Friday, 3rd January 2025

ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು: ಸಿದ್ಧಲಿಂಗ ಸ್ವಾಮೀಜಿ

ತುಮಕೂರು: ನಮ್ಮ ಮತ ಅಮೂಲ್ಯ ಆಗಿರುವಂತಹದ್ದು, ಅದಕ್ಕೆ ಕೋಟಿ ಕೊಟ್ಟರೂ ಬೆಲೆ ಕಟ್ಟಲು ಸಾಧ್ಯವೇ ಇಲ್ಲವೆಂದು ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಸ್ವಾಮೀಜಿ ಹೇಳಿದರು.
ನಂತರ  ಮಾತನಾಡಿ, ಅಷ್ಟು ಬೆಲೆ ಬಾಳುವ ಮತವನ್ನ ಆಮಿಷಗಳಿಗೆ ಒಳಗಾಗದೇ ಮತ ಚಲಾವಣೆ ಮಾಡಬೇಕು. ಇದು ಪ್ರಜಾ ಪ್ರಭುತ್ವದ ಹಕ್ಕು, ಎಲ್ಲರೂ ಬಂದು ಮತದಾನ ಮಾಡಬೇಕು. ಭಾರತೀಯ ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಬಹಳಷ್ಟು ಮಹತ್ವ ಇದೆ. ನಮ್ಮದೇ ಪ್ರತಿನಿಧಿಗಳನ್ನ ಆಯ್ಕೆ ಮಾಡಿಕೊಳ್ಳುವಂತ ವ್ಯವಸ್ಥೆ ಇರುವಂತಹದ್ದು. ಸಂವಿಧಾನ ಕೊಟ್ಟಿರುವ ಹಕ್ಕನ್ನ ಪ್ರತಿಯೊಬ್ಬರು ಚಲಾವಣೆ ಮಾಡಬೇಕು. ಯಾರು ಕೂಡ ಮನೆಯಲ್ಲಿ ಉಳಿಯದೆ ಪ್ರಜಾಪ್ರಭುತ್ವದ ಯಶಸ್ವಿಗೆ ಮತದಾನ ಮಾಡಬೇಕು. ನ್ಯಾಯ ಮತ್ತು ಮುಕ್ತವಾದ ರೀತಿಯಲ್ಲಿ ಹಕ್ಕು ಚಲಾಯಿಸಬೇಕು ಎಂದರು.