Saturday, 23rd November 2024

ಕ್ಲೋರೋಫಾರಂ ಮತ್ತು ಇಂಗ್ಲೆಂಡಿನ ರಾಣಿ

ಹಿಂದಿರುಗಿ ನೋಡಿದಾಗ

ಕ್ಲೋರೋಫಾರಂ! ೭೦-೮೦ರ ದಶಕದ ಭಾರತೀಯ ಚಲನಚಿತ್ರಗಳನ್ನು ನೆನಪಿಸಿಕೊಳ್ಳಿ. ನಾಯಕಿಯನ್ನು ಖಳನಾಯಕ ಅಪಹರಿ ಸಬೇಕು. ಅದಕ್ಕೆ ಆತ ಹಿಂದಿನಿಂದ ಬಂದು, ನಾಯಕಿಯ ಮುಖಕ್ಕೆ ಕರವಸವನ್ನು ಒತ್ತಿಹಿಡಿದಾಗ ಆಕೆ ಕೊಸರಾಡುತ್ತಲೇ ಪ್ರಜ್ಞೆ ತಪ್ಪುತ್ತಾಳೆ. ಆಗ ಖಳನಾಯಕ ಅಟ್ಟಹಾಸ ಮಾಡುತ್ತಿರುವಂತೆಯೇ, ಆತನ ಸಹಚರರು ನಾಯಕಿಯನ್ನು ಕಾರಿನೊಳಗೆ ಹಾಕಿ ಕೊಂಡು ಹೊರಡುತ್ತಾರೆ!

ಇಂಥ ದೃಶ್ಯ ಭಾರತೀಯ ಚಿತ್ರಗಳಲ್ಲಿ ಮಾತ್ರವಲ್ಲ, ವಿದೇಶಿ ಚಿತ್ರಗಳಲ್ಲೂ ಸಾಮಾನ್ಯ ವಾಗಿತ್ತು. ಪತ್ತೆದಾರಿ ಕಥೆ ಕಾದಂಬರಿಗಳಲ್ಲೂ ಇಂಥ ದೃಶ್ಯಗಳ ವಿವರಣೆಗಳು ಇರು ತ್ತಿದ್ದವು. ಚಿತ್ರ ನಿರ್ದೇಶಕರು ಹಾಗೂ ಪತ್ತೆದಾರಿ ಕಾದಂಬರಿ ಲೇಖಕರು ಇಂಥ ದೃಶ್ಯ ಗಳನ್ನು ರೂಪಿಸಲು ಕಾರಣವಿದೆ. ೧೮೯೪ರಲ್ಲಿ ಜೋಸೆಫ್ ಹ್ಯಾರಿಸ್ ಎಂಬಾತ ಕ್ಲೋರೋಫಾರಂ ಬಳಸಿ ದಾರಿಹೋಕರನ್ನು ಲೂಟಿಮಾಡುತ್ತಿದ್ದ. ಎಚ್.ಎಚ್. ಹೋಮ್ಸ್ ಎಂಬ ಸರಣಿ ಕೊಲೆಗಾರ ತಾನು ಕೊಂದ ಎಲ್ಲ ಮಹಿಳೆಯರ ಮುಖಕ್ಕೆ ಕ್ಲೋರೋ ಫಾರಂ ಕರವಸವನ್ನೇ ಒತ್ತಿಹಿಡಿದು ಹತ್ಯೆಗೈದಿದ್ದ.

೧೯೦೦ರಲ್ಲಿ ಅಮೆರಿಕದ ಉದ್ಯಮಿ ವಿಲಿಯಂ ಮಾರ್ಶ್ ರೈಸ್‌ನನ್ನು ಕೊಲ್ಲುವ ಮೊದಲು ಕ್ಲೋರೋಫಾರಂ ಬಳಸಿದ್ದರು. ಈ ಪ್ರಕರಣಗಳೆಲ್ಲ ನಿಜವೆ! ಆದರೆ ಈ ನೈಜ ಪ್ರಕರಣ ಗಳಿಗೂ, ಚಲನಚಿತ್ರಗಳಲ್ಲಿ ತೋರಿಸುವ ದೃಶ್ಯಗಳಿಗೂ ಪ್ರಮುಖ ವ್ಯತ್ಯಾಸವಿದೆ. ಕ್ಲೋರೋಫಾರಂ ಬಳಸಿ ವ್ಯಕ್ತಿಯ ಪ್ರe ತಪ್ಪಿಸಬೇಕಾದರೆ, ಆತ ಕ್ಲೋರೋಫಾರಂ ಅನ್ನು ನಿರಂತರ ೫ ನಿಮಿಷಗಳವರೆಗಾದರೂ ಸೇವಿಸಲೇಬೇಕು. ಚಿತ್ರಗಳಲ್ಲಿ ತೋರಿಸುವ ಹಾಗೆ, ಮುಖಕ್ಕೆ ಕರವಸ ಹಿಡಿಯುತ್ತಿದ್ದಂತೆ ಯಾರೂ ಪ್ರಜ್ಞೆ ಕಳೆದುಕೊಳ್ಳುವುದಿಲ್ಲ.

೧೮೬೫ರಲ್ಲಿ ವಿಶ್ವವಿಖ್ಯಾತ ‘ಲ್ಯಾನ್ಸೆಟ್’ ವೈದ್ಯಕೀಯ ನಿಯತಕಾಲಿಕವು, ಯಾರಾದರೂ ಕ್ಲೋರೋಫಾರಂ ಬಳಸಿ ತಕ್ಷಣವೇ ಒಬ್ಬ ವ್ಯಕ್ತಿಯ ಪ್ರಜ್ಞೆ ತಪ್ಪಿಸುವುದರ ಪ್ರಾತ್ಯಕ್ಷಿಕೆ ತೋರಿಸುವುದಾದರೆ, ಅವರಿಗೆ ‘ಪರ್ಮನೆಂಟ್ ಸೈಂಟಿಫಿಕ್ ರೆಪ್ಯುಟೇಶನ್’ ನೀಡುವು ದಾಗಿ ಘೋಷಿಸಿತು. ಈ ಶಾಶ್ವತ ಕೀರ್ತಿಯನ್ನು ತಮ್ಮದಾಗಿಸಿಕೊಳ್ಳಲು ಯಾರೂ ಮುಂದೆ ಬರಲಿಲ್ಲ ಎನ್ನುವುದು ಬೇರೆ ಮಾತು. ಕ್ಲೋರೋಫಾರಂ ಅಥವಾ ಟ್ರೈಕ್ಲೋರೋಮೀಥೇನ್ (ಟಿಸಿಎಂ), ರಾಸಾಯನಿಕ ಪ್ರಯೋಗಾಲಯಗಳಲ್ಲಿರುವ ಒಂದು ಸರ್ವ ಸಾಮಾನ್ಯ ದ್ರಾವಕ (ಸಾಲ್ವೆಂಟ್). ಇದು ಬಣ್ಣ ರಹಿತ, ವೇಗವಾಗಿ ಆವಿಯಾಗಬಲ್ಲುದು, ಜತೆಗೆ ಹಿತವಾದ ವಾಸನೆ ಯುಳ್ಳದ್ದು.

೧೮೩೦ರಲ್ಲಿ ಫ್ರೆಂಚ್ ರಸಾಯನ ವಿಜ್ಞಾನಿ ಯುಜೀನ್ ಸೌಬೀರಿಯಾನ್, ಜರ್ಮನಿಯ ಔಷಧ ವಿಜ್ಞಾನಿ ಜೊಹಾನ್ ಜೇಕಬ್ ಪಾಲ್ ಮೋಲ್ಡೆನ್ಹಾವರ್ ಮತ್ತು ವಿಜ್ಞಾನಿ ಜಸ್ಟಸ್ ವಾನ್ ಲೀಬಿಗ್, ೧೮೩೧ರಲ್ಲಿ ಅಮೆರಿಕದ ವೈದ್ಯ ಸ್ಯಾಮ್ಯುಯಲ್ ಗುಥ್ರಿ ತಂತಮ್ಮ ಪ್ರಯೋಗಾಲಯ ಗಳಲ್ಲಿ ಕ್ಲೋರೋಫಾರಂ ಅನ್ನು ಸ್ವತಂತ್ರವಾಗಿ ಸೃಜಿಸಿದರು ಎನ್ನಲಾಗಿದೆ. ಈ ಬಗ್ಗೆ ಮೊದಲು ಯುಜೀನ್ ಪ್ರಕಟಿಸಿದರೂ, ಕ್ಲೋರೋ-ರಂ ಅನ್ನು ಕಂಡುಹಿಡಿದ ಕೀರ್ತಿಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ವಿಜ್ಞಾನ ಇತಿಹಾಸಕಾರರಿಲ್ಲ ಒಮ್ಮತವಿಲ್ಲ.

೧೮೪೨ರಲ್ಲಿ ರಾಬರ್ಟ್ ಮಾರ್ಟಿಮರ್ ಗ್ಲೋವರ್ ಎಂಬ ಇಂಗ್ಲಿಷ್ ವೈದ್ಯ ಮೊದಲಬಾರಿಗೆ ಕ್ಲೋರೋಫಾರಮ್ಮಿನ ಅರಿವಳಿಕೆಯ ಗುಣವನ್ನು ಗಮನಿಸಿ ಪ್ರಚುರಪಡಿಸಿದ, ನಾಯಿಗಳ ಮೇಲೆ ಪ್ರಯೋಗಿಸಿ ಅವುಗಳ ಪ್ರಜ್ಞೆ ತಪ್ಪಿಸಿದ. ತನ್ನ ಅನಿಸಿಕೆಗೆ ಪ್ರಾಯೋಗಿಕ ಪುರಾವೆ ಒದಗಿಸಿದ. ಈ ಬಗ್ಗೆ ಪ್ರಬಂಧ ಬರೆದು ೧೮೪೭ರಲ್ಲಿ ಎಡಿನ್ಬರೋ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ. ಅವನಿಗೆ ‘ಹಾರ್ವೆಯನ್ ಚಿನ್ನದ ಪದಕ’ ಲಭಿಸಿತು.

ಸ್ಕಾಟಿಶ್ ಸೀರೋಗ ಹಾಗೂ ಪ್ರಸೂತಿತಂತ್ರ ವೈದ್ಯ ಜೇಮ್ಸ್ ಯಂಗ್ ಸಿಂಪ್ಸನ್ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ರಾಬರ್ಟ್ಲಿಸ್ಟನ್ ಎಂಬ ಶಸವೈದ್ಯರ ಬಳಿ ಕಲಿಯುತ್ತಿದ್ದ. ಸಿಂಪ್ಸನ್ ಜೀವಮಾನದಲ್ಲಿ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಯನ್ನು ನೇರವಾಗಿ ನೋಡುತಲಿದ್ದ ದಿನ. ಸ್ತನ ಛೇದನಕ್ಕೆ ಒಳಗಾಗಬೇಕಿದ್ದ ಮಹಿಳೆಯೊಬ್ಬಳನ್ನು ಶಸ್ತ್ರಚಿಕಿತ್ಸಾ ಮೇಜಿಗೆ ಚರ್ಮದ ಪಟ್ಟಿಗಳಿಂದ ಬಂಧಿಸಿದರು. ನಾಲ್ವರು ದಾಂಡಿಗರು ಆಕೆಯನ್ನು ಬಿಗಿಯಾಗಿ ಹಿಡಿದುಕೊಂಡರು. ಆಗೆಲ್ಲ ವಿಶ್ವಾಸಾರ್ಹ ಅರಿವಳಿಕೆ ದೊರೆಯು ತ್ತಿರಲಿಲ್ಲ, ರೋಗಿ ಸಂಪೂರ್ಣ ಎಚ್ಚರವಿದ್ದಾಗಲೇ ಶಸಚಿಕಿತ್ಸೆ ಮಾಡಬೇಕಿತ್ತು.

ಹಾಗಾಗಿ ಸಾಧ್ಯವಾದಷ್ಟು ತ್ವರಿತವಾಗಿ ಅದನ್ನು ಮುಗಿಸಬೇಕಿತ್ತು. ಲಿಸ್ಟನ್ ಮಿಂಚಿನ ವೇಗದಲ್ಲಿ ಆಕೆಯ ಸ್ತನವನ್ನು ಛೇದಿಸಿದ.
ಆಕೆಯ ಕೂಗು ಮುಗಿಲುಮುಟ್ಟಿ ರಕ್ತವು ಛಿಲ್ಲನೇ ಮೇಲಕ್ಕೆ ಹಾರಿತು. ಇದನ್ನು ಕಂಡು ಸಿಂಪ್ಸನ್ ಸ್ತಂಭಿತನಾದ. ಮಹಿಳೆಯ ಚೀರಾಟ ತೀವ್ರವಾಗುತ್ತಿರುವಂತೆಯೇ ಆಘಾತ ದಿಂದ ಚೇತರಿಸಿಕೊಂಡು ಶಸ್ತ್ರಚಿಕಿತ್ಸಾಲಯದಿಂದ ಹೊರ ಗೋಡಿದ. ಈ ಘಟನೆ ಅವನನ್ನು ನಿರಂತರ ಕಾಡಿತು. ವೈದ್ಯಕೀಯದ ಸಹವಾಸ ಬಿಟ್ಟು ಕಾನೂನು ವ್ಯಾಸಂಗ ಮಾಡಬಾರದೇಕೆ ಎಂದು ಯೋಚಿಸಿ ದರೂ ಕೊನೆಗೆ ವೈದ್ಯಕೀಯ ವನ್ನೇ ಮುಂದುವರೆಸಲು ನಿಶ್ಚಯಿಸಿ, ತನ್ನೆಲ್ಲ ಅಧ್ಯಾಪಕರ ಬಳಿ ‘ಸಮರ್ಥ ಅರಿವಳಿಕೆಯನ್ನು ಯಾಕಿನ್ನೂ ರೂಪಿಸಿಲ್ಲ?’ ಎಂದು ವಾದಿಸಿದ.

ಸಿಂಪ್ಸನ್ ವೈದ್ಯನಾಗುತ್ತಿರುವಂತೆಯೇ ಸಮರ್ಥ ಅರಿವಳಿಕೆ ರೂಪಿಸಿಲು ಇನ್ನಿಲ್ಲದಂತೆ ಶ್ರಮಿಸಿದ. ಕೊನೆಗೆ ‘ಮೆಸ್ಮರಿಸಂ’ ಕಲಿತು ರೋಗಿಯನ್ನು ಸುಷುಪ್ತಾವಸ್ಥೆಗೆ ಕಳುಹಿಸಿ ನೋವನ್ನು ತಡೆಯಬಹುದೇ ಎಂಬ ವಿಫಲಯತ್ನ ನಡೆಸಿದ. ಈ ನಡುವೆ ೧೮೪೬ರಲ್ಲಿ, ಅಮೆರಿಕದಲ್ಲಿ ಈಥರನ್ನು ಅರಿವಳಿಕೆಯಾಗಿ ಪ್ರಯೋಗಿಸಿ ಉತ್ತಮ ಫಲಿತಾಂಶ ಪಡೆದರೆಂಬ ಸುದ್ದಿ ಅವನನ್ನು ರೋಮಾಂಚನ ಗೊಳಿಸಿತು. ಆದರೆ ಇಂಗ್ಲೆಂಡಿನ ವೈದ್ಯರಿಗೆ ಈಥರಿನ ಬಗ್ಗೆ ಒಲವಿರಲಿಲ್ಲ. ಸ್ವಲ್ಪ ಹೆಚ್ಚೂ ಕಡಿಮೆಯಾದರೆ ಈಥರ್ ಸ್ಫೋಟಿಸು ತ್ತಿತ್ತು.

ಆದರೂ ಸಿಂಪ್ಸನ್ ಈಥರನ್ನು ಪ್ರಯೋಗಿಸಿದ. ಆದರೆ ಅದರ ಪ್ರಮಾಣಬದ್ಧ ಬಳಕೆಯ ವಿಧಾನ ಗೊತ್ತಿರದ ಕಾರಣ ಈ ಯತ್ನ ದಲ್ಲಿ ಸೋತ. ಈಥರ್ ಅರಿವಳಿಕೆಯು ಅನುಕೂಲಕ್ಕಿಂತ ಅನಾನುಕೂಲತೆಗಳನ್ನೇ ಹೊಂದಿದೆ ಎಂದು ಅವನಿಗನಿಸಿತು. ಹಾಗಾಗಿ ಈಥರನ್ನು ಮೀರಿಸಬಲ್ಲ ಮತ್ತೊಂದು ಅರಿವಳಿಕೆಗಾಗಿ ಕಾಯಲಾರಂಬಿಸಿದ. ಗ್ಲೋವರ್‌ನ ಪ್ರಬಂಧವನ್ನು ಓದಿದ ಸಿಂಪ್ಸನ್‌ಗೆ ಒಳಗೊಳಗೇ ಸಂತಸವಾಯಿತು.

೧೦ ನವೆಂಬರ್, ೧೮೪೭. ಎಡಿಬರೋದಲ್ಲಿ ನಡೆಯುತ್ತಿದ್ದ ವೈದ್ಯರು ಮತ್ತು ಶಸ್ತ್ರವೈದ್ಯ ತಜ್ಞರ ಸಭೆಯಲ್ಲಿ ಸಿಂಪ್ಸನ್ ತಾನು ‘ಕ್ಲೋರೋಫಾರಂ’ ಎಂಬ ಅತಿಪ್ರಬಲ ಅರಿವಳಿಕೆಯನ್ನು ಕಂಡುಹಿಡಿದಿರುವುದಾಗಿ ಹೇಳಿದ. ಆದರೆ ತಾನು ಗ್ಲೋವರ್‌ನ ಪ್ರಬಂಧ ಓದಿದ್ದನ್ನು ಹೇಳದೆ, ತಾನು, ತನ್ನಿಬ್ಬರು ಸಹವೈದ್ಯರು ಕ್ಲೋರೋಫಾರಂ ಸೇವಿಸಿ, ಅದರ ಅರಿವಳಿಕೆ ಗುಣವನ್ನು ಪತ್ತೆ ಹಚ್ಚಿರುವು ದಾಗಿ ಹೇಳಿಕೊಂಡ. ಅದರ ಮರುದಿನ, ಎಡಿನ್ಬರೋದ ಫ್ರಾನ್ಸಿಸ್ ಬ್ರಾಡಿ ಇಮ್ಲಾಚ್ ಎಂಬ ದಂತವೈದ್ಯ, ಸಹೋದ್ಯೋಗಿ ಜೇಮ್ಸ್ ಡಾರ್ಸಿ ಮಾರಿಸನ್‌ನ ಹುಳುಕುಹಲ್ಲನ್ನು ಕ್ಲೋರೋಫಾರಂ ಬಳಸಿ ಯಾವುದೇ ನೋವಿಲ್ಲದೆ ಕಿತ್ತ.

ಮೇ ೧೮೪೮. ರಾಬರ್ಟ್ ಹಾಲ್ಲಿಡೆ ಗನ್ನಿಂಗ್, ಎಡಿನ್ಬ ರೋದ ವೈದ್ಯಕೀಯ-ಶಸವೈದ್ಯಕೀಯ ತಜ್ಞರ ಸಭೆಯಲ್ಲಿ, ತಾನು ಕ್ಲೋರೋ ಫಾರಂ ಬಳಸಿ, ಮೊಲಗಳ ಮೇಲೆ ನಿರಂತರ ಪ್ರಯೋಗ ನಡೆಸಿ, ಗ್ಲೋವರ್‌ನ ಪ್ರಬಂಧದಲ್ಲಿ ಮಂಡಿಸಿರುವುದು ಸತ್ಯವೆಂದೂ, ಸಿಂಪ್ಸನ್ ಹೇಳಿಕೆಯಲ್ಲಿ ಹುರುಳಿಲ್ಲವೆಂದೂ ಪ್ರಾತ್ಯಕ್ಷಿಕೆ ನೀಡಿದ. ಅಲ್ಲಿದ್ದ ವೈದ್ಯರು ಈ ಮಾತನ್ನು ಪುರಸ್ಕರಿಸಿ, ಕ್ಲೋರೋ-ರಂ ಅನ್ನು ಅರಿವಳಿಕೆಯಾಗಿ ಬಳಸಬಹುದೆಂದು ತೋರಿಸಿದ ಕೀರ್ತಿ ಗ್ಲೋವರಿಗೆ ಸಲ್ಲಬೇಕೆಂದು ಒಪ್ಪಿಕೊಂಡರು ಹಾಗೂ ಸಿಂಪ್ಸನ್‌ಗೆ ಛೀಮಾರಿ ಹಾಕಿದರು. ಸಿಂಪ್ಸನ್ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅವನು ಎಡಿನ್ಬರೋ ವಿ.ವಿ.ಯಲ್ಲಿ ಪ್ರಸೂತಿತಂತ್ರ ವಿಭಾಗದ ಮುಖ್ಯಸ್ಥನಾಗಿದ್ದ ಹಾಗೂ ರಾಣಿ ವಿಕ್ಟೋರಿಯಾಳ ಖಾಸಗಿ ವೈದ್ಯನಾಗಿದ್ದ. ಹಾಗಾಗಿ ದೈನಂದಿನ ವೃತ್ತಿಯಲ್ಲಿ ಕ್ಲೋರೋಫಾರಂ ಅನ್ನು ಅರಿವಳಿಕೆಯಾಗಿ ಬಳಸಲಾರಂಭಿಸಿದ. ಈ ಬಗ್ಗೆ ಅಂದಿನ ವೈದ್ಯರು ತಕರಾರೆತ್ತಲಿಲ್ಲ, ಆದರೆ ಚರ್ಚ್ ಕ್ಯಾತೆ ತೆಗೆಯಿತು. ಪಾದ್ರಿಗಳು ಬೈಬಲ್ಲನ್ನು ಉಲ್ಲೇಖಿಸಿ, ‘ಹೆರಿಗೆಯಲ್ಲಿ ನಿಮ್ಮ ನೋವನ್ನು ಖಂಡಿತ ಹೆಚ್ಚಿಸುವೆನು; ನೋವಿನಲ್ಲಿ ನೀವು ಮಕ್ಕಳನ್ನು ಹೆರುತ್ತೀರಿ’ ಎಂದು ಕರ್ತನು ಹೇಳಿರುವಾಗ ನೀವು ಕೃತಕವಾಗಿ ನೋವು ನಿವಾರಿಸಿ ಹೆರಿಗೆ ಮಾಡಿಸುವುದು ತಪ್ಪು ಎಂದು ಸಾರ್ವ ಜನಿಕವಾಗಿ ಅರಿವಳಿಕೆ ವಿರುದ್ಧ ಪ್ರಚಾರ ಮಾಡಿದರು.

ಆಗ ಸಿಂಪ್ಸನ್ ಅದೇ ಬೈಬಲ್ಲನ್ನು ಉದಾಹರಿಸಿ, ‘ಆದುದರಿಂದ ಕರ್ತನು ಮನುಷ್ಯನಿಗೆ ಗಾಢನಿದ್ರೆ ನೀಡಿದ ಮತ್ತು ಮಲಗಿದ್ದಾಗ ಅವನ ಪಕ್ಕೆಲುಬುಗಳಲ್ಲಿ ಒಂದನ್ನು ತೆಗೆದು ಆ ಭಾಗವನ್ನು ಮಾಂಸದಿಂದ ಮುಚ್ಚಿದ’ ಎಂದು ಹೇಳಿರುವಾಗ ನಾವು ಅರಿವಳಿಕೆ ಬಳಸಿದರೆ ಏನೂ ತಪ್ಪಿಲ್ಲವೆಂದು ಪ್ರತಿವಾದಿಸಿದ. ಬ್ರಿಟನ್ನಿನ ರಾಣಿ ಅಲೆಗ್ಸಾಂಡ್ರಿನ ವಿಕ್ಟೋರಿಯಾ ಗರ್ಭವತಿ ಯಾದಳು. ಅದು ಆಕೆಯ ೮ನೇ ಗರ್ಭ. ಬ್ರಿಟನ್ನಿನ ಹಲವು ವೈದ್ಯರು ಹೆರಿಗೆಯಲ್ಲಿ ಕ್ಲೋರೋಫಾರಂ ಅನ್ನು ಅರಿವಳಿಕೆಯಾಗಿ ಬಳಸುವ ವಿಚಾರ ಆಕೆಗೆ ತಿಳಿದಿತ್ತು. ಹಾಗಾಗಿ ತನ್ನ ಪ್ರಸವದಲ್ಲೂ ಕ್ಲೋರೋಫಾರಂ ಬಳಸುವಂತೆ ಸೂಚಿಸಿದಳು.

ಇಂಗ್ಲಿಷ್ ವೈದ್ಯ ಜಾನ್ ಸ್ನೋ ಕ್ಲೋರೋಫಾರಂ ನೀಡಿದ. ಹೆರಿಗೆಯು ನೋವಿಲ್ಲದೆ ಸುಸೂತ್ರವಾಗಿ ನಡೆಯಿತು. ಏಪ್ರಿಲ್ ೭, ೧೮೫೩ರಂದು ಪ್ರಿನ್ಸ್ ಲಿಯೋಪೋಲ್ಡ್ ಹಾಗೂ ಏಪ್ರಿಲ್ ೧೪, ೧೮೫೭ರಂದು ಪ್ರಿನ್ಸೆಸ್ ಬಿಯಾಟ್ರೀಸ್ ಇವರಿಗೆ ರಾಣಿ ಸುಖಜನ್ಮ
ನೀಡಿದಳು. ರಾಣಿಯೇ ಅರಿವಳಿಕೆ ಪಡೆದು ನೋವುರಹಿತ ಹೆರಿಗೆ ಮಾಡಿಸಿಕೊಂಡಿದ್ದನ್ನು ನೋಡಿ, ಚರ್ಚ್ ಸುಮ್ಮನಾಗ ಲೇಬೇಕಾಯಿತು. ಯುರೋಪಿನಲ್ಲಿ ಅರಿವಳಿಕೆಯಾಗಿ ಕ್ಲೋರೋಫಾರಂ ಅಪಾರ ಜನಪ್ರಿಯವಾಯಿತು.

ಯೂರೋಪಿಯನ್ನರು ಸುಮಾರು ೩೦,೦೦೦ ಶಸ್ತ್ರಕ್ರಿಯೆಗಳನ್ನು ನಡೆಸಿದರು. ಅಮೆರಿಕನ್ನರೂ ಕ್ರಮವಾಗಿ ಈಥರನ್ನು ಬಿಟ್ಟು ಕ್ಲೋರೋಫಾರಂ ಅನ್ನು ಬಳಸಲು ಶುರುಮಾಡಿದರು. ಅವರೂ ಸುಮಾರು ೮೦,೦೦೦ ಶಸ್ತ್ರಚಿಕಿತ್ಸೆಗಳನ್ನು ಮಾಡಿದ ಮೇಲೆ,
ಕ್ಲೋರೋಫಾರಂನ ದುಷ್ಪರಿಣಾಮಗಳ ಬಗ್ಗೆ ಅವರ ಗಮನ ಹೆಚ್ಚಾಗಲಾರಂಭಿಸಿತು. ಕ್ಲೋರೋಫಾರಂ ಅನ್ನು ಸೇವಿಸಿದವರಲ್ಲಿ ‘ಸಡೆನ್ ಸ್ನಿಫರ್ಸ್ ಡೆತ್’ ಕಾಣಿಸಿಕೊಳ್ಳಲಾರಂಭಿಸಿತು.

ಅಂದರೆ ಕ್ಲೋರೋ-ರಂ ಅನಿಲವನ್ನು ಹೀರಿಕೊಳ್ಳುತ್ತಿರುವಂತೆಯೇ ಅವರ ಹೃದಯ ಮಿಡಿತದಲ್ಲಿ ವಿಪರೀತ ವೈಪರೀತ್ಯ ಕಂಡು ಬಂದು ಹಠಾತ್ತನೇ ಸಾಯಲಾರಂಭಿಸಿದರು. ಹಾಗಾಗಿ ವೈದ್ಯರಲ್ಲಿ ಕ್ಲೋರೋಫಾರಂ ಪರ-ವಿರೋಧ ಚರ್ಚೆಗಳು ತೀವ್ರ ವಾದವು. ಕೊನೆಗೆ ೧೯೧೧ರಲ್ಲಿ ಕ್ಲೋರೋಫಾರಂ ಅನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿದರು. ಕ್ಲೋರೋಫಾರಂ ಹಠಾತ್ ಸಾವನ್ನು ಉಂಟುಮಾಡಬಲ್ಲದು ಎಂಬ ಋಜುವಾತು ನೀಡಿದರು.

ಆದರೂ ಶೇ.೮೦-೯೫ರಷ್ಟು ಬ್ರಿಟಿಷ್ ವೈದ್ಯರು ಕ್ಲೋರೋಫಾರಂ ಬಳಕೆಯನ್ನು ಮುಂದುವರಿಸಿದರು. ಕೊನೆಗೆ ಕಿಲಿಯನ್ ಮತ್ತು ಗಾಸ್ ಎನ್ನುವವರು ಕ್ಲೋರೋಫಾರಂ ಅಪಾಯಕಾರಿ ಎಂಬ ಮಾಹಿತಿಯನ್ನು ಅಂಕಿ-ಅಂಶಗಳ ಸಮೇತ ೧೯೩೪ರಲ್ಲಿ ಮಂಡಿಸಿ ದರು. ಆಗ ಜಗತ್ತಿನಾದ್ಯಂತ ಕ್ಲೋರೋ-ರಂ ಅನ್ನು ಅರಿವಳಿಕೆಯಾಗಿ ಬಳಸುವುದನ್ನು ನಿಲ್ಲಿಸಲಾಯಿತು. ಅದೇ ವೇಳೆಗೆ ಹೆಕ್ಸಾಬಾರ್ಬಿಟಾಲ್ ಎನ್ನುವ ಸುರಕ್ಷಿತ ಅರಿವಳಿಕೆ ದೊರೆಯಲಾರಂಭಿಸಿತ್ತು. ಹಾಗಾಗಿ ವೈದ್ಯರು ಕ್ಲೋರೋಫಾರಂ ಅರಿವಳಿಕೆ
ಯನ್ನು ಸದಾ ಕಾಲಕ್ಕೂ ಮರೆತರು.