Saturday, 23rd November 2024

ಎರಡು ವರ್ಷಗಳಿಂದ ಲಾಗಿನ್ ಮಾಡದ ವೈಯಕ್ತಿಕ ಗೂಗಲ್ ಖಾತೆ ಡಿಲೀಟ್…?

ವದೆಹಲಿ: ಗೂಗಲ್ ಕಂಪನಿಯು ತನ್ನ ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳನಲ್ಲಿ ಅಪ್ ಡೇತ್ ಮಾಡಿದೆ.

ಈ ಅಪ್ ಡೇಟ್ ನಿಯಮಗಳಂತೆ ಮುಂಬರುವ ಡಿಸೆಂಬರ್ ನಲ್ಲಿ ಕಳೆದ ಎರಡು ವರ್ಷಗಳಿಂದ ಒಮ್ಮೆಯೂ ಲಾಗಿನ್ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡಲು ಆರಂಭಿಸಲಾಗುತ್ತಿದೆ.

ಇನ್ನು ಮುಂದೆ ಕನಿಷ್ಠ ಎರಡು ವರ್ಷಗಳಿಂದ ಬಳಕೆ ಮಾಡದೇ ಖಾತೆಗಳನ್ನು ನಿರಂತವಾಗಿ ರದ್ದುಪಡಿಸಲಾಗುತ್ತದೆ. ಈ ಮೂಲಕ ಗೂಗಲ್ ಶಾಶ್ವತವಾಗಿ ನಿಮ್ಮ ಡಿಲೀಟ್ ಮಾಡಲಿದೆ.

ಇನ್ನೂ ವೈಯಕ್ತಿಕ ಗೂಗಲ್ ಖಾತೆಗಳು ಅಂದರೇ, ಜಿ-ಮೇಲ್ ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್, ಗೂಗಲ್ ಪೋಟೋ ಇತ್ಯಾದಿ ಮಾತ್ರ ಡಿಲೀಟ್ ಆಗಲಿವೆ. ಸಾಂಸ್ಥಿತ, ಅಂದರೆ ಕಂಪನಿಗಳು ಅಥವಾ ಶಾಲೆ ಇತ್ಯಾದಿ ಸಂಸ್ಥೆಗಳು ಹೊಂದಿರುವ ಗೂಗಲ್ ಖಾತೆಗಳು ಡಿಲೀಟ್ ಆಗುವುದಿಲ್ಲ.