಥ ಸಂದರ್ಭಗಳಲ್ಲಿ ಗಾಯಾಳುಗಳನ್ನು ಘಟನೆ ನಡೆದ ಸ್ಥಳದಿಂದ ಆಸ್ಪತ್ರೆಗೆ ಸಾಗಿಸುವ ಮಧ್ಯೆದಲ್ಲಿ ಕೆಲವೊಮ್ಮೆ ಪ್ರಥಮ ಚಿಕಿತ್ಸೆಗಳು ಪ್ರಾಣ ರಕ್ಷಕನಾಗಿ ಕಾರ್ಯ ನಿರ್ವಹಿಸುತ್ತವೆ. ಒಂದು ವೇಳೆ ಪ್ರಥಮ ಚಿಕಿತ್ಸೆಯ ಸರಿಯಾದ ಜ್ಞಾನವಿಲ್ಲದೇ ಹೋದರೆ ಆ ಗಾಯಾಳು ವ್ಯಕ್ತಿಯ ಅಕಾಲಿಕ ಮರಣವೂ ಸಂಭವಿಸಬಹುದು. ಪ್ರಥಮ ಚಿಕಿತ್ಸೆಯಲ್ಲಿ ಗಮನಿಸಬೇಕಾದ
ಮುಖ್ಯ ಅಂಶಗಳೆಂದರೆ ವ್ಯಕ್ತಿಯ ಉಸಿರಾಟ, ರಕ್ತ ಪರಿಚಲನೆ, ಪೆಟ್ಟು ಬಿದ್ದ ದೇಹದ ಭಾಗವನ್ನು ಇರಿಸಬೇಕಾದ ಸ್ಥಿತಿ. ರಸ್ತೆ  ಅಪಘಾತಗಳಂತಹ ಸಂದರ್ಭದಲ್ಲಿ ಅದನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರೆ ಮೊದಲು ಸೇರಿರುವ ಜನರನ್ನು ದೂರ ಸರಿಸಿ, ಅಪಘಾತಕ್ಕೊಳಗಾದ ವ್ಯಕ್ತಿಯ ದೇಹದ ಉಡುಪುಗಳನ್ನು ಸಡಿಲಗೊಳಿಸುವುದರಿಂದ ಆತನಿಗೆ ಉತ್ತಮವಾದ ಗಾಳಿ ದೊರೆಯುತ್ತದೆ. ಒಂದು ವೇಳೆ ವ್ಯಕ್ತಿಯ ಬೆನ್ನುಹುರಿಗೆ ಪೆಟ್ಟಾದ ಲಕ್ಷಣಗಳಿದ್ದರೆ ಆತನ ತಲೆ ಹಾಗೂ ಕುತ್ತಿಗೆಯ ಭಾಗವನ್ನು ಎರಡೂ ಕೈಗಳಿಂದ ಸರಿಯಾದ ಸ್ಥಾನದಲ್ಲಿರಿಸಬೇಕು.

ದೇಹದ ಹೊರಭಾಗದಿಂದ ರಕ್ತಸ್ರಾವವಾಗುತ್ತಿದ್ದರೆ ಸ್ವಚ್ಛವಾದ ಬಟ್ಟೆಯಿಂದ ಆ ಸ್ಥಳವನ್ನು ಗಟ್ಟಿಯಾಗಿ ಒತ್ತಿ ಹಿಡಿಯಬೇಕೆಂಬ ಸಾಮಾನ್ಯ ಜ್ಞಾನ ಇರಲೇಬೇಕಾಗುತ್ತದೆ. ಇಂತಹ ಕೆಲವು ಚಿಕ್ಕ ಪ್ರಯತ್ನಗಳಿಂದ ಅಲ್ಪ ಪ್ರಮಾಣದ ರಕ್ತಸ್ರಾವವನ್ನು ನಿಲ್ಲಿಸ ಬಹುದಾಗಿದೆ. ಚಿಕ್ಕ ಪುಟ್ಟ ಸುಟ್ಟ ಗಾಯಗಳಾದಂಥ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದೇ ಅಲ್ಲಿ ಉಂಟಾದ ನೀರು ಗುಳ್ಳೆ ಗಳನ್ನು ಒಡೆಯುವುದು ತುಂಬಾ ಅಪಾಯಕಾರಿ. ಆ ಭಾಗದಲ್ಲಿ ಒಂದು ವೇಳೆ ಉಂಗುರ, ವಾಚ್ ಗಳಂಥ ವಸ್ತುಗಳೇ ನಾದರೂ ಇದ್ದಲ್ಲಿ ಅದನ್ನು ತಕ್ಷಣ ತೆಗೆದು ಹಾಕಬೇಕು.

ಅಲೋವೆರಾದಿಂದ ತಂಪುಗೊಳಿಸಿ ವೈದ್ಯರನ್ನು ಸಂಪರ್ಕಿಸುವುದು. ಮೂಳೆ ಮುರಿತದಂಥ ಸಂದರ್ಭದಲ್ಲಿ ಮುರಿದ ಭಾಗವನ್ನು ಅಲುಗಾಡದಂತೆ ಬಟ್ಟೆಯಲ್ಲಿ ಕಟ್ಟಬೇಕು ಹಾಗೂ ಊತ ಬರುವ ಮೊದಲೇ ವೈದ್ಯರ ಬಳಿಗೆ ತಪಾಸಣೆಗೆ ಕರೆದುಕೊಂಡು ಹೋಗ ಬೇಕು. ಬಹಳಷ್ಟು ಸಂದರ್ಭಗಳಲ್ಲಿ ಜೇನು ನೊಣ ಅಥವಾ ಇನ್ನಾವುದೋ ಕೀಟ ಕಚ್ಚಿದಾಗ, ಆ ಭಾಗದ ಮೇಲೆ ತಣ್ಣನೆಯ ನೀರಿನಲ್ಲಿ ಅದ್ದಿದ ಕರವಸ್ತ್ರ ಅಥವಾ ಮಂಜುಗಡ್ಡೆಯ ತುಣುಕುಗಳನ್ನು ಇರಿಸಬೇಕು. ನಂತರ ಆ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿ ಅಲ್ಲಿರಬಹುದಾದ ಹುಳುವಿನ ಕೊಂಡಿಯನ್ನು ತೆಗೆಯಲು ಪ್ರಯತ್ನಿಸುವುದು. ಮನೆಯಲ್ಲಿಯೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನಿಟ್ಟುಕೊಳ್ಳುವುದು. ಅದರಲ್ಲಿ ಆ್ಯಂಟಿ ಸೆಪ್ಟಿಕ್, ಆ್ಯಂಟಿ ಬಯೋಟಿಕ್, ಮುಲಾಮು, ಹತ್ತಿ, ವಿವಿಧ ಗಾತ್ರದ ಬ್ಯಾಾಂಡೇಜು ಬಟ್ಟೆೆ, ನೋವು ಹಾಗೂ ಜ್ವರಕ್ಕೆೆ ಔಷಧಿ, ಗ್ಲೌಸ್, ಟಿಂಕ್ಚರ್ ಮುಂತಾದವುಗಳನ್ನು ಒಳಗೊಂಡಿರಬೇಕು.

ಪ್ರಥಮ ಚಿಕಿತ್ಸೆಯ ಐದು ಮುಖ್ಯ ಉದ್ದೇಶಗಳೆಂದರೆ – ಜೀವದ ರಕ್ಷಣೆ , ಗಾಯ ಉಲ್ಭಣಗೊಳ್ಳದಂತೆ ನಿಯಂತ್ರಿಸುವುದು, ಶೀಘ್ರ ಚೇತರಿಕೆ, ನೋವು ಶಮನಗೊಳಿಸುವುದು, ಪ್ರಜ್ಞಾಹೀನ ಸ್ಥಿತಿಗೆ ತಲುಪದಂತೆ ಕಾಪಾಡುವುದು. ಹೀಗೆ ಪ್ರಥಮ ಚಿಕಿತ್ಸೆಯೆಂಬುದು ಜೀವ ರಕ್ಷಕವಾಗಿ ಕೆಲಸ ಮಾಡುವುದರಿಂದ ಅದರ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಡಬೇಕಾದ ಅಗತ್ಯವಿರುವುದರಿಂದಲೇ ಪ್ರತೀ ವರ್ಷ ಸೆಪ್ಟೆೆಂಬರ್- 12ರಂದು ವಿಶ್ವ ಪ್ರಥಮ ಚಿಕಿತ್ಸೆ ದಿನವನ್ನಾಗಿ ಆಚರಿಸಲಾಗುತ್ತದೆ.

ನಿರ್ದಿಷ್ಟ ಥೀಮ್‌ನೊಂದಿಗೆ ಆಚರಿಸಲ್ಪಡುವ ಈ ದಿನವು ಈ ವರ್ಷ FIRSTAID SAVES LIVES ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ.