Tuesday, 26th November 2024

ಮೇ 24ರಿಂದ ಗೋ ಫಸ್ಟ್ ವಿಮಾನ ಸೇವೆ ಪುನಾರಂಭ..!

ನವದೆಹಲಿ: ದಿವಾಳಿಯಿಂದ ರಕ್ಷಿಸಬೇಕೆಂದು ಮಾಡಿದ ಮನವಿಗೆ ಎನ್​ಸಿಎಲ್​ಟಿ ಸಮ್ಮತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಹುತೇಕ ಸಮಾಪ್ತಿಯಾಗುವಂತಿದ್ದ ಗೋ ಫಸ್ಟ್ ಏರ್​ಲೈನ್ಸ್ ಸಂಸ್ಥೆಗೆ ಮರುಜೀವ ಸಿಕ್ಕಂತಾಗಿದೆ.

ದಿವಾಳಿ ಪರಿಹಾರ ವಿಚಾರದಲ್ಲಿ ನುರಿತ ಪರಿಣಿತರೊಬ್ಬರನ್ನು ಎನ್​ಸಿಎಲ್​ಟಿ ನೇಮಿಸಿದೆ. ಇವರು ಸಂಸ್ಥೆ ಹಾಗು ಅದರ ವಿಮಾನಗಳ ಗುತ್ತಿಗೆದಾರ ಸಂಸ್ಥೆಗಳ ಮಧ್ಯೆ ಮಾತುಕತೆ ನಡೆಸಿ ಒಂದು ಪರಿಹಾರ ಯೋಜನೆಯನ್ನು ರೂಪಿಸುವ ನಿರೀಕ್ಷೆ ಇದೆ.

ಅಲ್ಲಿಯವರೆಗೂ ಗೋ ಫಸ್ಟ್ ಸಣ್ಣ ಮಟ್ಟದಲ್ಲಿ ತನ್ನ ಸೇವೆಯನ್ನು ಪುನಾರಂಭಿಸಲಿದೆ. ಮೇ 24ರಿಂದ ಗೋ ಫಸ್ಟ್​ನ 20 ವಿಮಾನಗಳು ಓಡಾಟ ನಡೆಸಲಿವೆಯಂತೆ.

ಆರಂಭದಲ್ಲಿ ವಿಮಾನ ಹಾರಾಟವು ವಾರಕ್ಕೆ 1,200 ಫ್ಲೈಟ್​ಗೆ ಸೀಮಿತವಾಗಿರುತ್ತದೆ.