Friday, 22nd November 2024

ಸೂಪರ್‌ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್’ಗೆ ಚೆನ್ನೈ ಸವಾಲು

ದುಬೈ: ಒಂದೆಡೆ ಪಂಜಾಬ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಮತ್ತೊಂದೆಡೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಅಚ್ಚರಿಯ ಸೋಲುಂಡ ಚೆನ್ನೈ ಸೂಪರ್‌ ಕಿಂಗ್ಸ್‌ ಈ ತಂಡಗಳೆರಡು ದುಬೈಯಲ್ಲಿ ಶುಕ್ರವಾರ ಸೆಣಸಲಿವೆ.

ಎಂ.ಎಸ್. ಧೋನಿ ಬಳಗಕ್ಕೆ ಇದು ಮೂರನೇ ಪಂದ್ಯ. ಸ್ಟಾರ್‌ ಆಟಗಾರರಾದ ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌ ಇಲ್ಲದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೋತದ್ದು ಚೆನ್ನೈಗೆ ಎದುರಾದ ದೊಡ್ಡ ಆಘಾತವಾಗಿದೆ.  ಕೇರಳದ ವಿಕೆಟ್ ಕೀಪರ್‌ ಸಂಜು ಸ್ಯಾಮ್ಸನ್‌, ನಾಯಕ ಸ್ಟೀವನ್‌ ಸ್ಮಿತ್‌, ಜೋಫ್ರ ಆರ್ಚರ್‌ ಸೇರಿಕೊಂಡು ಚೆನ್ನೈ ಬೌಲಿಂಗನ್ನು ನುಚ್ಚು ನೂರಾಗಿಸಿದ್ದರು.

ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ  ಮುಖಾಮುಖಯಲ್ಲಿ ಚೆನ್ನೈ ತಂಡ ಎರಡನೇ ಗೆಲುವಿ ಗಾಗಿ ಹಾತೊರೆಯುತ್ತಿದೆ. ಬಲಿಷ್ಠ ಮುಂಬೈ ವಿರುದ್ದ ಗೆದ್ದರೂ, ರಾಜಸ್ತಾನ ವಿರುದ್ದ ಆಘಾತಕಾರಿ ಸೋಲುಂಡಿದೆ. ಹೀಗಾಗಿ, ಇಂದಿನ ಪಂದ್ಯದಲ್ಲಿ ಸ್ಥಾನ ಬದಲಾವಣೆಯಾದರೂ ಅಚ್ಚರಿಯಿಲ್ಲ. ಇತ್ತ ಡೆಲ್ಲಿ ತಂಡ ಒಂದು ಪಂದ್ಯ ಗೆದ್ದು, ಗೆಲುವಿನ ಸಂಭ್ರಮ ಮುಂದುವರೆಸುವ ಇರಾದೆಯಲ್ಲಿದೆ.

ಪಂಜಾಬ್ ಎದುರು ಸೂಪರ್‌ ಓವರಿನಲ್ಲಿ ಗೆದ್ದರೂ, ಚೆನ್ನೈಗೆ ಸೆಡ್ಡು ಹೊಡೆಯುವುದು ಸುಲಭವಲ್ಲ. ಕಾರಣ, ಚೆನ್ನೈಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವ. ಆಲ್ರೌಂಡರ್‌ ಗಳ ಪಡೆಯನ್ನೇ ಹೊಂದಿದೆ. ಈ ನಿಟ್ಟಿನಲ್ಲಿ, ಬ್ಯಾಟಿಂಗ್ ನಲ್ಲಿ ರನ್‌ ಮಾತ್ರವಲ್ಲದೇ, ಸಂಘಟಿತ ಬೌಲಿಂಗ್ ಅಗತ್ಯವಿದೆ. ಟೀಂ ಇಂಡಿಯಾ ಟಿ೨೦ ತಂಡದ ಸದಸ್ಯರಾಗಿರುವ ಶ್ರೇಯಸ್ ಅಯ್ಯರ್‌,
ಧೋನಿ ಬಳಗಕ್ಕೆ ಕಡಿವಾಣ ಹಾಕಲು ವಿಶೇಷ ಯೋಜನೆ ರೂಪಿಸಲಿದೆ. ಇತ್ತ ಧೋನಿ, ಕಳೆದ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಆಡಿರುವುದು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ.

ಸಂಭಾವ್ಯ ತಂಡ ಇಂತಿದೆ.
ಚೆನ್ನೈ ಸೂಪರ್‌ ಕಿಂಗ್ಸ್
ಶೇನ್ ವಾಟ್ಸನ್, ಮುರಳಿ ವಿಜಯ್, ಫಾಫ್ ಡು ಪ್ಲೆಸಿಸ್‌, ಋತುರಾಜ್ ಗಾಯಕ್ವಾಡ್, ಮಹೇಂದ್ರ ಸಿಂಗ್ ಧೋನಿ (ನಾ/ಕೀ), ಸ್ಯಾಮ್ ಕುರ‍್ರನ್, ಕೇದಾರ್‌ ಜಾಧವ್, ರವೀಂದ್ರ ಜಡೇಜಾ, ಪಿಯೂಶ್ ಚಾವ್ಲಾ, ದೀಪಕ್ ಚಹರ್‌, ಲುಂಗಿ ಎನ್‌ಜಿಡಿ.

ಡೆಲ್ಲಿ ಕ್ಯಾಪಿಟಲ್ಸ್
ಶಿಖರ್‌ ಧವನ್‌, ಪೃಥ್ವಿ ಶಾ, ಶಿಮ್ರೋನ್ ಹೇಟ್ಮೇರ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಮಾರ್ಕಸ್‌ ಸ್ಟೋಯಿನಿಸ್, ಅಕ್ಷರ್‌ ಪಟೇಲ್‌, ರವಿಚಂದ್ರನ್ ಅಶ್ವಿನ್‌/ಅಮಿತ್ ಮಿಶ್ರಾ, ಕಗಿಸೋ ರಬಾಡಾ, ಎನ್ರಿಚ್ ನೋರಟ್ಜೆ. ಮೋಹಿತ್ ಶರ್ಮಾ/ಆವೇಶ್ ಖಾನ್‌.