ಕೊಪ್ಪಳ: ಜಗತ್ತಿನಲ್ಲಿ ಕೇವಲ ಒಬ್ಬ ವ್ಯಕ್ತಿಯಿಂದ ರೇಪ್ ಮಾಡಲು ಸಾಧ್ಯವೇ ಇಲ್ಲ. ಗಟ್ಟುಳ್ಳ ಗಂಡು ಮಗ ಇದ್ದರೂ ಬಾ ಅನ್ನು ರೇಪ್ ಮಾಡಲಿ. ನಾನೂ ನೋಡುತ್ತೇನೆ ಎಂದಿರೋ ಮಾಜಿ ಶಾಸಕ ಅಮರೇಗೌಡ ಭಯ್ಯಾಪೂರ ಅವರ ಆಡಿಯೋ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕುಷ್ಟಗಿ ತಾಲೂಕಿನ ಎಂ.ಗುಡದೂರು ಗ್ರಾಮದ ಯಮನೂರಪ್ಪ ಗುಡಿಹಿಂದಲ ಎಂಬುವರ ಜೊತೆಗೆ ಮಾತನಾಡಿದ್ದು ಎನ್ನಲಾದ 5.55 ನಿಮಿಷದ ಆಡಿಯೊಇ ವೈರಲ್ ಆಗಿದೆ. ಯಮನೂರಪ್ಪ ಮಾಜಿ ಶಾಸಕರಿಗೆ ಕರೆ ಮಾಡಿ, ತಮ್ಮ ತಮ್ಮನ ಪತ್ನಿ ಬಸಮ್ಮ ಎಂಬುವರ ಮೇಲೆ ಅದೇ ಗ್ರಾಮದ ಕಾಂಗ್ರೆಸ್ ಮುಖಂಡ ಸಂಗನಗೌಡ ಎಂಬಾತ ಅತ್ಯಾಚಾರ ಮಾಡಿದ್ದೇನೆ. ನಮಗೆ ನೀವು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡುವುದರೊಂದಿಗೆ ಫೋನ್ ಸಂಭಾಷಣೆ ಆರಂಭ ಆಗುತ್ತದೆ. ಫೋನ್ ಮಾಡಿರುವ ವ್ಯಕ್ತ ಜೊತೆಗೆ ಸುಧೀರ್ಘವಾಗಿ ಮಾತನಾಡಿರುವ ಮಾಜಿ ಶಾಸಕರು ನಡುವೆ ಇಂಥ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ.
ವೈರಲ್ ಆಗಿರೋ ಆಡಿಯೋದ ಒಟ್ಟು ಭಾಗದ 2.13 ನಿಮಿಷದಿಂದ 3.30 ವರೆಗೆ ಇಂಥ ಆಕ್ಷೇಪಾರ್ಹ ಸಂಭಾಷಣೆ ಇದೆ. ನೀವು ಹೇಳಿದ ಕೆಲಸ ಏನಾದರೂ ಮಾಡೋಣ ಇದು ಒಂದು ಬಾಂಧವ್ಯ ಹಾಳು ಮಾಡಿಬಿಡುತ್ತೆ. ಆ ಮಹಿಳೆ ಬೀಗರ ಮನೆಗೆ ಹೋದರೆ ಎಲ್ಲರೂ ಪ್ರಶ್ನೆ ಮಾಡ್ತಾರೆ ಎಂದು ಹೇಳಿದ್ದಾರೆ.
‘ರೇಪ್ ಆಗುವಾಗ ಒದರ್ಯಾಡಿ ಚೀರ್ಯಾಡಿ ಮಾಡಬೇಕಿತ್ತು, ಒಂದೇ ಕೈನಲ್ಲಿ ಚಪ್ಪಾಳೆ ಆಗತ್ತೇನೊ ಯನೂರಪ್ಪ’ ಎಂದು ಪ್ರಶ್ನಿಸಿದ್ದಾರೆ.
‘ಆಗತ್ತೆನು? ಮತ್ತೆ ಹೆಂಗ್ ರೇಪ್ ಆಗತ್ತೆ? ಇದು ಸಾದ್ಯನಾ? ಒಬ್ಬ ಗಟ್ಟುಳ್ಳವನ್ನೇ ಕರಕೊಂಡು ಬಾ ನಿನು. ಯಾವನರ ಇರಲಿ. ಅವನ ಬಳಿ ಒಬ್ಬ ಹೆಣ್ಮಗ ಳನ್ನ ಕಳಸ್ತೆನಿ ಅವಾ ರೇಪ್ ಮಾಡಲಿ. ಅವ ಹೆಂಗ್ ಮಾಡ್ತಾನೆ, ರೇಪ್ ಮಾಡಿ ತೋರಿಸಲಿ. ಅದು ಸಾಧ್ಯ ಇಲ್ಲ ಎಂದಿದ್ದಾರೆ.
‘ಇವೆಲ್ಲ ಕಥೆ ಬೇಡ. ಸುಮ್ನೆ ಮರ್ಯಾದಿ ಕಳ್ಕೊಂಡು ಮನಿಗೆ ಹೊಕ್ಕಿರಿ ನೀವು. ರೇಪ್ ಆಗಬೇಕಾದ್ರ ಮಿನಿಮಮ್ ತ್ರೀ ಪೋರ್ ಮೆಂಬರ್ ಬೇಕಲ್ಲಿ. ಒಬ್ಬಾಕಿನ ರೇಪ್ ಮಾಡಬೇಕಾದ್ರ. ಒಬ್ಬಾಕಿನ ಒಬ್ಬಾವನ ರೇಪ್ ಮಾಡಬೇಕಾದ್ರ ಈ ಜಗತ್ತಿನ್ಯಾಗ ಯಾವನಿಂದ… ಅಲ್ಲ… ಭ್ರಹ್ಮ ಬಂದ್ರೂ ಸಾದ್ಯ ಇಲ್ಲ’ ಎಂದು ಹೇಳಿದ್ದಾರೆ.
ಆಗ ಸಂತ್ರಸ್ತನ ಸಂಬಂಧಿ ‘ನಾವು ಸುಳ್ಳ ಹೇಳಿದಂಗೆ ಇದು ನಿಮಗೆ ಎಂದು ಪ್ರಶ್ನೆ ಮಾಡಿದ್ದಾನೆ.
ಆಗ ಮಾತು ಮುಂದುವರೆಸುವ ಮಾಜಿ ಶಾಸಕರು ‘ಹೌದು ಮತ್ತ ಸುಳ್ಳ ಇದ, ನನಗ ಪ್ರೂವ್ ಮಾಡಿ ಕೊಡ ಇದನ್ನ ಎಂದಿದ್ದಾರೆ.