Sunday, 5th January 2025

ಸ್ಟ್ರೋಕ್ ನಿರ್ಲಕ್ಷಿಸಿದಷ್ಟೂ ಅಪಾಯಕ್ಕೆ ಆಹ್ವಾನ

ಡಾ.ಉಮಾಶಂಕರ್ ಆರ್.
ನರರೋಗ ತಜ್ಞರು,
ಬೆಂಗಳೂರು ನ್ಯೂರೋ ಸೆಂಟರ್.
ಮೊ ೯೮೮೦೧೫೮೭೫೮

ಸ್ಟ್ರೋಕ್ ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ ಒಂದು ವೈದ್ಯಕೀಯ ತುರ್ತು ಪರಿಸ್ಥಿತಿ. ಮೆದುಳಿಗೆ ರಕ್ತ ಸಂಚಾರದಲ್ಲಿ ವ್ಯತ್ಯಾಸವಾದಾಗ ಸ್ಟ್ರೋಕ್ ಕಾಣಿಸಿಕೊಳ್ಳುತ್ತದೆ. ಸ್ಟ್ರೋಕ್ ನಲ್ಲಿ ಮೂರು ವಿಧಗಳನ್ನು ನಾವು ಗಮನಿಸುತ್ತೇವೆ. ಒಂದು ರಕ್ತಸಂಚಾರ ಕಡಿಮೆಯಾಗಿ ಉಂಟಾಗುವ ಸ್ಟ್ರೋಕ್ (ರಕ್ತ ಕೊರತೆಯ ಸ್ಟ್ರೋಕ್), ಎರಡನೆಯದು ರಕ್ತ ಸಾವವಾಗಿ ಉಂಟಾಗುವ ಸ್ಟ್ರೋಕ್, ಮೂರನೆಯದ್ದು ಮೆದುಳಿನ ಮೇಲ್ಭಾಗದಲ್ಲಿ ರಕ್ತನಾಳ ಒಡೆದು ಉಂಟಾಗುವ ಸ್ಟ್ರೋಕ್.

ಹೃದಯದಲ್ಲಿ ಹೃದಯಾಘಾತವಾದಂತೆ ಮೆದುಳಿನಲ್ಲಿ ರಕ್ತ ಚಲನೆ ಕಡಿಮೆಯಾದಾಗ ಉಂಟಾಗುವ ಪರಿಸ್ಥಿತಿ ಇದು ಅಂತ್ಯಂತ ತುರ್ತು ಚಿಕಿತ್ಸೆ ನೀಡಬೇಕಾದ ಸ್ಥಿತಿ. ಮೆದುಳಿಗೆ ರಕ್ತ ಚಲನೆ ಕಡಿಮೆಯಾದಾಗ ಮೆದುಳಿನ ನರಕೋಶಗಳು ಸಾಯುತ್ತವೆ. ಈ ಸ್ಥಿತಿಯು ರಕ್ತ ಸಂಚಾರ ಕಡಿಮೆಯಾದ ಮೊದಲ ಐದು ನಿಮಿಷಗಳಲ್ಲಿ ಉಂಟಾಗುವ ಪರಿಸ್ಥಿತಿ. ಹಾಗಾಗಿ ಸ್ಟ್ರೋಕ್ ಉಂಟಾದ ಸಂದರ್ಭದಲ್ಲಿ ಚಿಕಿತ್ಸೆ ನೀಡುವ ಅಥವಾ ಚಿಕಿತ್ಸೆ ಪಡೆಯುವ ಸಮಯ ತುಂಬಾ ಅಮೂಲ್ಯವಾಗಿರುತ್ತದೆ. ಇದಕ್ಕೆ ಟೈಂ ಇಸ್ ಬ್ರೇನ್ ಅಥವಾ ಸಮಯವೇ ಮೆದುಳು ಎಂದು ಹೇಳುತ್ತಾರೆ.

ಸ್ಟ್ರೋಕ್ ಉಂಟಾಗಲು ಕಾರಣವೇನು?: ಅಧಿಕ ರಕ್ತದ ಒತ್ತಡ ಒಂದು ಮುಖ್ಯವಾದ ಕಾರಣ. ಹಲವಾರು ಸಂಶೋಧನೆಗಳಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸ್ಟ್ರೋಕ್ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ನೆರವಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ಅಧಿಕ ರಕ್ತದ ಒತ್ತಡ ಎಂದು ತಿಳಿದ ಕ್ಷಣದಿಂದಲೇ ಅದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಜೊತೆಗೆ ರಕ್ತ ಒತ್ತಡವನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಕೆಲವು ಜನರಲ್ಲಿ ರಕ್ತದ ಒತ್ತಡಕ್ಕೆ ಔಷಧಿ ಶುರುಮಾಡಿದ ನಂತರ ಅದನ್ನು ಜೀವನ ಪೂರ್ತಿ ತೆಗೆದುಕೊಳ್ಳಲೇ ಬೇಕು ಎನ್ನುವ ಕಾರಣದಿಂದ ಔಷಧ ಪ್ರಾರಂಭಿಸುವುದನ್ನ ಮುಂದೂಡುತ್ತಾರೆ.

ಇದು ತುಂಬಾ ಅಪಾಯಕಾರಿ ಮತ್ತು ಅನಾಹುತಗಳಿಗೆ ದಾರಿಯಾಗುತ್ತದೆ. ಮಧುಮೇಹ (ಡಯಾಬಿಟೀಸ್) ರಕ್ತನಾಳಗಳ ಮೇಲೆ ತೊಂದರೆ ಉಂಟುಮಾಡುವ ಇನ್ನೊಂದು ಪ್ರಮುಖ ಕಾರಣ. ಹೀಗಾಗಿ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬೇಕಾಗುತ್ತದೆ. ಅಧಿಕ ಕೊಲೆಸ್ಟ್ರಾಲ್(ಕೊಬ್ಬಿನಂಶ) ಕೂಡ ರಕ್ತನಾಳಗಳಲ್ಲಿ ರಕ್ತಸಂಚಾರ ತಡೆಗಟ್ಟಲು ಮುಖ್ಯಕಾರಣ. ಹೀಗಾಗಿ ಲೋ ಡೆಸ್ಸಿಟಿ ಕೊಲೆಸ್ಟ್ರಾಲ್(ಎಲ್‌ಡಿಎಲ್) ಅಥವಾ ಬ್ಯಾಡ್ ಕೊಲೆಸ್ಟರಾಲ್ ನಿಯಂತ್ರಿಸುವುದು ಮುಖ್ಯ.

ಧೂಮಪಾನ ಕೂಡ ರಕ್ತನಾಳಗಳಲ್ಲಿ ನಾಳದ ಒಳಭಾಗದ ಜೀವಕೋಶಗಳ ಮೇಲೆ ತೊಂದರೆ ಉಂಟುಮಾಡಿ ಅಲ್ಲಿ ರಕ್ತನಾಳಕ್ಕೆ ತೊಂದರೆಯಾಗಿ ಕೊಲೆಸ್ಟ್ರಾಲ್ ಶೇಖರಣೆಯಾಗಿ ರಕ್ತ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತದೆ. ಧೂಮ್ರಪಾನ ಕಿರಿಯ ವಯಸ್ಸಿ ನವರಲ್ಲಿ ಸ್ಟ್ರೋಕ್ ಉಂಟಾಗಲು ಪ್ರಮುಖ ಕಾರಣವಾಗಿರುತ್ತದೆ. ಮದ್ಯಪಾನವೂ ಕೂಡ ಸ್ಟ್ರೋಕ್ ಉಂಟಾಗಲು ಕಾರಣ ವಾಗಿದ್ದು ಮದ್ಯಪಾನ ಸೇವನೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ. ಮೇಲಿನ ಐದೂ ಕಾರಣಗಳಲ್ಲಿ  ಮಾರ್ಪಡಿಸ ಬಹುದಾಗಿದಾದ ಅಪಾಯಕಾರಿ ಅಂಶಗಳು ಎಂದು ಪರಿಗಣಿಸುತ್ತೇವೆ. ಹೀಗಾಗಿ ಇದರ ಬಗ್ಗೆ ಗಮನ ಹರಿಸುವುದು ತುಂಬಾ ಅವಶ್ಯಕ.

ಮಾರ್ಪಡಿಸಲಾಗದ ಅಂಶಗಳೆಂದರೆ ಅಪರೂಪಕ್ಕೆ ಅನುವಂಶೀಯವಾಗಿ ಸ್ಟ್ರೋಕ್ ಉಂಟಾಗುವುದು, ಹುಟ್ಟಿನಿಂದಲೇ ರಕ್ತನಾಳಗಳಲ್ಲಿ ತೊಂದರೆ ಇತ್ಯಾದಿ. ಸ್ಟ್ರೋಕ್ ಗುರುತಿಸುವುದು ಹೇಗೆ?: ಮೊದಲೇ ಹೇಳಿದ ಹಾಗೆ ಸ್ಟ್ರೋಕ್ ಒಂದು ತುರ್ತು ಸ್ಥಿತಿ ಇದನ್ನು ಗುರುತಿಸುವುದು ತುಂಬಾ ಮುಖ್ಯ. ಮೆದುಳು ಹಲವಾರು ಕಾರ್ಯಗಳನ್ನು ನಿಯಂತ್ರಿಸುವುದರಿಂದ ಮತ್ತು ಮೆದುಳಿನ ನಿರ್ದಿಷ್ಟ ಕಾರ್ಯವನ್ನು ನಿಯಂತ್ರಿಸುವುದರಿಂದ ಯಾವ ಜಾಗಕ್ಕೆ ರಕ್ತ ಸಂಚಾರ ಕಡಿಮೆಯಾಗಿ ಅದನ್ನು ಆಧರಿಸಿ ಸ್ಟ್ರೋಕ್ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಜನಸಾಮಾನ್ಯರಿಗೆ ಗುರುತಿಸಲು ಅನುವಾಗುವಂತೆ ಮತ್ತು ಚಿಕಿತ್ಸೆಯ ಸಮಯ ಪ್ರಜ್ಞೆ ಬಗ್ಗೆ ಅರಿವು ಮೂಡಿಸಲು ಸಂಕ್ಷಿಪ್ತವಾಗಿ -ಸ್ಟ್ ಎಂಬ ಲಕ್ಷಣಗಳನ್ನ ಪರಿಚಯಿಸಲಾಗಿದೆ.

ಎ- ಎಂದರೆ -ಸ್-ಮುಖದಲ್ಲಿ ಉಂಟಾಗುವ ಬದಲಾವಣೆ) ಬಾಯಿ ಸೊಟ್ಟವಾಗುವುದು, ಎ ಎಂದರೆ (ಆರ್ಮ್-ಕೈಕಾಲಿನ ಶಕ್ತಿ ಕುಂದುವುದು) ಎಸ್(ಸ್ಪೀಚ್- ಮಾತು ತೊದಲುವುದು) ಟಿ ಎಂದರೆ ಟೈಂ: ಸಮಯದ ಬಗ್ಗೆ ಅರಿವು ಇದನ್ನು ಹೊರತುಪಡಿಸಿ ತಲೆಸುತ್ತು, ನಡೆಯಲು ನಿಯಂತ್ರಣವಿಲ್ಲದಿರುವುದು, ದೃಷ್ಟಿ ಮಂಜಾಗುವುದು, ಜ್ಞಾಪಕ ಶಕ್ತಿ ಕುಂದುವುದು, ಮೂರ್ಛೆ ಬರುವುದು ಇತ್ಯಾದಿ ಕೂಡ ಸ್ಟ್ರೋಕ್‌ನ ಲಕ್ಷಣಗಳು ಆಗಿರಬಹುದು.

ಸ್ಟ್ರೋಕ್ ಚಿಕಿತ್ಸೆ ಹೇಗೆ?: ಸ್ಟ್ರೋಕ್ ಉಂಟಾದಾಗ ಹತ್ತಿರದ ಸ್ಟ್ರೋಕ್‌ಗೆ ಚಿಕಿತ್ಸೆ ನೀಡಲು (ಸ್ಟ್ರೋಕ್ ರೆಡಿ ಹಾಸ್ಪಿಟಲ್) ಸೌಲಭ್ಯವಿರುವ ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು. ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಸಿಟಿ ಸ್ಕ್ಯಾನ್ ಮಾಡಿ ಅಗತ್ಯವಿದ್ದರೆ ರಕ್ತ ಹೆಪ್ಪುಗಟ್ಟುವಿಕೆಯನ್ನು ಕರಗಿಸುವ ಚುಚ್ಚುಮದ್ದನ್ನು ಸ್ಟ್ರೋಕ್ ಉಂಟಾದ ಮೊದಲ ಮೂರು ಗಂಟೆಗಳಲ್ಲಿ (ಎಷ್ಟು ಬೇಗ
ಸಾಧ್ಯವೋ ಅಷ್ಟು ಒಳ್ಳೆಯದು) ಕೊಡುವುದರಿಂದ ಹೆಚ್ಚಿನ ಅಪಾಯವನ್ನು ಕಡಿಮೆಮಾಡಬಹುದು. ಈ ರೀತಿಯ ಆಸ್ಪತ್ರೆಗಳಲ್ಲಿ ಎಷ್ಟು ಬೇಗ ಚುಚ್ಚುಮದ್ದು ನೀಡುತ್ತಾರೆ ಮತ್ತು ಮುಂದಿನ ಪ್ರಕ್ರಿಯೆಗಳನ್ನು ತೆಗೆದುಕೊಳ್ಳಲು ವೈದ್ಯರ ತಂಡ ರಚಿಸಿ. ಮೂರು ಗಂಟೆಯ ನಂತರ ಅಥವಾ ಅವಶ್ಯಕವಿದ್ದಲ್ಲಿ ರಕ್ತನಾಳದ ಒಳಗೆ ಕೆಥಟರ್‌ನ್ನು ಅಳವಡಿಸಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆಯಲು ಕೂಡ ಸಾಧ್ಯವಿರುತ್ತದೆ (ಮೆಕ್ಯಾನಿಕಲ್ ಟ್ರಾಂಬೆಕ್ಟಮಿ) ಇದರ ಜೊತೆಯಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಿಸುವುದು ಕೂಡ ಮುಖ್ಯ.

ಮೆದುಳಿನಲ್ಲಿ ಊತ ಉಂಟಾದಾಗ ಅದನ್ನ ಕಡಿಮೆಮಾಡಲು ಔಷಧಗಳು ಹಾಗೂ ಶಸಚಿಕಿತ್ಸೆಯ ಅವಶ್ಯಕತೆ ಕೂಡ ಇರಬ ಹುದು. ಹಲವಾರು ಬಾರಿ ಆಹಾರ ಕೊಡಲು, ಮೂಗಿನ ನಾಳ ಅಥವಾ ಅಪರೂಪವಾಗಿ ಕೃತಕ ಉಸಿರಾಟದ (ವೆಂಟಿಲೇಟರ್) ಅವಶ್ಯಕತೆ ಕೂಡ ಬರಬಹುದು.ಇದರ ನಂತರ ಫಿಸಿಯೋಥೆರಪಿ, ನಿಯಂತ್ರಿತ ವ್ಯಾಯಾಮ ಕೂಡ ಮುಖ್ಯ.

ತಪ್ಪು ಕಲ್ಪನೆ: ನಾಟಿ ಮದ್ದು, ಪಾರಿವಾಳದ ರಕ್ತ ಕುಡಿಸುವುದು, ಕಂಬಳಿ ಹೊದಿಸುವುದು, ಉಷ್ಣ ಆಹಾರ ಕೊಡುವುದು ಇತ್ಯಾದಿ. ಮತ್ತೆ ಮತ್ತೆ ಸ್ಟ್ರೋಕ್ ಬರುತ್ತದೆ ಎನ್ನುವ ಭಾವನೆ ಬಹುಪಾಲು ಜನರಲ್ಲಿದೆ ರಕ್ತನಾಳಗಳ ಪರೀಕ್ಷೆ ಮಾಡಿ, ಎನಾದರೂ ಅಡೆತಡೆಯಿದ್ದರೆ ಅದನ್ನು ನಿವಾರಿಸುವುದರಿಂದ ಮತ್ತು ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದರಿಂದ, ನಿಯಮಿತ ವ್ಯಾಯಾಮ, ಸೂಕ್ತ ಸಮಯದಲ್ಲಿ ಔಷಽಗಳನ್ನು ತೆಗೆದುಕೊಳ್ಳುವುದರಿಂದ ಸ್ಟ್ರೋಕ್ ಬರೆದಂತೆ ತಡೆಗಟ್ಟಬಹುದು.

ಸ್ಟ್ರೋಕ್ ಉಂಟಾದ ನಂತರ ಮೆದುಳಿನ ಯಾವ ಭಾಗಕ್ಕೆ ತೊಂದರೆ ಉಂಟಾಗಿದೆಯೋ ಆ ಭಾಗ ಸಂಪೂರ್ಣ  ನಿಷ್ಕ್ರ್ರಿಯ ವಾಗುತ್ತದೆ. ಆ ಭಾಗದ ಕೆಲಸವನ್ನು ಮೆದುಳಿನ ಬೇರೆ ಭಾಗಗಳು ನಿರ್ವಹಿಸುವಂತೆ ಮೆದುಳಿಗೆ ಸೂಕ್ತ ತರಬೇತಿ ನೀಡುವುದು ಚಿಕಿತ್ಸೆಯ ಒಂದು ಅಂಗ. ಬಹುಪಾಲು ಜನರಲ್ಲಿ ನಿಧಾನವಾಗಿ ಸ್ವಾಭಾವಿಕವಾಗಿಯೇ ಚೇತರಿಕೆ ಉಂಟಾಗುತ್ತದೆ. ಸೂಕ್ತ
ಸಮಯದಲ್ಲಿ ಚಿಕಿತ್ಸೆ ನೀಡುವುದರಿಂದ ಸುಧಾರಣೆಯಾಗುವ ಗತಿ ಮತ್ತು ಮಿತಿ ಎರಡರ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಸ್ಟ್ರೋಕ್ ಅನ್ನು ತುರ್ತು ಸ್ಥಿತಿ ಎಂದು ಪರಿಗಣಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡುವುದರಿಂದ ರೋಗಿಯು ತನ್ನ ಸಮಾಜದಲ್ಲಿ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಹಾಗೂ ಸಮಾಜಕ್ಕೆ ಉಪಯೋಗಿಯಾಗಲು ಅನುಕೂಲವಾಗುತ್ತದೆ.

ಸ್ಕ್ಟ್ರೋಕ್ ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ ಒಂದು ವೈದ್ಯಕೀಯ ತುರ್ತು ಪರಿಸ್ಥಿತಿ. ಮೆದುಳಿಗೆ ರಕ್ತ ಸಂಚಾರದಲ್ಲಿ ವ್ಯತ್ಯಾಸವಾದಾಗ ಸ್ಟ್ರೋಕ್ ಕಾಣಿಸಿಕೊಳ್ಳುತ್ತದೆ. ಸ್ಟ್ರೋಕ್ ನಲ್ಲಿ ಮೂರು ವಿಧಗಳನ್ನು ನಾವು ಗಮನಿಸುತ್ತೇವೆ. ಒಂದು ರಕ್ತಸಂಚಾರ ಕಡಿಮೆಯಾಗಿ ಉಂಟಾಗುವ ಸ್ಟ್ರೋಕ್ (ರಕ್ತ ಕೊರತೆಯ ಸ್ಟ್ರೋಕ್), ಎರಡನೆಯದು ರಕ್ತ ಸಾವವಾಗಿ ಉಂಟಾಗುವ ಸ್ಟ್ರೋಕ್, ಮೂರನೆಯದ್ದು ಮೆದುಳಿನ ಮೇಲ್ಭಾಗದಲ್ಲಿ ರಕ್ತನಾಳ ಒಡೆದು ಉಂಟಾಗುವ ಸ್ಟ್ರೋಕ್.

ಹೃದಯದಲ್ಲಿ ಹೃದಯಾಘಾತವಾದಂತೆ ಮೆದುಳಿನಲ್ಲಿ ರಕ್ತ ಚಲನೆ ಕಡಿಮೆಯಾದಾಗ ಉಂಟಾಗುವ ಪರಿಸ್ಥಿತಿ ಇದು ಅಂತ್ಯಂತ ತುರ್ತು ಚಿಕಿತ್ಸೆ ನೀಡಬೇಕಾದ ಸ್ಥಿತಿ. ಮೆದುಳಿಗೆ ರಕ್ತ ಚಲನೆ ಕಡಿಮೆಯಾದಾಗ ಮೆದುಳಿನ ನರಕೋಶಗಳು ಸಾಯುತ್ತವೆ. ಈ ಸ್ಥಿತಿಯು ರಕ್ತ ಸಂಚಾರ ಕಡಿಮೆಯಾದ ಮೊದಲ ಐದು ನಿಮಿಷಗಳಲ್ಲಿ ಉಂಟಾಗುವ ಪರಿಸ್ಥಿತಿ. ಹಾಗಾಗಿ ಸ್ಟ್ರೋಕ್ ಉಂಟಾದ ಸಂದರ್ಭದಲ್ಲಿ ಚಿಕಿತ್ಸೆ ನೀಡುವ ಅಥವಾ ಚಿಕಿತ್ಸೆ ಪಡೆಯುವ ಸಮಯ ತುಂಬಾ ಅಮೂಲ್ಯವಾಗಿರುತ್ತದೆ. ಇದಕ್ಕೆ ಟೈಂ ಇಸ್ ಬ್ರೇನ್ ಅಥವಾ ಸಮಯವೇ ಮೆದುಳು ಎಂದು ಹೇಳುತ್ತಾರೆ.

ಸ್ಟ್ರೋಕ್ ಉಂಟಾಗಲು ಕಾರಣವೇನು?: ಅಧಿಕ ರಕ್ತದ ಒತ್ತಡ ಒಂದು ಮುಖ್ಯವಾದ ಕಾರಣ. ಹಲವಾರು ಸಂಶೋಧನೆಗಳಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸ್ಟ್ರೋಕ್ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ನೆರವಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ಅಧಿಕ ರಕ್ತದ ಒತ್ತಡ ಎಂದು ತಿಳಿದ ಕ್ಷಣದಿಂದಲೇ ಅದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಜೊತೆಗೆ ರಕ್ತ ಒತ್ತಡವನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ಕೆಲವು ಜನರಲ್ಲಿ ರಕ್ತದ ಒತ್ತಡಕ್ಕೆ ಔಷಧ ಶುರುಮಾಡಿದ ನಂತರ ಅದನ್ನು ಜೀವನ ಪೂರ್ತಿ ತೆಗೆದುಕೊಳ್ಳಲೇ ಬೇಕು ಎನ್ನುವ ಕಾರಣದಿಂದ ಔಷಧ ಪ್ರಾರಂಭಿಸುವುದನ್ನ ಮುಂದೂಡುತ್ತಾರೆ.

ಇದು ತುಂಬಾ ಅಪಾಯಕಾರಿ ಮತ್ತು ಅನಾಹುತಗಳಿಗೆ ದಾರಿಯಾಗುತ್ತದೆ. ಮಧುಮೇಹ (ಡಯಾಬಿಟೀಸ್) ರಕ್ತನಾಳಗಳ ಮೇಲೆ ತೊಂದರೆ ಉಂಟುಮಾಡುವ ಇನ್ನೊಂದು ಪ್ರಮುಖ ಕಾರಣ. ಹೀಗಾಗಿ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬೇಕಾಗುತ್ತದೆ. ಅಧಿಕ ಕೊಲೆಸ್ಟ್ರಾಲ್(ಕೊಬ್ಬಿನಂಶ) ಕೂಡ ರಕ್ತನಾಳಗಳಲ್ಲಿ ರಕ್ತಸಂಚಾರ ತಡೆಗಟ್ಟಲು ಮುಖ್ಯಕಾರಣ. ಹೀಗಾಗಿ ಲೋ ಡೆಸ್ಸಿಟಿ ಕೊಲೆಸ್ಟ್ರಾಲ್(ಎಲ್‌ಡಿಎಲ್) ಅಥವಾ ಬ್ಯಾಡ್ ಕೊಲೆಸ್ಟರಾಲ್ ನಿಯಂತ್ರಿಸುವುದು ಮುಖ್ಯ.

ಧೂಮಪಾನ ಕೂಡ ರಕ್ತನಾಳಗಳಲ್ಲಿ ನಾಳದ ಒಳಭಾಗದ ಜೀವಕೋಶಗಳ ಮೇಲೆ ತೊಂದರೆ ಉಂಟುಮಾಡಿ ಅಲ್ಲಿ ರಕ್ತನಾಳಕ್ಕೆ ತೊಂದರೆಯಾಗಿ ಕೊಲೆಸ್ಟ್ರಾಲ್ ಶೇಖರಣೆಯಾಗಿ ರಕ್ತ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತದೆ. ಧೂಮ್ರಪಾನ ಕಿರಿಯ ವಯಸ್ಸಿ ನವರಲ್ಲಿ ಸ್ಟ್ರೋಕ್ ಉಂಟಾಗಲು ಪ್ರಮುಖ ಕಾರಣವಾಗಿರುತ್ತದೆ. ಮದ್ಯಪಾನವೂ ಕೂಡ ಸ್ಟ್ರೋಕ್ ಉಂಟಾಗಲು ಕಾರಣ ವಾಗಿದ್ದು ಮದ್ಯಪಾನ ಸೇವನೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ. ಮೇಲಿನ ಐದೂ ಕಾರಣಗಳಲ್ಲಿ ಮಾರ್ಪಡಿಸ ಬಹುದಾಗಿದಾದ ಅಪಾಯಕಾರಿ ಅಂಶಗಳು ಎಂದು ಪರಿಗಣಿಸುತ್ತೇವೆ. ಹೀಗಾಗಿ ಇದರ ಬಗ್ಗೆ ಗಮನ ಹರಿಸುವುದು ತುಂಬಾ ಅವಶ್ಯಕ. ಮಾರ್ಪಡಿಸಲಾಗದ ಅಂಶಗಳೆಂದರೆ ಅಪರೂಪಕ್ಕೆ ಅನುವಂಶೀಯವಾಗಿ ಸ್ಟ್ರೋಕ್ ಉಂಟಾಗುವುದು, ಹುಟ್ಟಿನಿಂದಲೇ ರಕ್ತನಾಳಗಳಲ್ಲಿ ತೊಂದರೆ ಇತ್ಯಾದಿ.

ಸ್ಟ್ರೋಕ್ ಗುರುತಿಸುವುದು ಹೇಗೆ?: ಮೊದಲೇ ಹೇಳಿದ ಹಾಗೆ ಸ್ಟ್ರೋಕ್ ಒಂದು ತುರ್ತು ಸ್ಥಿತಿ ಇದನ್ನು ಗುರುತಿಸುವುದು ತುಂಬಾ ಮುಖ್ಯ. ಮೆದುಳು ಹಲವಾರು ಕಾರ್ಯಗಳನ್ನು ನಿಯಂತ್ರಿಸುವುದರಿಂದ ಮತ್ತು ಮೆದುಳಿನ ನಿರ್ದಿಷ್ಟ ಕಾರ್ಯವನ್ನು ನಿಯಂತ್ರಿಸುವುದರಿಂದ ಯಾವ ಜಾಗಕ್ಕೆ ರಕ್ತ ಸಂಚಾರ ಕಡಿಮೆಯಾಗಿ ಅದನ್ನು ಆಧರಿಸಿ ಸ್ಟ್ರೋಕ್ ಲಕ್ಷಣಗಳು ಕಾಣಿಸಿ ಕೊಳ್ಳುತ್ತದೆ. ಜನಸಾಮಾನ್ಯರಿಗೆ ಗುರುತಿಸಲು ಅನುವಾಗುವಂತೆ ಮತ್ತು ಚಿಕಿತ್ಸೆಯ ಸಮಯ ಪ್ರe ಬಗ್ಗೆ ಅರಿವು ಮೂಡಿಸಲು ಸಂಕ್ಷಿಪ್ತವಾಗಿ -ಸ್ಟ್ ಎಂಬ ಲಕ್ಷಣಗಳನ್ನ ಪರಿಚಯಿಸಲಾಗಿದೆ.

ಎ- ಎಂದರೆ -ಸ್-ಮುಖದಲ್ಲಿ ಉಂಟಾಗುವ ಬದಲಾವಣೆ) ಬಾಯಿ ಸೊಟ್ಟವಾಗುವುದು, ಎ ಎಂದರೆ (ಆರ್ಮ್-ಕೈಕಾಲಿನ ಶಕ್ತಿ ಕುಂದುವುದು) ಎಸ್(ಸ್ಪೀಚ್- ಮಾತು ತೊದಲುವುದು) ಟಿ ಎಂದರೆ ಟೈಂ: ಸಮಯದ ಬಗ್ಗೆ ಅರಿವು ಇದನ್ನು ಹೊರತುಪಡಿಸಿ ತಲೆಸುತ್ತು, ನಡೆಯಲು ನಿಯಂತ್ರಣವಿಲ್ಲದಿರುವುದು, ದೃಷ್ಟಿ ಮಂಜಾಗುವುದು, ಜ್ಞಾಪಕ ಶಕ್ತಿ ಕುಂದುವುದು, ಮೂರ್ಛೆ ಬರುವುದು ಇತ್ಯಾದಿ ಕೂಡ ಸ್ಟ್ರೋಕ್‌ನ ಲಕ್ಷಣಗಳು ಆಗಿರಬಹುದು.

ಸ್ಟ್ರೋಕ್ ಚಿಕಿತ್ಸೆ ಹೇಗೆ?: ಸ್ಟ್ರೋಕ್ ಉಂಟಾದಾಗ ಹತ್ತಿರದ ಸ್ಟ್ರೋಕ್‌ಗೆ ಚಿಕಿತ್ಸೆ ನೀಡಲು (ಸ್ಟ್ರೋಕ್ ರೆಡಿ ಹಾಸ್ಪಿಟಲ್) ಸೌಲಭ್ಯವಿರುವ ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು. ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಸಿಟಿ ಸ್ಕ್ಯಾನ್ ಮಾಡಿ ಅಗತ್ಯವಿದ್ದರೆ ರಕ್ತ ಹೆಪ್ಪುಗಟ್ಟುವಿಕೆಯನ್ನು ಕರಗಿಸುವ ಚುಚ್ಚುಮದ್ದನ್ನು ಸ್ಟ್ರೋಕ್ ಉಂಟಾದ ಮೊದಲ ಮೂರು ಗಂಟೆಗಳಲ್ಲಿ (ಎಷ್ಟು ಬೇಗ ಸಾಧ್ಯವೋ ಅಷ್ಟು ಒಳ್ಳೆಯದು) ಕೊಡುವುದರಿಂದ ಹೆಚ್ಚಿನ ಅಪಾಯವನ್ನು ಕಡಿಮೆಮಾಡಬಹುದು. ಈ ರೀತಿಯ ಆಸ್ಪತ್ರೆಗಳಲ್ಲಿ ಎಷ್ಟು ಬೇಗ ಚುಚ್ಚುಮದ್ದು ನೀಡುತ್ತಾರೆ ಮತ್ತು ಮುಂದಿನ ಪ್ರಕ್ರಿಯೆಗಳನ್ನು ತೆಗೆದುಕೊಳ್ಳಲು ವೈದ್ಯರ ತಂಡ ರಚಿಸಿ ಕೊಡಿರು ತ್ತಾರೆ. ಮೂರು ಗಂಟೆಯ ನಂತರ ಅಥವಾ ಅವಶ್ಯಕವಿದ್ದಲ್ಲಿ ರಕ್ತನಾಳದ ಒಳಗೆ ಕೆಥಟರ್‌ನ್ನು ಅಳವಡಿಸಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆಯಲು ಕೂಡ ಸಾಧ್ಯವಿರುತ್ತದೆ (ಮೆಕ್ಯಾನಿಕಲ್ ಟ್ರಾಂಬೆಕ್ಟಮಿ) ಇದರ ಜೊತೆಯಲ್ಲಿ ರಕ್ತದೊತ್ತಡ ಮತ್ತು ಮಧು ಮೇಹ ನಿಯಂತ್ರಿಸುವುದು ಕೂಡ ಮುಖ್ಯ. ಮೆದುಳಿನಲ್ಲಿ ಊತ ಉಂಟಾದಾಗ ಅದನ್ನ ಕಡಿಮೆಮಾಡಲು ಔಷಧಗಳು ಹಾಗೂ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಕೂಡ ಇರಬಹುದು.

ಹಲವಾರು ಬಾರಿ ಆಹಾರ ಕೊಡಲು, ಮೂಗಿನ ನಾಳ ಅಥವಾ ಅಪರೂಪವಾಗಿ ಕೃತಕ ಉಸಿರಾಟದ (ವೆಂಟಿಲೇಟರ್) ಅವಶ್ಯಕತೆ ಕೂಡ ಬರಬಹುದು.ಇದರ ನಂತರ ಫಿಸಿಯೋಥೆರಪಿ, ನಿಯಂತ್ರಿತ ವ್ಯಾಯಾಮ ಕೂಡ ಮುಖ್ಯ.

ತಪ್ಪು ಕಲ್ಪನೆ: ನಾಟಿ ಮದ್ದು, ಪಾರಿವಾಳದ ರಕ್ತ ಕುಡಿಸುವುದು, ಕಂಬಳಿ ಹೊದಿಸುವುದು, ಉಷ್ಣ ಆಹಾರ ಕೊಡುವುದು ಇತ್ಯಾದಿ. ಮತ್ತೆ ಮತ್ತೆ ಸ್ಟ್ರೋಕ್ ಬರುತ್ತದೆ ಎನ್ನುವ ಭಾವನೆ ಬಹುಪಾಲು ಜನರಲ್ಲಿದೆ ರಕ್ತನಾಳಗಳ ಪರೀಕ್ಷೆ ಮಾಡಿ, ಎನಾದರೂ ಅಡೆತಡೆಯಿದ್ದರೆ ಅದನ್ನು ನಿವಾರಿಸುವುದರಿಂದ ಮತ್ತು ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದರಿಂದ, ನಿಯಮಿತ ವ್ಯಾಯಾಮ, ಸೂಕ್ತ ಸಮಯದಲ್ಲಿ ಔಷಽಗಳನ್ನು ತೆಗೆದುಕೊಳ್ಳುವುದರಿಂದ ಸ್ಟ್ರೋಕ್ ಬರೆದಂತೆ ತಡೆಗಟ್ಟಬಹುದು.

ಸ್ಟ್ರೋಕ್ ಉಂಟಾದ ನಂತರ ಮೆದುಳಿನ ಯಾವ ಭಾಗಕ್ಕೆ ತೊಂದರೆ ಉಂಟಾಗಿದೆಯೋ ಆ ಭಾಗ ಸಂಪೂರ್ಣ ನಿಷ್ಕ್ರ್ರಿಯ ವಾಗುತ್ತದೆ. ಆ ಭಾಗದ ಕೆಲಸವನ್ನು ಮೆದುಳಿನ ಬೇರೆ ಭಾಗಗಳು ನಿರ್ವಹಿಸುವಂತೆ ಮೆದುಳಿಗೆ ಸೂಕ್ತ ತರಬೇತಿ ನೀಡುವುದು ಚಿಕಿತ್ಸೆಯ ಒಂದು ಅಂಗ. ಬಹುಪಾಲು ಜನರಲ್ಲಿ ನಿಧಾನವಾಗಿ ಸ್ವಾಭಾವಿಕವಾಗಿಯೇ ಚೇತರಿಕೆ ಉಂಟಾಗುತ್ತದೆ. ಸೂಕ್ತ
ಸಮಯದಲ್ಲಿ ಚಿಕಿತ್ಸೆ ನೀಡುವುದರಿಂದ ಸುಧಾರಣೆಯಾಗುವ ಗತಿ ಮತ್ತು ಮಿತಿ ಎರಡರ ಮೇಲೂ ಪರಿಣಾಮ ಬೀರುತ್ತದೆ ಹೀಗಾಗಿ ಸ್ಟ್ರೋಕ್ ಅನ್ನು ತುರ್ತು ಸ್ಥಿತಿ ಎಂದು ಪರಿಗಣಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡುವುದ ರಿಂದ ರೋಗಿಯು ತನ್ನ ಸಮಾಜ ದಲ್ಲಿ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಹಾಗೂ ಸಮಾಜಕ್ಕೆ ಉಪಯೋಗಿಯಾಗಲು ಅನುಕೂಲವಾಗುತ್ತದೆ.