Thursday, 19th September 2024

ಮೂರು ದಶಕದ ಬ್ಯಾಟಿಂಗ್ ಪಾಬಲ್ಯದ ನೆನಪುಗಳು

ಅವಲೋಕನ
ಅರುಣ್‍ ಕೋಟೆ

1992 ಪಾಕಿಸ್ತಾನ ವಿಶ್ವ ಕಪ್ ತನ್ನದಾಗಿಸಿಕೊಂಡ ವರುಷ. ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ತನ್ನ ವಿಶೇಷ ಬೌಲಿಂಗ್ ಆಕ್ರಮಣದಿಂದ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಶಕ್ತಿಯನ್ನು ಎಲ್ಲರಿಗಿಂತ ಒಂದು ಕೈ ದಬಾಯಿಸಿ ಪ್ರದರ್ಶಿಸಿತ್ತು. ಅದು ಬಣ್ಣದ ಜೆರ್ಸಿ ತೊಟ್ಟು ಆಟವಾಡಿದ ಮೊದಲ ವಿಶ್ವಕಪ್. ಹಾಗೆ ನೋಡಿದರೆ ಆ ನಂತರ ಕ್ರಿಕೆಟ್‌ನ ಬೆಳವಣಿಗೆಯೂ ವರ್ಣಮಯವೇ.

ವಸೀಮ್ ಅಕ್ರಮ್ ಹಾಗೂ ವಕಾರ್ ಯೂನಿಸ್ ವಿಶ್ವದ ಶ್ರೇಷ್ಠ ಬೌಲಿಂಗ್ ಜೋಡಿಯಾಗಿ ಬ್ಯಾಟ್ಸ್ಮನ್‌ಗಳಿಗೆ
ಕಾಡತೊಡಗಿದರು. ಅದೊಂದು ರೀತಿಯಾ ಹೆಚ್ಚಿನ Swing, Yorker, Pace variation ದಾಳಿಯಿಂದ ಪಾಕಿಸ್ತಾನ ಜಗತ್ತಿನ ಎಂಥಾ ತಂಡಕ್ಕೂ ಮಣ್ಣುಮುಕ್ಕಿಸುವ ಕೌಶಲ್ಯವನ್ನು ಸಾಧಿಸಿಕೊಂಡಿತ್ತು. ಇದರ ಜೊತೆಯಲ್ಲೇ ಏಕದಿನ ಪಂದ್ಯಗಳಲ್ಲಿ ಯಾವಾಗಲೂ ಏಳೆಂಟು ಜನ ಸರಾಗವಾಗಿ ಹತ್ತು ಓವರ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಅವರು ಹೊಂದಿರುತ್ತಿದ್ದರು. ತನ್ನಲ್ಲಿದ್ದ ಬೌಲರ್‌ಗಳ ಸಂಖ್ಯೆ ಅಗಾಧವಾಗಿದ್ದರಿಂದ ಪ್ರತಿ ಸರಣಿಯಲ್ಲೂ ಎದುರಾಳಿಗೆ ತಕ್ಕಹಾಗೆ ಬದಲಿಸಿಕೊಂಡು ಮೈದಾನಕ್ಕಿಳಿಯುವ ಜಾಣತನ ಪಾಕಿಸ್ತಾನಕ್ಕಿತ್ತು.

ತನ್ನ ಬೌಲಿಂಗ್ ಬಲದಿಂದ ಪಾಕಿಸ್ತಾನ ಮಿಂಚುತ್ತಿದ್ದಾಗಲೇ 1996 ವಿಶ್ವಕಪ್‌ನಲ್ಲಿ ಭಾರತ ಅದಕ್ಕೆ ಬಲವಾದ ಪೆಟ್ಟು ನೀಡಿತು. ಕ್ವಾಟರ್ ಪೈನಲ್ ಪಂದ್ಯದಲ್ಲೇ ಭಾರತೀಯ ಬ್ಯಾಟ್ಸ್ಮನ್‌ಗಳು ಪಾಕಿಸ್ತಾನದ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ರುಬ್ಬಿ ಚಾಂಪಿಯನ್ ತಂಡವನ್ನು ವಿಶ್ವಕಪ್ ಸರಣಿಯಿಂದ ಹೊರದಬ್ಬಿದ್ದರು. ಮೊದಲು ಬ್ಯಾಟ್ ಮಾಡಿದ ಭಾರತ ಹೊಡೆದದ್ದು ಆ ಕಾಲಕ್ಕೆ 287 ರನ್ನುಗಳು. ಮೊದಲ ಇನ್ನಿಿಂಗ್ ್ಸನ ಕೊನೆಯ ಐದು ಓವರ್‌ನಲ್ಲಿ ವಕಾರ್ ಹಾಕಿದ ಬಾಲುಗಳನ್ನು ಅಜಯ್ ಜಡೇಜಾ ಸ್ಟೇಡಿಯಂ ಆಚೆಗೆ ಹಾರಿ ಹೋಗುವ ಗಗನ ಮಾರ್ಗವನ್ನೇ ತೋರಿಸಿದ್ದನ್ನು ಯಾರೂ ಮರೆಯುವ ಹಾಗೇ ಇಲ್ಲ. ಹರ್ಷ ಬೊಗ್ಲೇ ಪ್ರಕಾರ ಬಹುಶಃ ಆ ಪಂದ್ಯದ ನಂತರ ವಕಾರ್‌ನ ಕ್ರಿಕೆಟ್ ಜೀವನದಲ್ಲಿ ಆಕ್ರಮಣಕಾರಿತನದ ಒಂದಂಶವೇ ಕ್ಷೀಣಿಸಿತು ಎನ್ನುತ್ತಾರೆ.

ಅದೇ ಪಂದ್ಯದಲ್ಲಿ ಬೌಲರ್‌ಗಳ ಮುಖಕ್ಕೆ ಬ್ಯಾಟು ತೋರಿಸಿಕೊಂಡು ದೌಲತ್ತಿನಿಂದ ಬೌಂಡರಿಗಳನ್ನು
ಬಾರಿಸುತ್ತಿದ್ದ ಆರ್ಮಿ ಸೋಹೈಲ್‌ನನ್ನು ಹದಿನೈದನೇ ಓವರ್ ನ ಕೊನೆಯ ಎಸೆತದಲ್ಲಿ ವೆಂಕಟೇಶ್ ಪ್ರಸಾದ್ ಕ್ಲೀನ್ ಬೋಲ್ಡ್ ಮಾಡಿ ಪೆವಿಲಿಯನ್‌ಗೆ ಅಟ್ಟಿದ ಪ್ರಸಂಗ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ  ಅವಿಸ್ಮರಣೀಯವಾದ ಕ್ಷಣಗಳಲ್ಲಿ ಒಂದು ಎಂಬುದನ್ನು ವಿರಾಟ್ ಕೋಯ್ಲಿ ಮೊನ್ನೆ ಮೊನ್ನೆೆ ನೆನೆದಂತಿದೆ.
1998ರಲ್ಲಿ ಭಾರತ ಪಾಕಿಸ್ತಾನಕ್ಕೆ ಮತ್ತೊೊಂದು ಪೆಟ್ಟು ನೀಡಿತು. ಇದು ಭಾರತ ವಿಶ್ವದ ಬಲಿಷ್ಠ ಬ್ಯಾಟಿಂಗ್
ಶಕ್ತಿಯಾಗುವುದರ ಶುಭ ಶಕುನವನ್ನು ತೋರಿಸಿದ ಪಂದ್ಯ.

ಶ್ರೀಲಂಕಾ ಎದುರಿಗೆ 1996ರ ಸೆಮಿಫೈನಲ್ ಪಂದ್ಯದಲ್ಲಿ ಅನುಭವಿಸಿದ ಭಾರಿ ಮುಖಭಂಗದಿಂದ ಕ್ರಿಕೆಟ್ ಅಭಿಮಾನಿಗಳು ಸಚಿನ್ ಹೊರತು ಭಾರತದ ಇತರೆ ಎಲ್ಲಾ ಬ್ಯಾಟ್ಸ್ಮನ್ ಗಳಿಗೂ ದೇಶಾದ್ಯಂತ ಛೀಮಾರಿ ಹಾಕಿದ್ದರು. 1998ರಲ್ಲಿ ಬಾಂಗ್ಲಾದೇಶದಲ್ಲಿ ಜರುಗಿದ ಇಂಡಿಪೆಂಡೆನ್‌ಸ್‌ ಕಪ್ ರೌಂಡ್ ರಾಬಿನ್ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ನೀಡಿದ 314 ರನ್ನುಗಳ ಬೃಹತ್ ಸವಾಲನ್ನು ಬೆನ್ನು ಹತ್ತಿ
ಕೊನೆಯ ಓವರ್‌ನಲ್ಲಿ ಹೃಷಿಕೇಶ್ ಕಾನಿಟ್ಕರ್ ಎಂಬ ಹೊಸ ಹುಡುಗ ಬಾರಿಸಿದ ಬೌಂಡರಿಯಿಂದ ರೋಚಕ ವಿಜಯ ಸಾಧಿಸಿತು. ಭಾರತದ ಬೃಹತ್ ಮೊತ್ತಗಳ ಹೊಸ ಆಟ ಶುರುವಾದದ್ದು, ಪದೇ ಪದೆ ಮುನ್ನೂರು ರನ್ ಹೊಡೆಯುವ ಗೀಳು ಹಚ್ಚಿಕೊಂಡದ್ದು ಅಲ್ಲಿಂದಲೇ ಎನ್ನಬಹುದು. ಅದೇ ಸಾಲಿನಲ್ಲೇ ಭಾರತ ಶಾರ್ಜಾದಲ್ಲಿ ಅಮೋಘ ಪ್ರದರ್ಶನ ನೀಡಿ ತ್ರಿಕೋನ ಏಕದಿನ ಸರಣಿ ಯನ್ನು ತನ್ನದಾಗಿಸಿಕೊಂಡಿತು. ಆ ಸರಣಿಯಲ್ಲಿ ಡೆಸರ್ಟ್ ಸ್ಟಾರ್ಮ್ ಪ್ರದರ್ಶನವೆಂದೇ ಹೆಸರಾದ ತೆಂಡೂಲ್ಕರ್‌ನ ಆಸ್ಟ್ರೇಲಿಯಾ ವಿರುದ್ಧದ ಸತತ ಶತಕಗಳ ಆಟವನ್ನು ಕಂಡು ರಾತ್ರಿ ನಿದ್ದೆ ಕೆಡಿಸಿಕೊಂಡಿದ್ದನ್ನು ಶೇನ್ ವಾರ್ನ್ ಮೀಡಿಯಾ ಮುಂದೆ ಹೇಳಿಕೊಂಡಾಗ ಭಾರತದ ಹಳ್ಳಿಗಾಡಿನ ಜನರೂ ಸಹ ಉಬ್ಬಿ ಹೋಗಿದ್ದರು.

ಇಂತಹ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಮೇಲಿದ್ದ ಒತ್ತಡವನ್ನು ತಗ್ಗಿಸಿ ವಿಶೇಷವಾಗಿ ದೇಶದ ಗಮನ
ಸೆಳೆದದ್ದು ಮೇಲಿಂದ ಮೇಲೆ ರೆಪ್ಪೆ ಬಡಿಯುವ ಹುಡುಗ, ಆರಂಭಿಕ ಆಟಗಾರ ಸೌರವ್ ಗಂಗೂಲಿ. ಕ್ರಿಕೆಟ್ ‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆಡಿರುವ Head to Head ಪಂದ್ಯಗಳಲ್ಲಿ ಹೆಚ್ಚು ಸೋಲನ್ನು ಅನುಭವಿ ಸಿದೆ. ಆದರೆ ಕಾರ್ಗಿಲ್ ಯುದ್ಧದ ನಂತರ ಬದಲಾದ ಭಾರತ ತಂಡ ಪಾಕಿಸ್ತಾನವನ್ನು ಅವಕಾಶ ಸಿಕ್ಕಲ್ಲೆಲ  ಬಡಿದು ಹಾಕಿದೆ. ಈ ಸಾಲಿನಲ್ಲಿ 2003ರ ಭಾರತ ಪಾಕಿಸ್ತಾನ ವಿಶ್ವಕಪ್ ಪಂದ್ಯ ಅತ್ಯಂತ ಪ್ರಮುಖವಾದದ್ದು. ಎರಡೂ ತಂಡಗಳೂ ತಮ್ಮೆಲ್ಲ ಗತಕಾಲದ ಮತ್ತು ನವಯುಗದ ಬಲವನ್ನು ಕ್ರೂಢೀಕರಿಸಿಕೊಂಡು ಎದುರಾದ ಪಂದ್ಯವದು.

ಸೋತರೆ ನೆಪಗಳಿರಬಾರದು, ಅವನಿಲ್ಲ ಇವನಿಲ್ಲ ಎನ್ನುವ ಹಾಗೇ ಇಲ್ಲ. ಭಾರತದ ಹಳೆ ತಲೆನೋವು ಸಯೀದ್ ಅನ್ವರ್ ಆ ಕಡೆಯಿದ್ದರೆ ಪಾಕಿಸ್ತಾನಕ್ಕೆೆ ಹೊಸ ತಲೆನೋವಾಗಿದ್ದ ವಿರೆಂದರ್‌ಸ ಸೆಹ್ವಾಗ್ ಈ ಕಡೆ. ವಸೀಮ್ ವಕಾರ್, ಶೋಯೆಬ್ ಅಖ್ತರ್ ವಿಶ್ವದ ಮೂರು ಶ್ರೇಷ್ಠ ಬೌಲರ್‌ಗಳ ನಿರಂತರ ಆಕ್ರಮಣವನ್ನು ಭಾರತ ಎದುರಿಸಬೇಕಿತ್ತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನೀಡಿದ 273ರನ್ನುಗಳ ಸವಾಲನ್ನು ಬೆನ್ನು ಹತ್ತಿದ ಭಾರತ ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಲೆಕ್ಕವಿಡದೆ, ಬೆನ್ನತ್ತಿ ಸರಾಗವಾಗಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ವೇಗದ ಬೌಲರ್‌ಗಳಿಗೆ ಮೊದಲ ಐದು ಓವರ್ನಲ್ಲೇ ಸಚಿನ್ ಹಾಗೂ ವೀರೂ ಪಾಯಿಂಟ್ ಮೇಲೆ ಹಾರಿಸಿ ಹೊಡೆದ ಸಿಕ್ಸರ್‌ಗಳಿಗೆ ಎದುರಾಳಿಗಳು ನಿಜಕ್ಕೂ ದಿಕ್ಕೆಟ್ಟಿದ್ದರು.

ಪಾಕಿಸ್ತಾನ ಭಾರತಕ್ಕೆ ಸರಿಸಮಾನದ ತೂಕದ ತಂಡವನ್ನು ಕಟ್ಟಿಕೊಂಡು ಆಡಿದ್ದು ಇದೇ ಕೊನೆ  ಎನ್ನಬಹುದು. ಈ ವಿಶ್ವಕಪ್ ನಂತರ ವಕಾರ್ ಹಾಗೂ ವಸೀಮ್ ವಿಶ್ವ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಬೌಲಿಂಗ್ ಪಾಳಯದಲ್ಲಿ ಹೊಸ ತಲೆಮಾರಿನ ಬ್ಯಾಟ್‌ಸ್‌ ಮನ್‌ಗಳನ್ನು ಕೆಡವಲು ವಿಭಿನ್ನ ಪ್ರಯೋಗಗಳು ನಡೆದಷ್ಟೂ ಕೊನೆಗೆ ಬ್ಯಾಟಿನದ್ದೆ ಮೇಲುಗೈ ಆದದ್ದು ವಿಪರ್ಯಾಸ. Spin, Swing, Pace, Seam Position, Action ಎಲ್ಲದರಲ್ಲಿಯೂ ಬೌಲಿಂಗ್‌ನಲ್ಲಿ ವಿಪರೀತ ತಂತ್ರಗಳು ಹೊಮ್ಮಿದವು.

Leg Spinner ಗಳು ಗೂಗ್ಲಿ ಹಾಕಿದರೆ Off Spinner ಗಳು ದೂಸ್ರಾ ಪ್ರಯೋಗವನ್ನು ಕರಾರುವಕ್ಕಾಗಿ ಮಾಡುವ’ರಾದರೂ ಅವರಾರು ಶೇನ್ ವಾರ್ನ್, ಮುತ್ತಯ್ಯ ಮುರಳೀಧರನ್, ಅನಿಲ್ ಕುಂಬ್ಳೆಗೆ ಸಮನಾಗಲಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಆದದ್ದೇ ಇದು, 21ನೇ ಶತಮಾನದ ಮೊದಲ ದಶಕದಲ್ಲಿ ಬೌಲರ್‌ಗಳ ಯಜಮಾನಿಕೆ ತಗ್ಗಿ ಅದು ನುಗ್ಗಿ ಹೊಡೆಯುವ ಬ್ಯಾಟ್‌ಸ್‌‌ಮನ್‌ಗಳ ಕಡೆಗೆ ತಿರುಗಿತು.

250ರನ್‌ಗಳ ಟಾರ್ಗೆಟ್ ಅನ್ನೇ ಬೆನ್ನು ಹತ್ತಲಾಗದೆ ಒದ್ದಾಡುತ್ತಿದ್ದ ಕಾಲ ಈಗಿಲ್ಲ, ಕಳೆದ ಇಪ್ಪತ್ತು ವರುಷದಲ್ಲಿ 300ರ ಗಡಿ ದಾಟಿದ ಸವಾಲುಗಳನ್ನು ಬೆನ್ನತ್ತಿ ದಕ್ಕಿಸಿಕೊಂಡ ಪಂದ್ಯಗಳೆಷ್ಟೋ? 2006 ಜೋಹಾನ್‌ಸ್‌ ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 434ರ ಗುರಿಯನ್ನು ಚಚ್ಚಿಹಾಕಿ ಸೌತ್ ಆಫ್ರಿಕಾ ಬರೆದ ಇತಿಹಾಸವನ್ನು ಮರೆಯಲಾದೀತೆ? ಅದೇ ಸೌತ್ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಏಕದಿನ ಪಂದ್ಯದಲ್ಲಿ ಸಿಡಿಸಿದ 200 ರನ್ನುಗಳ ನಂತರ ಕೆಲವೇ ವರುಷಗಳಲ್ಲಿ ಸುಮಾರು 9 ಬಾರಿ ದ್ವಿಶತಕದ
ವೈಯಕ್ತಿಕ ಮೊತ್ತವನ್ನು ಬಾರಿಸಿದ್ದಾರೆ ಹೊಸ ಯುಗದ ಆಟಗಾರರು. ಕ್ರಿಕೆಟ್‌ನಲ್ಲಿ 15 ಓವರ್‌ನಿಂದ 20 ಓವರ್‌ಗೆ ಪವರ್ ಪ್ಲೇ ಏರಿಸಿದ್ದು ಬ್ಯಾಾಟ್‌ಸ್‌‌ಮನ್‌ಗಳಿಗೆ ಬೃಹತ್ ಮೊತ್ತ ಕಲೆ ಹಾಕಲು ಸಹಕಾರಿಯಾಯಿತು. ತೆಂಡೂಲ್ಕರ್ ದಾಖಲೆ ಗಳನ್ನು ಮುರಿಯಲು ಒಂದು ಜೀವನ ಸಾಲದು ಎಂದು ತಿಳಿದಿದ್ದಾಗಲೇ, ವಿರಾಟ್ ಕೊಹ್ಲಿ ಮೇಲಿಂದ ಮೇಲೆ ಸಿಡಿಸಿದ ಶತಕಗಳ ಸುರಿಮಳೆಯನ್ನು ಕಂಡು ಯಾರು ತಾನೇ ಬೆರಗಾಗಲಿಲ್ಲ? ಈ ಪರಿಯ ರನ್ನುಗಳ ಹೊಳೆ ಹರಿಯುವ ಕಾಲದಲ್ಲಿ ಕ್ರಿಕೆಟ್ ಅನ್ನು ವಿಲಕ್ಷಣ ಮನೋರಂಜನೆಯ ಮತ್ತೊೊಂದು ಮಜಲಿಗೆ ತಿರುಗಿಸಿದ್ದೇ 20 ಓವರ್‌ಗಳ ಚುಟುಕು ಪಂದ್ಯ ಎನ್ನಬಹುದು.

ಭಾರತ ತನ್ನ ಬ್ಯಾಟಿಂಗ್ ಬಲದಲ್ಲಿ ಇತರೆ ತಂಡಗಳಿಗಿಂತ ಕೊಂಚ ಶ್ರೇಷ್ಠ ಎನ್ನುವಷ್ಟರ ಮಟ್ಟಿಗೆ ಬೆಳೆದು ದಾಖಲೆಗಳ ಮೇಲೆ ದಾಖಲೆಗಳನ್ನ ಬರೆಯುತ್ತಿರುವಾಗ ಪಾಕಿಸ್ತಾನ ತನ್ನ ಬಲಿಷ್ಠ ಆಕ್ರಮಣಕಾರಿ ಬೌಲಿಂಗ್ ಪರಂಪರೆಯನ್ನು ಮುಂದುವರಿಸಲಾಗದೆ ಹಲ್ಲು ಕಿತ್ತ ಹಾವಿನಂತೆ ಆಗೊಮ್ಮೆ ಬುಸುಗುಟ್ಟಬೇಕಾಯಿತು. ಇದು ಇಂಡಿಯಾ ಮತ್ತು ಪಾಕಿಸ್ತಾನದ ಕತೆ ಮಾತ್ರವಲ್ಲ ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲ ತಂಡಗಳ  ಪಾಡೂ ಇದೆ. ಕ್ರಿಕೆಟ್ ಅನ್ನು ಬ್ಯಾಟ್ಸ್ಮನ್‌ಗಳು ಅಖೈರಾಗಿ ಆಳತೊಡಗಿದರು. ಪವರ್ ಪ್ಲೇ ಮತ್ತು ಅಂತಿಮ ಓವರ್
ಗಳಲ್ಲಿ ಹೇಗೆ ಬಾರಿಸಬೇಕು ಎಂದು ಹೇಳಿಕೊಟ್ಟ ಹಾಗೂ ಹೇಳಿ ಕೊಡುತ್ತಿರುವ ಬ್ಯಾಟ್‌ಸ್‌‌ಮನ್‌ಗಳ ಪರಂಪರೆ ಯನ್ನು ನೋಡಿದರೆ ಒಂದಷ್ಟು ಜನರನ್ನು ನೆನೆಯಲೇ ಬೇಕಾಗುತ್ತದೆ.

ಅದರಲ್ಲಿ ಕೆಲವರಂತೂ ತಮ್ಮ ವಿಭಿನ್ನ ಶೈಲಿ ಚುರುಕುತನಗಳಿಂದ ಬೌಲರ್‌ಗಳ ಮೆದುಳು ಕೆಲಸ  ಮಾಡುವುದನ್ನೇ ನಿಲ್ಲಿಸಿದ್ದಾರೆ. ಸನತ್ ಜಯಸೂರ್ಯ, ಆಡಮ್ ಗಿಲ್ಕ್ರಿಿಸ್‌ಟ್‌, ಅಫ್ರಿದಿ ಹರ್ಷಲ್ ಗಿಬ್‌ಸ್‌, ಕ್ರಿಸ್ ಗೆಲ್, ಬ್ರಾಾಂಡಮ್ ಮೆಕಲಮ್, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮವರೆಗೂ ಒಂದು ಕಡೆಯಾದರೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ರಿಕಿ ಪಾಯಿಂಟಿಂಗ್, ಲಾರಾ, ಜಾಕಸ್ ಕಾಲಿಸ್ ಸಂಗಾಕಾರ, ವಿರಾಟ್ ಕೊಹ್ಲಿ ವರೆಗಿನ ನೆಲಕಚ್ಚಿ ನಿಲ್ಲುವ ಆಟಗಾರರು ಮತ್ತೊೊಂದು ಕಡೆ. ಏಳು ಜನ ವಿಶ್ವದ ಶ್ರೇಷ್ಠ ಬ್ಯಾಟ್‌ಸ್‌‌ಮನ್ ಗಳು ಒಂದೇ ತಂಡದಲ್ಲಿ ಕಾಣಿಸಿಕೊಂಡದ್ದಕ್ಕೆ ಅಲ್ಲವೇ 2011ರ
ವಿಶ್ವ ಕಪ್ ಭಾರತದ ಪಾಲಾಗಿದ್ದು? 2007ರ ಟಿ20 ಚೊಚ್ಚಲ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ ಗೆಲುವು ಸಾಧಿಸಿದ್ದೇ ಚುಟುಕು ಪಂದ್ಯಗಳ ಹೊಸ ಅಲೆ ಭಾರತದ ನೆಲದಲ್ಲಿ
ಎದ್ದಿತು. ಇದೇ ಉತ್ಸಾಹವೇ BCCI ಗೆ ಕ್ರಿಕೆಟ್ ಲೋಕದ ಸಾಮ್ರಾಟನ ಗತ್ತಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸರಣಿಯನ್ನು ಆಯೋಜಿಸಲು ಸ್ಫೂರ್ತಿ ಎನ್ನಬಹುದು.
ಶ್ರೀಮಂತ ಉದ್ಯಮಿಗಳು, ಖ್ಯಾತ ಸಿನಿ ತಾರೆಯರು ಹಾಗೂ ಶ್ರೇಷ್ಠ ಕ್ರಿಕೆಟಿಗರ ಒಕ್ಕೂಟದಂತಿದ್ದ ಈ ಟೂರ್ನಿಯೂ ವಿಶ್ವದ ಗಮನವನ್ನೇ ಸೆಳೆಯಿತು. ಸಾವಿರಾರು ಕೋಟಿ ರುಪಾಯಿ ಮೊತ್ತದ ತಂಡಗಳು ಅಭಿಮಾನಿಗಳಿಗೆ ಪ್ರಾದೇಶಿಕ ಪ್ರೇಮ ಹಾಗೂ ಜಾಗತಿಕ ಆಕರ್ಷಣೆಯ ಎರಡೂ ರುಚಿಗಳನ್ನು ಕಲೆಸಿ
ರಸದೌತಣವನ್ನೇ ನೀಡಿದವು. ದುರಂತವೆಂದರೆ ಜೂಜು.

ಮೇಷ್ಟ್ರು ಪಾಠ ಮಾಡುವಾಗ ತರಗತಿಯಲ್ಲಿ ಹುಡುಗರು ಕಣ್ಸನ್ನೆಯಲ್ಲೇ ಬೆಟ್ಟಿಿಂಗ್ ಆಡತೊಡಗಿದರು. ಕಾಲೇಜು ಹುಡುಗರು ಲಕ್ಷಾಂತರ ರುಪಾಯಿ ಸಾಲ ಮಾಡಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು, ತಲೆಮರೆಸಿಕೊಂಡು ಓಡಾಡು ವುದು ಪ್ರತಿ ಸರಣಿಯ ಸಮಯದಲ್ಲೂ ಪ್ರತಿ ಊರಿನಲ್ಲೂ ಕಾಣಬಹುದು. ಈ ಕರಾಳತೆಗೆ ಮಾತ್ರ ಯಾರೂ ಜವಾಬ್ದಾರರಲ್ಲ.

ಐಪಿಎಲ್ ತರಹದ್ದೇ ಪ್ರಯೋಗಗಳನ್ನು ಒಂದಷ್ಟು ದೇಶದ ಕ್ರಿಕೆಟ್ ಕಮಿಟಿಗಳು ತಮ್ಮ ನೆಲಗಳಲ್ಲಿ ಅಯೋಜಿಸಿವೆ. IPL ಗೂ ಮುನ್ನವೇ ಇಂಗ್ಲೆೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ 2003ರಲ್ಲೇ ಟಿ20 ಪಂದ್ಯಗಳನ್ನು ಆಯೋಜಿಸಿದ್ದವು, ಈಗದು ಟಿ20 Blast ಹೆಸರಿನಲ್ಲಿ ನಡೆಯುತ್ತದೆ. ಆಸ್ಟ್ರೇಲಿಯಾ ದ ಬಿಗ್ ಬ್ಯಾಶ್, ಕೆರೆಬಿಯನ್ನರ CPL,, ಪಾಕಿಸ್ತಾನದ PCL ಹೀಗೆ ಟೂರ್ನಿಗಳು ನಡೆಯುತ್ತಿವೆಯಾದರೂ IPL  ಅಬ್ಬರವೇ ಬೇರೆ.

ಒಟ್ಟಾರೆಯಾಗಿ ಕ್ರಿಕೆಟ್ ಅನ್ನು ಸದ್ಯಕ್ಕೆ ಸಂಪೂರ್ಣವಾಗಿ ಬ್ಯಾಟ್‌ಸ್‌‌ಮನ್‌ಗಳು ಆಕ್ರಮಿಸಿಕೊಂಡಿದ್ದಾರೆ. ಬೌಲರ್‌ಗಳ Reputation ನೋಡದೆ ದಂಡಿಸುವ ಕಲೆ ಈ ಕಾಲಕ್ಕೆ ಕರಗತವಾಗಿದೆ. ನೂರುಮೈಲಿ ವೇಗದ ಬಾಲುಗಳಿಗೆ ಮುಖಕ್ಕೆ ಮುಖ ಕೊಟ್ಟು Scoop ಹೊಡೆಯುವ Extreme reflex ಪುಂಡರು ಮೈದಾನ ಕ್ಕಿಳಿದಿದ್ದಾರೆ. ಇವತ್ತಿನ ಬೌಲರ್‌ಗಳ ಕೆಲಸ ಕಾಡಿನಿಂದ ನೇರವಾಗಿ ತಂದು ಬಿಟ್ಟ ಹುಲಿ ಸಿಂಹಗಳನ್ನು
ಪಳಗಿಸುವುದಾಗಿದೆ. ಇಲ್ಲಿ ಬೌಲರ್‌ಗಳು Gladiator ಗಳೇ ಸರಿ. ಕರೋನಾ ಪರಿಣಾಮ ಬಿಲಿಯನ್ ಡಾಲರ್ IPLನ 13ನೇ ಆವೃತ್ತಿ ಈ ಬಾರಿ UAE ಯಲ್ಲಿ ನಡೆಯುತ್ತಿದೆ.

ಹಾಗೇನಾದರು ಭೂಮಿಗೆ ಬರಬಾರದ್ದು ಬಂದರೆ ಅನ್ಯಗ್ರಹದಲ್ಲಾದರೂ ಆಯೋಜಿಸಿ ಆಡಿಸಿಕೊಂಡು ಬರುವ
ಸಾಹುಕಾರಿಕೆ BCCI ಗೆ ಇದ್ದೇ ಇದೆ. ಜನಸಾಮಾನ್ಯರು ಜೂಜಿಗಿಳಿಯದೆ ಸರಣಿಯನ್ನು ಕ್ರೀಡೆಯಾಗಿ ಮಾತ್ರ
ನೋಡಲಿ ಎಂಬ ಆಶಯದೊಂದಿಗೆ, ಒಂದು ಮಾತು: ಈ ಸಲ ಕಪ್ ನಮ್ದೆ.

Leave a Reply

Your email address will not be published. Required fields are marked *